ದೇಸಿ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿವೆ 3 ಅಪರೂಪದ ದಾಖಲೆಗಳು

First Published Apr 10, 2020, 8:06 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವಾರು ದಾಖಲೆಯ ಒಡೆಯರಾಗಿ ಬೆಳೆದು ನಿಂತಿದ್ದಾರೆ. 3 ಮಾದರಿಯ ಕ್ರಿಕೆಟ್‌ನಲ್ಲೂ ಕೊಹ್ಲಿ ಹಲವು ವಿಶ್ವದಾಖಲೆಗಳನ್ನು ಬರೆದಿದ್ದಾರೆ. 
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ಬರೆದಿರುವ ಕೊಹ್ಲಿ, ದೇಸಿ ಕ್ರಿಕೆಟ್‌ನಲ್ಲೂ ರನ್ ಮಷೀನ್ ಕೊಹ್ಲಿ ಮೂರು ಅಪರೂಪದ ದಾಖಲೆ ಬರೆದಿದ್ದರು. ದೇಸಿ ಕ್ರಿಕೆಟ್‌ನಲ್ಲಿ ಕೊಹ್ಲಿ ಹೆಸರಿನಲ್ಲಿರುವ ದಾಖಲೆಗಳಾವುವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

1. ದೇವಧರ್ ಟ್ರೋಫಿ ಗೆದ್ದ ಅತಿ ಕಿರಿಯ ನಾಯಕ
undefined
2009-10ಸಾಲಿನ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಉತ್ತರ ವಲಯವನ್ನು ಮುನ್ನಡೆಸಿದ್ದ ಕೊಹ್ಲಿ ತಂಡವನ್ನು ಚಾಂಪಿಯನ್ನು ಪಟ್ಟಕ್ಕೇರಿಸಿದ್ದರು. ಆಗ ಕೊಹ್ಲಿ ವಯಸ್ಸು 21 ವರ್ಷ, 124 ದಿನಗಳು. ಈ ಮೂಲಕ ದೇವಧರ್ ಟ್ರೋಫಿ ಗೆದ್ದ ಅತಿ ಕಿರಿಯ ನಾಯಕ ಎನ್ನುವ ದಾಖಲೆ ಬರೆದಿದ್ದರು. ಇದೀಗ ಆ ದಾಖಲೆ ಶುಭ್‌ಮನ್ ಗಿಲ್(20 ವರ್ಷ, 57) ಹೆಸರಿನಲ್ಲಿದೆ.
undefined
2. ಡೆಲ್ಲಿ ಪರ ದಾಖಲೆಯ ಜೊತೆಯಾಟ
undefined
ವಿರಾಟ್ ಕೊಹ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಕಾಶ್ ಚೋಪ್ರಾ ಜೊತೆಗೂಡಿ 385 ರನ್‌ಗಳ ಜತೆಯಾಟವಾಡಿದ್ದರು. ಇದು ಡೆಲ್ಲಿ ಪರ ಎರಡನೇ ವಿಕೆಟ್‌ಗೆ ಗರಿಷ್ಠ ಜತೆಯಾಟವಾಗಿ ಉಳಿದಿದೆ. ನಿಸಾರ್ ಟ್ರೋಫಿಯಲ್ಲಿ ಕೊಹ್ಲಿ 274 ಎಸೆತಗಳಲ್ಲಿ 30 ಬೌಂಡರಿ ಸಹಿತ 197 ರನ್ ಸಿಡಿಸಿದ್ದರು.
undefined
3. ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿಹೆಚ್ಚು ಶತಕ
undefined
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರಾದರೂ, ಎರಡನೇ ಅವಕಾಶಕ್ಕಾಗಿ ಒಂದು ವರ್ಷ ಕಾಯಬೇಕಾಯಿತು. 2008-09ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊಹ್ಲಿ 534 ರನ್ ಬಾರಿಸಿ ಗಮನ ಸೆಳೆದರು. ಈ ಟೂರ್ನಿಯಲ್ಲಿ ಕೊಹ್ಲಿ 4 ಶತಕ ಚಚ್ಚಿದ್ದರು. ವಿಜಯ್ ಹಜಾರೆ ಟೂರ್ನಿಯೊಂದರಲ್ಲಿ(4 ಶತಕ) ಗರಿಷ್ಠ ಶತಕ ಬಾರಿಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.
undefined
click me!