ಬೆಂಗಳೂರು: ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಮಿನಿ ಹರಾಜಿನಲ್ಲಿ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ ಟಾಪ್ 5 ಆಟಗಾರರು ಯಾರು ಎನ್ನುವುನ್ನು ನೋಡೋಣ ಬನ್ನಿ.
ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ 23.75 ಕೋಟಿ ರುಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದ ಭಾರತದ ಆಲ್ರೌಂಡರ್ ವೆಂಕಿಯನ್ನು ಕೆಕೆಆರ್ ಫ್ರಾಂಚೈಸಿ ರಿಲೀಸ್ ಮಾಡಿತ್ತು. ಈಗ ಮತ್ತೆ ವೆಂಕಟೇಶ್ ಅಯ್ಯರ್ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
57
3. ರವಿ ಬಿಷ್ಣೋಯಿ
ಒಂದು ಸಮಯದಲ್ಲಿ ಭಾರತದ ನಂ.1 ಟಿ20 ಶ್ರೇಯಾಂಕಿತ ಬೌಲರ್ ಆಗಿದ್ದ ಬಿಷ್ಣೋಯಿ, ಈ ಬಾರಿಯ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಮೂಡಿಸಿದ್ದಾರೆ.
67
4. ಜೇಮಿ ಸ್ಮಿತ್:
ಇಂಗ್ಲೆಂಡ್ ಮೂಲದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ಮೂಲ ಬೆಲೆ 2 ಕೋಟಿ ರುಪಾಯಿ ಆಗಿದ್ದು, ಈ ಬಾರಿ ಜೇಮಿ ಸ್ಮಿತ್ ಖರೀದಿಸಲು ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆಯಿದೆ.
77
5. ಜೋಶ್ ಇಂಗ್ಲಿಶ್
ಈ ಬಾರಿಯ ಐಪಿಎಲ್ ಬಹುತೇಕ ಪಂದ್ಯಗಳಿಗೆ ಅಲಭ್ಯರಾಗಲಿರುವ ಆಸ್ಟ್ರೇಲಿಯಾ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಮೇಲೆ ಫ್ರಾಂಚೈಸಿಗಳ ಮೇಲೆ ಕಣ್ಣಿದೆ. ಯಾಕಂದ್ರೆ ಜೋಶ್ ಇಂಗ್ಲಿಶ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ.