ಆಡೋದ್ರಲ್ಲೂ ಮುಂದು, ಹೂಡೋದ್ರಲ್ಲೂ ಮುಂದು..! ಈ Startup ಕಂಪನಿಗಳ ಮೇಲೆ ಹಣ ಹಾಕಿದ್ದಾರೆ ನಮ್ಮ ಕ್ರಿಕೆಟರ್ಸ್‌!

First Published | Jan 15, 2024, 1:53 PM IST

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್‌ಗೆ ತನ್ನದೇ ಆದ ಫ್ಯಾನ್‌ ಬೇಸ್ ಇದೆ. ಇನ್ನು ಹಲವು ಕ್ರಿಕೆಟಿಗರು ಕ್ರಿಕೆಟ್ ಹೊರತಾಗಿಯೂ ಹಲವು ನವ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡಿದ್ದಾರೆ. ನಾವಿಂದು ಯಾವೆಲ್ಲಾ ಭಾರತದ ಕ್ರಿಕೆಟಿಗರು ಯಾವ ಸ್ಟಾರ್ಟ್‌ಅಪ್ ಮೇಲೆ ಹೂಡಿಕೆ ಮಾಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.

1. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗಾಗಲೇ ಹಲವು ಸ್ಟಾರ್ಟ್‌ಅಪ್‌ಗಳಲ್ಲಿ ತಮ್ಮ ಬಂಡವಾಳ ಹೂಡಿಕೆ ಮಾಡಿದ್ದಾರೆ> ಈ ಪೈಕಿ ರೇಜ್ ಕಾಫಿ, ಹೈಪರೈಸ್, ಬ್ಲೂ ಟ್ರೈಬ್, ಡಿಜಿಟಲ್ ಇನ್‌ಶ್ಯೂರೆನ್ಸ್ ಪ್ರಮುಖವಾದವುಗಳಾಗಿವೆ.
 

2. ಸಚಿನ್ ತೆಂಡುಲ್ಕರ್:

2023ರಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಹೈದರಾಬಾದ್‌ ಮೂಲದ ಆಝಾದ್ ಎಂಜಿನಿಯರಿಂಗ್ ಮೇಲೆ ಅನ್‌ಡಿಸ್ಕೋಸ್ಡ್‌ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ
 

Tap to resize

ಇನ್ನು ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ತೆಂಡುಲ್ಕರ್ ಇದಷ್ಟೇ ಅಲ್ಲದೇ ಸ್ಮ್ಯಾಶ್ ಎಂಟರ್‌ಟೈನ್‌ಮೆಂಟ್, ಸ್ಮಾರ್ಟ್ರಾನ್, ಸ್ಪಿನ್ನಿ ಹಾಗೂ ಇನ್ನಿತರ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. 
 

3. ಅಜಿಂಕ್ಯ ರಹಾನೆ:

ಬ್ಯುಸಿನೆಸ್ ಸ್ಟಾಂಡರ್ಡ್‌ ವರದಿಯ ಪ್ರಕಾರ, ಕ್ರಿಕೆಟಿಗ ಅಜಿಂಕ್ಯ ರಹಾನೆ ಮಹಿಂದ್ರಾ ಗ್ರೂಪ್, ಹಾಗೂ ಕೃಷಿ ಉತ್ಫನ್ನ ಸ್ಟಾರ್ಟ್ಅಪ್ ಆಗಿರುವ ಮೇರಾ ಕಿಸಾನ್‌ನಲ್ಲಿ ಹೂಡಿಕೆ ಮಾಡಿದ್ದಾರೆ.
 

4. ಗೌತಮ್ ಗಂಭೀರ್:

2020ರಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್, ಹೆಲ್ತ್ ಮಾನಿಟರಿಂಗ್ ಪ್ಲಾಟ್‌ಫಾರ್ಮ್ ಮೇಲೆ ಅಘೋಷಿತ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ನಿಮ್ಮ ಗಮನಕ್ಕಿರಲಿ ಇದ್ನು ಯಶ್ ರಾಜ್ ಗುಪ್ತಾ ಆರಂಭಿಸಿದ್ದಾರೆ.
 

5. ಸೌರವ್ ಗಂಗೂಲಿ:

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ 2017ರಲ್ಲಿ ಸ್ಟಾರ್ಟ್ಅಪ್‌ನಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡಿದ್ದರು. ದಾದಾ ಮುಂಬೈ ಮೂಲದ ಪ್ಲಿಕ್‌ಸ್ಟ್ರೀ ಎನ್ನುವ ಸ್ಟಾರ್ಟ್‌ ಅಪ್‌ ಮೇಲೆ ಅಘೋಷಿತ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ.
 

6. ಶಿಖರ್ ಧವನ್

ಗಬ್ಬರ್‌ ಸಿಂಗ್ ಖ್ಯಾತಿ ಶಿಖರ್ ಧವನ್ 2020ರಲ್ಲಿ ಚೆನ್ನೈ ಮೂಲದ ಯೋಗಗೆ ಸಂಬಂಧಿಸಿದ ಸರ್ವ ಎನ್ನುವ ಸ್ಟಾರ್ಟ್‌ಅಪ್ ಮೇಲೆ ಹೂಡಿಕೆ ಮಾಡಿದ್ದಾರೆ. ಈ ಸ್ಟಾರ್ಟ್ಅಪ್ ದೇಶಾದ್ಯಂತ ನುರಿತ ತಜ್ಞರನ್ನಗೊಳಗೊಂಡ ಸುಮಾರು 100 ಸ್ಟೂಡಿಯೋಗಳನ್ನು ಹೊಂದಿದೆ  
 

7. ಯುವರಾಜ್ ಸಿಂಗ್:

ವಿಶ್ವಕಪ್ ಹೀರೂ ಯುವರಾಜ್ ಸಿಂಗ್ 2015ರಲ್ಲಿ YouWeCan ಎನ್ನುವ ಸಂಸ್ಥೆಯ ಮೇಲೆ ಹೂಡಿಕೆ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಈಜಿಡಿನ್ನರ್, ವೆಲ್‌ವರ್ಸಡ್, ಹೆಲ್ದಿಯನ್ಸ್ ಸೇರಿದಂತೆ ಹಲವು ಸ್ಟಾರ್ಟ್‌ಅಪ್‌ಗಳ ಮೇಲೆ ಹೂಡಿಕೆ ಮಾಡಿದ್ದಾರೆ.
 

8. ಕೆ ಎಲ್ ರಾಹುಲ್:

ಟೀಂ ಇಂಡಿಯಾ ಉಪನಾಯಕ ಕೆ ಎಲ್ ರಾಹುಲ್ 2022ರಿಂದೀಚೆಗೆ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲಾರಂಭಿಸಿದ್ದಾರೆ. ಕನ್ನಡಿಗ ರಾಹುಲ್ ಮೆಟಾಮ್ಯಾನ್, ಮಾವ ಸುನಿಲ್ ಶೆಟ್ಟಿ ಪ್ರಾರಂಭಿಸಿರುವ XYXX ಸ್ಟಾರ್ಟ್‌ಅಪ್ ಮೇಲೆ ಹೂಡಿಕೆ ಮಾಡಿದ್ದಾರೆ.  
 

9. ಎಂ ಎಸ್ ಧೋನಿ:

ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಫಿಟ್ನೆಸ್‌ ಸ್ಟಾರ್ಟ್‌ಅಪ್ ಆಗಿರುವ ತಗ್ಡಾ ರಹೊ, ಕಾರ್ಸ್‌24, ಗರುಡಾ ಏರೋಸ್ಪೇಸ್, ಖಾತಾಬುಕ್ ಹಾಗೂ ಇನ್ನಿತರ ಸ್ಟಾರ್ಟ್‌ಅಪ್ ಮೇಲೆ ಹೂಡಿಕೆ ಮಾಡಿದ್ದಾರೆ.
 

Latest Videos

click me!