ಟೀಂ ಇಂಡಿಯಾ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡ್ತಿದೆ. ಕೊಹ್ಲಿ ನಾಯಕತ್ವದಲ್ಲೇ ತಂಡ ಅದ್ಭುತ ಗೆಲುವುಗಳನ್ನು ಸಾಧಿಸಿತ್ತು ಅಂತಾ ಫ್ಯಾನ್ಸ್ ಹೇಳ್ತಿದ್ದಾರೆ. ಮತ್ತೆ ವಿರಾಟ್ ಕೊಹ್ಲಿ ಟೆಸ್ಟ್‌ಗೆ ವಾಪಸ್ ಬರಬೇಕು ಅಂತಾ ಕೇಳಿಕೊಳ್ತಿದ್ದಾರೆ. ಈ ಬಗ್ಗೆ ಬಿಸಿಸಿಐ ಮೊದಲ ಸಲ ಪ್ರತಿಕ್ರಿಯಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ತವರಿನಲ್ಲಿ ಹುಲಿಯಲ್ಲ, ಇಲಿಯಾಗಿದೆ. ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ವೈಟ್‌ವಾಶ್ ಆಗಿದೆ. ಗಂಭೀರ್ ಕೋಚಿಂಗ್, ನಾಯಕತ್ವ ಬದಲಾವಣೆ, ಹಿರಿಯರ ನಿವೃತ್ತಿ ತಂಡವನ್ನು ಸಂಕಷ್ಟಕ್ಕೆ ದೂಡಿದೆ.
25
ಕೊಹ್ಲಿ ಭಾರತದ ಶ್ರೇಷ್ಠ ಟೆಸ್ಟ್ ನಾಯಕ
ಕೊಹ್ಲಿ ನಾಯಕತ್ವ ವಹಿಸಿಕೊಂಡಾಗಿನಿಂದ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಮಿಂಚಿತ್ತು. 7ನೇ ಸ್ಥಾನದಲ್ಲಿದ್ದ ತಂಡವನ್ನು ಕೊಹ್ಲಿ ನಾಯಕನಾದ ಬಳಿಕ ಅಗ್ರಸ್ಥಾನಕ್ಕೆ ತಂದರು. ಇಡೀ ಬೌಲಿಂಗ್ ವಿಭಾಗವನ್ನೇ ಹುಲಿಗಳಂತೆ ಬದಲಾಯಿಸಿದರು. ಐಸಿಸಿ ಟ್ರೋಫಿ ಗೆಲ್ಲದಿದ್ದರೂ, ಕೊಹ್ಲಿ ಭಾರತದ ಶ್ರೇಷ್ಠ ಟೆಸ್ಟ್ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ.
35
ಟೆಸ್ಟ್ ವಾಪಾಸ್ ಬಗ್ಗೆ ಬಿಸಿಬಿಸಿ ಚರ್ಚೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಸರಣಿ ಸೋಲಿನ ಹಿನ್ನೆಲೆಯಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿರಾಟ್ ಕೊಹ್ಲಿ ನಿವೃತ್ತಿ ನಿರ್ಧಾರ ಹಿಂಪಡೆಯುವಂತೆ ಕೇಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಮೊದಲ ಸಲ ಸ್ಪಷ್ಟನೆ ನೀಡಿದೆ.
ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ವಾಪಾಸ್ ಪಡೆಯಲು ಬಿಸಿಸಿಐ ಮನವೊಲಿಸುತ್ತಿದೆ ಎನ್ನುವುದು ಆಧಾರರಹಿತ ಗಾಳಿ ಸುದ್ದಿಯಾಗಿದೆ. ಈ ಕುರಿತಂತೆ ಕೊಹ್ಲಿ ಜತೆ ಬಿಸಿಸಿಐ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
55
ವಿಶ್ವ ಟೆಸ್ಟ್ ಫೈನಲ್ ಹಾದಿ ಕಠಿಣ
ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಸರಣಿ ಸೋಲಿನಿಂದಾಗಿ, ಟೀಂ ಇಂಡಿಯಾಗೆ ಡಬ್ಲ್ಯುಟಿಸಿ ಫೈನಲ್ ತಲುಪುವುದು ಕಷ್ಟವಾಗಿದೆ. ಮುಂದಿನ ಪಂದ್ಯಗಳಲ್ಲಿ ಕನಿಷ್ಠ ಏಳರಲ್ಲಿ ಗೆಲ್ಲಲೇಬೇಕು. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳನ್ನು ಈ ತಂಡದಿಂದ ಗೆಲ್ಲುವುದು ಕಷ್ಟ ಎನ್ನುತ್ತಾರೆ ಫ್ಯಾನ್ಸ್.