ವಮಿಕಾ ಮೂರನೇ ಬರ್ತ್‌ಡೇ ಸೆಲಿಬ್ರೇಟ್ ಮಾಡಿದ ವಿರುಷ್ಕಾ ದಂಪತಿ: ಇಲ್ಲಿವೆ ಮುದ್ದಾದ ಫೋಟೋಗಳು

Published : Jan 11, 2024, 04:04 PM ISTUpdated : Jan 11, 2024, 04:10 PM IST

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಮೋಹಕತಾರೆ ಅನುಷ್ಕಾ ಶರ್ಮಾ ಅವರ ಮುದ್ದಾದ ಮಗಳು ವಮಿಕಾ ಇಂದು ತಮ್ಮ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಕುಟುಂಬದ ಸುಂದರ ಫೋಟೋಗಳನ್ನು ಮೆಲುಕು ಹಾಕೋಣ ಬನ್ನಿ.

PREV
18
ವಮಿಕಾ ಮೂರನೇ ಬರ್ತ್‌ಡೇ ಸೆಲಿಬ್ರೇಟ್ ಮಾಡಿದ ವಿರುಷ್ಕಾ ದಂಪತಿ: ಇಲ್ಲಿವೆ ಮುದ್ದಾದ ಫೋಟೋಗಳು

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ 2021ರ ಜನವರಿ 11ರಂದು ತಮ್ಮ ಸುಂದರ ಕುಟುಂಬಕ್ಕೆ ವಮಿಕಾ ಎನ್ನುವ ಮುದ್ದಾದ ಮಗಳನ್ನು ಸ್ವಾಗತಿಸಿದ್ದರು. ಇಂದು ವಮಿಕಾಗೆ ಮೂರನೇ ಹುಟ್ಟುಹಬ್ಬದ ಸಂಭ್ರಮ

28

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ತಮ್ಮ ಮಗಳು ವಮಿಕಾ ಅವರ ಮುಖವನ್ನು ಇದುವರೆಗೂ ಹೊರ ಜಗತ್ತಿಗೆ ತೋರಿಸಿಲ್ಲ. ವಿರುಷ್ಕಾ ದಂಪತಿ ಹಾಗೂ ಆಪ್ತ ವಲಯ ಬಿಟ್ಟು ಉಳಿದವರು ಯಾರೂ ಕೊಹ್ಲಿ ಮಗಳ ಮುಖ ನೋಡಿಲ್ಲ.

38

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಜತೆ ಕ್ವಾಲಿಟಿ ಸಮಯವನ್ನು ಕಳೆಯಲು ಹೆಚ್ಚು ಇಷ್ಟಪಡುತ್ತಾರೆ.

48

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಆಗಾಗ ವೃತ್ತಿಬದುಕಿನಿಂದ ಬಿಡುವು ಪಡೆದು ಬೀಚ್ ಬದಿ ಓಡಾಡುವಾಗ ಮಗಳು ವಮಿಕಾ ಕೂಡಾ ಸಾಥ್ ನೀಡಿರುವ ಫೋಟೋಗಳು ಈ ಹಿಂದೆ ವೈರಲ್ ಆಗಿದ್ದವು.

58

ಇಲ್ಲಿ ನಾವು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮುದ್ದಾಗ ಮಗಳ ಜತೆ ಆಟವಾಡುತ್ತಿರುವ ಫೋಟೋಗಳು. ಈ ಎಲ್ಲಾ ಫೋಟೋಗಳು ವಿರುಷ್ಕಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

68

ಇಂದು ಮೊಹಾಲಿಯಲ್ಲಿ ಭಾರತ ಹಾಗೂ ಆಪ್ಘಾನಿಸ್ತಾನ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಮೊದಲ ಪಂದ್ಯಕ್ಕೂ ಒಂದು ದಿನ ಮೊದಲೇ ಈ ಪಂದ್ಯದಿಂದ ಕೊಹ್ಲಿ ಹಿಂದೆ ಸರಿದಿದ್ದಾರೆ.

78

ವಿರಾಟ್ ಕೊಹ್ಲಿ ವೈಯುಕ್ತಿಕ ಕಾರಣ ನೀಡಿ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಲವು ವರದಿಗಳ ಪ್ರಕಾರ ಕೊಹ್ಲಿ ತಮ್ಮ ಮಗಳ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎನ್ನಲಾಗಿದೆ.

88

ಆಫ್ಘಾನ್ ಎದುರಿನ ಎರಡನೇ ಪಂದ್ಯವು ಇಂದೋರ್‌ನಲ್ಲಿ ಡಿಸೆಂಬರ್ 14 ಹಾಗೂ ಡಿಸೆಂಬರ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ನಡೆಯಲಿದೆ.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories