ವಿರಾಟ್ ಕೊಹ್ಲಿ vs ಸಚಿನ್ ತೆಂಡೂಲ್ಕರ್: ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್ ಹೊಡೆದವರಾರು?

Published : May 12, 2025, 07:22 PM IST

ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇಬ್ಬರೂ ಭಾರತೀಯ ಕ್ರಿಕೆಟ್‌ನ ದಿಗ್ಗಜರು. ಮಾಸ್ಟರ್ ಬ್ಲಾಸ್ಟರ್ 2013 ರಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಈಗ ಮಾಡ್ರನ್ ಮಾಸ್ಟರ್ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ಇಬ್ಬರ ನಡುವೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ್ದು ಯಾರು?  

PREV
17
ವಿರಾಟ್ ಕೊಹ್ಲಿ vs ಸಚಿನ್ ತೆಂಡೂಲ್ಕರ್: ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್ ಹೊಡೆದವರಾರು?

ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ: ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಷಯ ತಿಳಿಸಿದರು. ಈ ಮೂಲಕ ಅವರ 14 ವರ್ಷಗಳ ಅದ್ಭುತ ವೃತ್ತಿಜೀವನದ ಒಂದು ಭಾಗ ಇಂದಿಗೆ ಅಂತ್ಯಗೊಂಡಿದೆ.

27

ಸಚಿನ್ ಜೊತೆ ಹೋಲಿಕೆ: ವಿರಾಟ್ ಕೊಹ್ಲಿ ಅವರನ್ನು ಯಾವಾಗಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆ ಹೋಲಿಸಲಾಗುತ್ತದೆ. ಸಚಿನ್ ಅವರಿಗೆ ಮಾಸ್ಟರ್ ಬ್ಲಾಸ್ಟರ್ ಎಂದರೆ ವಿರಾಟ್‌ಗೆ ಮಾಡ್ರನ್ ಮಾಸ್ಟರ್ ಎಂದು ಕರೆಯುತ್ತಾರೆ. ಈ  ಇಬ್ಬರೂ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ.

37

ವಿರಾಟ್ ಟೆಸ್ಟ್ ದಾಖಲೆ: ವಿರಾಟ್ ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 210 ಇನ್ನಿಂಗ್ಸ್‌ಗಳನ್ನು ಆಡಿದ್ದು, ಇದರಲ್ಲಿ 46.85 ಸರಾಸರಿಯಂತೆ 9,230 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 254* ಆಗಿದೆ. ಇದರಲ್ಲಿ 30 ಶತಕ ಮತ್ತು 31 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

47

ಸಚಿನ್ ಟೆಸ್ಟ್ ದಾಖಲೆ: ಸಚಿನ್ ತೆಂಡೂಲ್ಕರ್ 200 ಟೆಸ್ಟ್‌ಗಳಲ್ಲಿ 329 ಇನ್ನಿಂಗ್ಸ್‌ ಆಡಿದ್ದು, ಇದರಲ್ಲಿ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. 51 ಶತಕ ಮತ್ತು 68 ಅರ್ಧಶತಕ ಬಾರಿಸಿದ್ದಾರೆ. ಇವರ ಗರಿಷ್ಠ ಸ್ಕೋರ್ 248 ಆಗಿದೆ.

57

ವಿರಾಟ್‌ನ ಟೆಸ್ಟ್ ಸಿಕ್ಸರ್‌ಗಳು: ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿ ಜೀವನದಲ್ಲಿ 30 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.  ಮತ್ತು 1,027 ಬೌಂಡರಿಗಳನ್ನು ಹೊಡೆದಿದ್ದಾರೆ. ವಿರಾಟ್ ಟೆಸ್ಟ್ ಆಡುವಾಗ ಬೌಂಡರಿಗಳಿಗಿಂತ ಹೆಚ್ಚಾಗಿ ಸಿಂಗಲ್ ಮತ್ತು 2 ರನ್‌ಗಳನ್ನು ಓಡುವುದನ್ನು ಹೆಚ್ಚು ರೂಢಿಸಿಕೊಂಡಿದ್ದರು. ಕೊಹ್ಲಿ ಜೊತೆಗೆ ಟೆಸ್ಟ್ ಆಡುವಾಗ ಎದುರಾಳಿ ಬ್ಯಾಟ್ಸ್‌ಮನ್ ರನ್ನಿಂಗ್‌ನಿಂದಲೇ ಸುಸ್ತಾಗಿ ಹೋಗುತ್ತಿದ್ದರು.

67

ಸಚಿನ್‌ ಅವರ ಟೆಸ್ಟ್ ಸಿಕ್ಸರ್‌ಗಳು: ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 69 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸಿಕ್ಸರ್‌ಗಳ ವಿಷಯದಲ್ಲಿ ವಿರಾಟ್ ಸಚಿನ್‌ಗಿಂತ ಹಿಂದಿದ್ದಾರೆ. ಇನ್ನು ಸಚಿನ್ ವಿರಾಟ್‌ಗಿಂದ 77 ಟೆಸ್ಟ್ ಪಂದ್ಯಗಳನ್ನು ಹೆಚ್ಚಾಗಿ ಆಡಿದ್ದಾರೆ.

77

ಯಾವ ವಯಸ್ಸಿನಲ್ಲಿ ನಿವೃತ್ತಿ?
ವಿರಾಟ್ ಕೊಹ್ಲಿ 36 ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ವಿರಾಟ್ ಕೊಹ್ಲಿ ಮೈದಾನದಲ್ಲಿ ಟೆಸ್ಟ್‌ ಪಂದ್ಯಕ್ಕೆ ವಿದಾಯ ಹೇಳದೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಆದರೆ, ಸಚಿನ್ ತೆಂಡೂಲ್ಕರ್ 40 ನೇ ವಯಸ್ಸಿನಲ್ಲಿ ನಿವೃತ್ತರಾದರು. 16 ನವೆಂಬರ್ 2013 ರಂದು ವೆಸ್ಟ್ ಇಂಡೀಸ್ ವಿರುದ್ಧದ 200ನೇ ಟೆಸ್ಟ್‌ನಲ್ಲಿ ನಿವೃತ್ತಿ ಘೋಷಿಸಿದರು.

Read more Photos on
click me!

Recommended Stories