Published : Apr 10, 2020, 06:25 PM ISTUpdated : Apr 11, 2020, 12:52 PM IST
ಕೊರೋನಾ ವೈರಸ್ ಹರಡುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಶಿಬಿರ ಅರ್ಧಕ್ಕೆ ಮೊಟಕುಗೊಳಿಸಿ ನಾಯಕ ಎಂ.ಎಸ್.ಧೋನಿ ತವರಿಗೆ ವಾಪಸ್ ಆಗಿದ್ದರು. ಬಳಿಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆ ಪ್ರಧಾನಿ ಮೋದಿ ದೇಶವನ್ನು ಲಾಕ್‌ಡೌನ್ ಮಾಡಿದ್ದರು. ಇದೀಗ ಧೋನಿ ಕುಟುಂಬದ ಜೊತೆ ಲಾಕ್‌ಡೌನ್ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲೇ ಇರುವ ಧೋನಿ ಇದೀಗ ಏನು ಮಾಡುತ್ತಿದ್ದಾರೆ ಅನ್ನೋ ಕುತೂಹಲಕ್ಕೆ ಪತ್ನಿ ಸಾಕ್ಷಿ ಧೋನಿ ಉತ್ತರ ನೀಡಿದ್ದಾರೆ.