ಆಧುನಿಕ ಕ್ರಿಕೆಟ್‌ನ 6 ಬ್ಯಾಟ್ಸ್‌ಮನ್‌ಗಳ ಒಂದೊಂದು ದಾಖಲೆ ಮುರಿಯೋದು ಕನಸಿನ ಮಾತು..!

First Published | May 26, 2021, 4:41 PM IST

ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ಆಧುನಿಕ ಕ್ರಿಕೆಟ್‌ನ ಫ್ಯಾಬ್‌ 4 ಬ್ಯಾಟ್ಸ್‌ಮನ್‌ಗಳು ಎಂದು ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಸೂಪರ್‌ ಸ್ಟಾರ್ ಬ್ಯಾಟ್ಸ್‌ಮನ್‌ಗಳಾಗಿ ಬೆಳೆದು ನಿಂತಿದ್ದಾರೆ. 

ಈ ನಾಲ್ವರು ಬ್ಯಾಟ್ಸ್‌ಮನ್‌ಗಳ ಜತೆಗೆ ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಕೂಡಾ ತಾವೇನು ಕಮ್ಮಿಯಿಲ್ಲ ಎಂದು ತಮ್ಮ ಬ್ಯಾಟ್‌ ಮೂಲಕ ಅಬ್ಬರಿಸಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಈ ಆಟಗಾರರ ಹೆಸರಿನಲ್ಲಿರುವ ಒಂದೊಂದು ದಾಖಲೆಗಳನ್ನು ಸದ್ಯಕ್ಕಂತು ಕನಸಿನ ಮಾತು. ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

1. ರೋಹಿತ್ ಶರ್ಮಾ
ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಲು ಪರಿಶ್ರಮ ಪಡುತ್ತಿದ್ದರೆ, ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೂರು ಏಕದಿನ ದ್ವಿಶತಕ ಬಾರಿಸಿ ಅಬ್ಬರಿಸಿದ್ದಾರೆ. ಅದರಲ್ಲೂ ಶ್ರೀಲಂಕಾ ವಿರುದ್ದ ರೋಹಿತ್ ಶರ್ಮಾ ಬರೋಬ್ಬರಿ 264 ಚಚ್ಚಿದ್ದು, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿದೆ. ಈ ದಾಖಲೆ ಅಳಿಸಿ ಹಾಕುವುದು ಯಾವ ಬ್ಯಾಟ್ಸ್‌ಮನ್‌ಗೂ ಸುಲಭದ ಮಾತಲ್ಲ.
Tap to resize

2. ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಈಗಾಗಲೇ ಹಲವಾರು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿ ಅಪರೂಪದ ದಾಖಲೆಗಳ ಒಡೆಯರಾಗಿದ್ದಾರೆ. ಈ ಪೈಕಿ 2016-17ರಲ್ಲಿ ಸತತ 4 ಟೆಸ್ಟ್ ಪಂದ್ಯಗಳಲ್ಲಿ ಸತತ 4 ದ್ವಿಶತಕ ಬಾರಿಸುವ ಮೂಲಕ ಅಪರೂಪದ ದಾಖಲೆ ಬರೆದಿದ್ದರು. 4 ಪಂದ್ಯಗಳಲ್ಲಿ 4 ಶತಕ ಬಾರಿಸಬಹುದು, ಆದರೆ 4 ದ್ವಿಶತಕ ಬಾರಿಸುವುದು ಹುಡುಗಾಟಿಕೆಯ ಮಾತಲ್ಲ.
3 ಜೋ ರೂಟ್
ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಜೋ ರೂಟ್ ಈಗಾಗಲೇ ಇಂಗ್ಲೆಂಡ್‌ ಪರ 100ಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಅದೇ ಒಂದು ಸಾಧನೆ. 2017ರಿಂದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾದ ಬಳಿಕ ಮತ್ತಷ್ಟು ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಆಗಿ ಬೆಳೆದು ನಿಂತಿದ್ದಾರೆ. 2021ರ ಕೆಲ ತಿಂಗಳುಗಳ ಹಿಂದಷ್ಟೇ ಮುಕ್ತಾಯವಾದ ಶ್ರೀಲಂಕಾ ಹಾಗೂ ಭಾರತ ವಿರುದ್ದದ ಸರಣಿಯಲ್ಲಿ ರೂಟ್‌ ಸತತ 3 ಬಾರಿ 150+ ಬಾರಿಸುವ ಮೂಲಕ ವಿದೇಶಿ ನೆಲದಲ್ಲಿ ಸತತ 3 ಬಾರಿ 150 ರನ್ ಬಾರಿಸಿದ ಮೊದಲ ನಾಯಕ ಎನಿಸಿದ್ದಾರೆ.(ಶ್ರೀಲಂಕಾ ವಿರುದ್ದ 228, 186 ಹಾಗೂ ಭಾರತ ವಿರುದ್ದ 218) ಈ ದಾಖಲೆ ಕೂಡಾ ಸದ್ಯಕ್ಕೆ ಅಳಿಸಿಹೋಗುವುದು ಅನುಮಾನ.
4. ಕೇನ್ ವಿಲಿಯಮ್ಸನ್‌:
ಕ್ಯಾಪ್ಟನ್ ಕೂಲ್ ಖ್ಯಾತಿಯ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಿಸುವಲ್ಲಿ ನಾಯಕನಾಗಿ ಪ್ರಮುಖ ಪಾತ್ರವಹಿಸಿದ್ದಾರೆ. ಸ್ಥಿರ ಪ್ರದರ್ಶನಕ್ಕೆ ಹೆಸರಾದ ವಿಲಿಯಮ್ಸನ್‌ 2016ರಲ್ಲಿ ತಮ್ಮ 26ನೇ ವಯಸ್ಸಿನಲ್ಲಿ 9 ಟೆಸ್ಟ್‌ ಆಡುವ ರಾಷ್ಟ್ರಗಳ ವಿರುದ್ದ ಶತಕ ಬಾರಿಸುವ ಮೂಲಕ, ಈ ಸಾಧನೆ ಮಾಡಿದ ಅತಿಕಿರಿಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಬರೆದಿದ್ದಾರೆ. ಈ ದಾಖಲೆ ಸದ್ಯಕ್ಕೆ ಬ್ರೇಕ್ ಆಗುವುದು ಕೂಡಾ ಅನುಮಾನ.
5. ಸ್ಟೀವ್ ಸ್ಮಿತ್
ಲೆಗ್‌ ಸ್ಪಿನ್ನರ್ ಆಗಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸ್ಟೀವ್ ಸ್ಮಿತ್ ಸದ್ಯ ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತದ್ದು, ನಮ್ಮ ನಿಮ್ಮ ಕಣ್ಣ ಮುಂದೆಯೇ ನಡೆದ ಅಚ್ಚರಿ. ತಮ್ಮ 126ನೇ ಟೆಸ್ಟ್‌ ಇನಿಂಗ್ಸ್‌ನಲ್ಲಿ ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಸ್ಮಿತ್ 7,000 ರನ್‌ ಬಾರಿಸಿದ ಸಾಧನೆ ಮಾಡಿದ್ದರು. ಆದರೆ ದಾಖಲೆ ಏನಪ್ಪಾ ಅಂದ್ರೆ 60+ ಬ್ಯಾಟಿಂಗ್ ಸರಾಸರಿಯಲ್ಲಿ 7 ಸಾವಿರ ರನ್‌ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ವರ್ಷಗಳು ಕಳೆದಂತೆ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸರಾಸರಿ ಇಳಿಯುತ್ತದೆ, ಆದರೆ ಸ್ಮಿತ್ ವಿಚಾರದಲ್ಲಿ ಅದು ಉಲ್ಟಾ ಆಗಿದೆ.
6. ಬಾಬರ್ ಅಜಂ
ಪಾಕಿಸ್ತಾನದ ಪ್ರತಿಭಾನ್ವಿತ ಕ್ರಿಕೆಟಿಗ ಬಾಬರ್ ಅಜಂ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅದರಲ್ಲೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಬರ್ ಅಜಂ ನಿರ್ಮಿಸಿದ ಒಂದು ದಾಖಲೆ ಬಹುಕಾಲ ಅಚ್ಚಳಿಯದೇ ಉಳಿಯಲಿದೆ ಎಂದರೆ ತಪ್ಪಾಗಲಾರದು. 2016ರಲ್ಲಿ ಬಾಬರ್ ಅಜಂ ವೆಸ್ಟ್ ಇಂಡೀಸ್‌ ವಿರುದ್ದ 3 ಪಂದ್ಯಗಳಲ್ಲಿ ಸತತ 3 ಶತಕ ಬಾರಿಸುವ ಮೂಲಕ ಬರೋಬ್ಬರಿ 360 ರನ್‌ ಚಚ್ಚಿದ್ದರು. ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 123 ಹಾಗೂ 120 ರನ್ ಬಾರಿಸಿದ್ದ ಅಜಂ, ಕೊನೆಯ ಏಕದಿನ ಪಂದ್ಯದಲ್ಲಿ 117 ರನ್ ಸಿಡಿಸಿದ್ದರು. ಹೀಗಾಗಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ 360 ರನ್‌ ಬಾರಿಸುವುದು ಸುಲಭದ ಮಾತಲ್ಲ.

Latest Videos

click me!