ವಮಿಕಾಗೆ ಅಂಥದ್ದೇನಾಗಿದೆ..? ಮಗಳ ಮುಖ ತೋರಿಸಲು ವಿರಾಟ್ ಕೊಹ್ಲಿಗೆ ಅಂಜಿಕೆಯೇಕೆ..? ಇಲ್ಲಿದೆ ಕಾರಣ!

First Published Jan 11, 2024, 6:14 PM IST

ಟೀಂ ಇಂಡಿಯಾ ದಂತಕಥೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಮುದ್ದಾದ ಮಗಳು ವಮಿಕಾಗೆ ಮೂರು ವರ್ಷ ತುಂಬಿದೆ. ಆದರೂ ಇದುವರೆಗೂ ವಿರುಷ್ಕಾ ಜೋಡಿ ತಮ್ಮ ಮಗಳ ಮುಖವನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸುತ್ತಿಲ್ಲ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸ್ವತಃ ವಿರಾಟ್ ಕೊಹ್ಲಿಯೇ ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮುದ್ದಾದ ಮಗಳು ವಮಿಕಾ ಬರ್ತ್‌ಡೇಯನ್ನು ಈ ಸೆಲಿಬ್ರಿಟಿ ಜೋಡಿ ಇಂದು(ಜನವರಿ 11) ಭರ್ಜರಿಯಾಗಿಯೇ ಆಚರಿಸಿದೆ.

ವಮಿಕಾಗೆ ಮೂರು ವರ್ಷ ತುಂಬಿದೆ. ಆದರೆ ವಿರುಷ್ಕಾ ಜೋಡಿ ಇದುವರೆಗೂ ತಮ್ಮ ಪುತ್ರಿಯ ಮುಖವನ್ನು ಅಪ್ಪಿತಪ್ಪಿಯೂ ಸೋಷಿಯಲ್ ಮೀಡಿಯಾದಲ್ಲಿ ಇದುವರೆಗೂ ಶೇರ್ ಮಾಡಿಕೊಂಡಿಲ್ಲ.

ಅಭಿಮಾನಿಯೊಬ್ಬ ಕೊಹ್ಲಿ ಬಳಿಕ ತಮ್ಮ ಮಗಳ ಫೋಟೋ ಯಾವಾಗ ತೋರಿಸುತ್ತೀರಾ ಎಂದಿದ್ದರು. ಈ ಕುರಿತಂತೆ ವಮಿಕಾ ಹುಟ್ಟಿದ ಕೆಲವೇ ದಿನಗಳಲ್ಲೇ ಈ ವಿಚಾರವನ್ನು ವಿರಾಟ್ ಕೊಹ್ಲಿ ಸೂಕ್ಷ್ಮವಾಗಿ ವಿವರಿಸಿದ್ದರು. 

ವಮಿಕಾ ಎಲ್ಲಿಯವರೆಗೆ ಸೋಷಿಯಲ್ ಮೀಡಿಯಾ ಅಂದ್ರೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಆಕೆಯನ್ನು ಸೋಷಿಯಲ್ ಮೀಡಿಯದಲ್ಲಿ ತೋರಿಸಬಾರದು ಎನ್ನುವುದನ್ನು ನಾನು ಅನುಷ್ಕಾ ಸೇರಿ ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

2021ರ ಜನವರಿ 11ರಂದು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಮಿಕಾಗೆ ಜನ್ಮ ನೀಡಿದ್ದರು. ಈ ವಿಷಯವನ್ನು ಸ್ವತಃ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಸಂತಸ ಹಂಚಿಕೊಂಡಿದ್ದರು. 

ಇದಾದ ಬಳಿಕ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳ ಬಳಿ, ದಯವಿಟ್ಟು ನಮ್ಮ ಖಾಸಗೀತನವನ್ನು ಗೌರವಿಸಿ ಎಂದು ಕೂಡಾ ಮನವಿ ಮಾಡಿದ್ದರು. ಹಲವು ಬಾರಿ ಸಾರ್ವಜನಿಕವಾಗಿಯೂ ವಿರಾಟ್ ಕೊಹ್ಲಿ ತಮ್ಮ ಮಗಳ ಫೋಟೋ ಕ್ಲಿಕ್ಕಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ.
 

ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ, ವಿರಾಟ್ ಕೊಹ್ಲಿ 2022ರ ಐಸಿಸಿ ಟಿ20 ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಭಾರತ ಚುಟುಕು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಫ್ಘಾನ್ ಎದುರಿನ 3 ಪಂದ್ಯಗಳ ಟಿ20 ಸರಣಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ.

Virat Kohli

ಇದರ ಹೊರತಾಗಿಯೂ ಇಂದು ನಡೆಯಲಿರುವ ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಮಗಳ ಬರ್ತ್‌ಡೇ ಗಾಗಿಯೇ ವಿರಾಟ್ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇಂದು ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ಮೊಹಾಲಿ ಆತಿಥ್ಯ ವಹಿಸಿದೆ. ಆಫ್ಘಾನ್ ಎದುರಿನ ಎರಡನೇ ಪಂದ್ಯವು ಇಂದೋರ್‌ನಲ್ಲಿ ಡಿಸೆಂಬರ್ 14 ಹಾಗೂ ಡಿಸೆಂಬರ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ನಡೆಯಲಿದೆ.
 

2024ರ ಜೂನ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಕ್ರಿಕೆಟ್ ತಂಡವು ಈ ಮಾದರಿಯಲ್ಲಿ ಆಡಲಿರುವ ಕೊನೆಯ ಟಿ20 ಸರಣಿ ಇದಾಗಿದ್ದು, ಕ್ರಿಕೆಟ್ ಅಭಿಮಾನಿಗಳ ಚಿತ್ತ ಈ ಸರಣಿ ಮೇಲಿದೆ.
 

click me!