ವಿಶ್ವಕಪ್ ಲೀಗ್ ಹಂತದ ಶ್ರೇಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ..! ವಿರಾಟ್ ಕೊಹ್ಲಿಗೆ ನಾಯಕ ಪಟ್ಟ

First Published Nov 13, 2023, 3:43 PM IST

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ನಾಕೌಟ್ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಲೀಗ್ ಹಂತದಲ್ಲಿ ಪಾಲ್ಗೊಂಡ ಆಟಗಾರರ ಪೈಕಿ ಅದ್ಭುತ ಪ್ರದರ್ಶನ ತೋರಿದ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದ್ದು, ವಿರಾಟ್ ಕೊಹ್ಲಿಗೆ ನಾಯಕ ಪಟ್ಟ ಕಟ್ಟಲಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದ ಟೀಂ ಆಫ್‌ ದಿ ಟೂರ್ನಮೆಂಟ್‌ನಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

1. ಕ್ವಿಂಟನ್ ಡಿ ಕಾಕ್:

ಹರಿಣಗಳ ಪಡೆಯ ವಿಕೆಟ್ ಕೀಪರ್ ಬ್ಯಾಟರ್ ಡಿ ಕಾಕ್ 9 ಪಂದ್ಯಗಳನ್ನಾಡಿ 4 ಶತಕ ಸಹಿತ 65.67ರ ಬ್ಯಾಟಿಂಗ್ ಸರಾಸರಿಯಲ್ಲಿ 591 ರನ್ ಸಿಡಿಸಿದ್ದಾರೆ. 174 ರನ್ ಡಿ ಕಾಕ್ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿದೆ.
 

2. ಡೇವಿಡ್ ವಾರ್ನರ್:

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್‌ 9 ಪಂದ್ಯಗಳನ್ನಾಡಿ 2 ಶತಕ ಹಾಗೂ 2 ಅರ್ಧಶತಕ ಸಹಿತ 70.63ರ ಬ್ಯಾಟಿಂಗ್ ಸರಾಸರಿಯಲ್ಲಿ 499 ರನ್ ಬಾರಿಸಿದ್ದಾರೆ. 163 ರನ್ ವಾರ್ನರ್ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ.
 

3. ರಚಿನ್ ರವೀಂದ್ರ:

ನ್ಯೂಜಿಲೆಂಡ್ ಪ್ರತಿಭಾನ್ವಿತ ಆಟಗಾರ ರಚಿನ್ ರವೀಂದ್ರ 9 ಪಂದ್ಯಗಳನ್ನಾಡಿ 3 ಶತಕ ಹಾಗೂ 2 ಅರ್ಧಶತಕ ಸಹಿತ 565 ರನ್ ಬಾರಿಸಿದ್ದಾರೆ. 123 ರನ್ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿದೆ. ಇದಷ್ಟೇ ಬೌಲಿಂಗ್‌ನಲ್ಲಿ 5 ವಿಕೆಟ್ ಕಬಳಿಸಿದ್ದಾರೆ.
 

4. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ 9 ಪಂದ್ಯಗಳನ್ನಾಡಿ 2 ಶತಕ ಹಾಗೂ 5 ಅರ್ಧಶತಕ ಸಹಿತ 99.00 ಬ್ಯಾಟಿಂಗ್ ಸರಾಸರಿಯಲ್ಲಿ 594 ರನ್ ಬಾರಿಸಿದ್ದಾರೆ. ಅಜೇಯ 103 ಕೊಹ್ಲಿ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದ ತಂಡದಲ್ಲಿ ಕೊಹ್ಲಿಗೆ ನಾಯಕ ಪಟ್ಟ ಕಟ್ಟಲಾಗಿದೆ.
 

5. ಏಯ್ಡನ್ ಮಾರ್ಕ್‌ರಮ್‌:

ತೆಂಬಾ ಬವುಮಾ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಪರ ಕೆಲವು ಪಂದ್ಯಗಳನ್ನು ಮುನ್ನಡೆಸಿದ ಮಾರ್ಕ್‌ರಮ್‌ 49.50 ಬ್ಯಾಟಿಂಗ್ ಸರಾಸರಿಯಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸಹಿತ 396 ರನ್ ಸಿಡಿಸಿದ್ದಾರೆ. 106 ರನ್ ಮಾರ್ಕ್‌ರಮ್ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ.

6. ಗ್ಲೆನ್ ಮ್ಯಾಕ್ಸ್‌ವೆಲ್:

ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್‌ವೆಲ್, ಕೇವಲ 7 ಪಂದ್ಯಗಳನ್ನಾಡಿ 397 ರನ್ ಸಿಡಿಸಿದ್ದಾರೆ. 201 ರನ್ ಮ್ಯಾಕ್ಸ್‌ವೆಲ್ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ಮ್ಯಾಕ್ಸಿ 5 ಬಲಿ ಪಡೆದಿದ್ದಾರೆ.
 

7 ಮಾರ್ಕೊ ಯಾನ್ಸೆನ್:

ಹರಿಣಗಳ ಪಡೆಯ ನೀಳಕಾಯದ ಬೌಲಿಂಗ್ ಆಲ್ರೌಂಡರ್‌ ಯಾನ್ಸೆನ್‌ 8 ಪಂದ್ಯಗಳನ್ನಾಡಿ 17 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ ಬ್ಯಾಟಿಂಗ್‌ನಲ್ಲಿ ಒಂದು ಅರ್ಧಶತಕ ಸಹಿತ 157 ರನ್ ಚಚ್ಚಿದ್ದಾರೆ.

8. ರವೀಂದ್ರ ಜಡೇಜಾ:

ಟೀಂ ಇಂಡಿಯಾ ಆಲ್ರೌಂಡರ್ ಜಡೇಜಾ 9 ಪಂದ್ಯಗಳನ್ನಾಡಿ 111 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲೂ ಕಮಾಲ್ ಮಾಡಿರುವ ಜಡ್ಡು ಇದುವರೆಗೂ 16 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
 

9. ಮೊಹಮ್ಮದ್ ಶಮಿ:

ಟೀಂ ಇಂಡಿಯಾ ಅನುಭವಿ ವೇಗಿ ಶಮಿ ಕೇವಲ 5 ಪಂದ್ಯಗಳನ್ನಾಡಿ 16 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಶಮಿ 5 ವಿಕೆಟ್ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
 

10. ಆಡಂ ಜಂಪಾ:

ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ಆಡಂ ಜಂಪಾ ಮಾರಕ ದಾಳಿ ಮೂಲಕ ಮಿಂಚುತ್ತಿದ್ದಾರೆ. 9 ಪಂದ್ಯಗಳನ್ನಾಡಿ 22 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಲೀಗ್ ಹಂತ ಮುಕ್ತಾಯದ ವೇಳೆಗೆ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
 

11. ಜಸ್ಪ್ರೀತ್ ಬುಮ್ರಾ:

ಟೀಂ ಇಂಡಿಯಾದ ಮತ್ತೋರ್ವ ಮಾರಕ ವೇಗಿ ಬುಮ್ರಾ ಇದುವರೆಗೂ 9 ಪಂದ್ಯಗಳನ್ನಾಡಿ 17 ವಿಕೆಟ್ ಕಬಳಿಸಿದ್ದಾರೆ. ಬುಮ್ರಾ ಕೇವಲ 3.65ರ ಎಕಾನಮಿಯಲ್ಲಿ ರನ್ ನೀಡಿ ಮಿಂಚುತ್ತಿದ್ದಾರೆ.
 

12. ದಿಲ್ಷ್ಯಾನ್ ಮದುಶಂಕ:

ವಿಶ್ವಕಪ್ ಲೀಗ್ ಹಂತದಲ್ಲಿ ಶ್ರೀಲಂಕಾ ವೇಗಿ ಮದುಶಂಕ ಕೇವಲ 9 ಪಂದ್ಯಗಳನ್ನಾಡಿ 21 ವಿಕೆಟ್ ಕಬಳಿಸಿದ್ದಾರೆ. ಮದುಶಂಕ, ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದ ತಂಡದ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.
 

click me!