ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್; ಸಂಗಕ್ಕಾರ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ!

Published : Jan 12, 2026, 09:58 AM IST

ವಡೋದರಾ: ಭಾರತದ ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಗರಿಷ್ಠ ರನ್‌ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅವರು ಶ್ರೀಲಂಕಾದ ಕುಮಾರ ಸಂಗಕ್ಕರ ಅವರನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್-5 ಆಟಗಾರರಿವರು. 

PREV
19
ಹೊಸ ಮೈಲಿಗಲ್ಲು ನೆಟ್ಟ ವಿರಾಟ್ ಕೊಹ್ಲಿ

ಭಾನುವಾರ ಕಿವೀಸ್‌ ವಿರುದ್ಧ ಪಂದ್ಯದಲ್ಲಿ ಕೊಹ್ಲಿ 93 ರನ್‌ ಸಿಡಿಸಿದರು. ಇದರೊಂದಿಗೆ ಟೆಸ್ಟ್‌, ಏಕದಿನ, ಅಂ.ರಾ. ಕ್ರಿಕೆಟ್‌ನ ಕೊಹ್ಲಿ ರನ್‌ ಗಳಿಕೆ 28068ಕ್ಕೆ ಏರಿಕೆಯಾಯಿತು. ಅವರು 557 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

29
ಅಗ್ರಸ್ಥಾನದಲ್ಲೆ ಮುಂದುವರೆದ ಸಚಿನ್

ಕುಮಾರ ಸಂಗಕ್ಕರ 594 ಪಂದ್ಯಗಳಲ್ಲಿ 28016 ರನ್‌ ಗಳಿಸಿದ್ದು, 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಚಿನ್‌ ತೆಂಡುಲ್ಕರ್‌ 664 ಪಂದ್ಯಗಳಲ್ಲಿ ಒಟ್ಟು 34357 ರನ್‌ ಗಳಿಸಿದ್ದು, ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

39
ಅತಿವೇಗದ ವೇಗದ 28,000 ರನ್

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 28,000 ರನ್‌ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು 624 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ. ತೆಂಡುಲ್ಕರ್‌ 644 ಇನ್ನಿಂಗ್ಸ್‌ ತೆಗೆದುಕೊಂಡಿದ್ದರೆ, ಸಂಗಕ್ಕರ 28 ಸಾವಿರ ರನ್‌ ಕ್ಲಬ್‌ ಸೇರಲು 666 ಇನ್ನಿಂಗ್ಸ್‌ ಆಡಿದ್ದರು.

49
ಅತಿಹೆಚ್ಚು ಅಂತಾರಾಷ್ಟ್ರೀಯ ರನ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 5 ಆಟಗಾರರು ಯಾರು ಎನ್ನುವುದನ್ನು ನೋಡೋಣ

59
1. ಸಚಿನ್ ತೆಂಡೂಲ್ಕರ್

ಭಾರತ ಪರ ಒಟ್ಟು 664 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 34,357 ರನ್ ಸಿಡಿಸುವ ಮೂಲಕ ಮೊದಲ ಸ್ಥಾನದಲ್ಲೇ ಭದ್ರವಾಗಿದ್ದಾರೆ.

69
2. ವಿರಾಟ್ ಕೊಹ್ಲಿ

ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ 557 ಪಂದ್ಯಗಳನ್ನಾಡಿ 28,068 ರನ್ ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

79
3. ಕುಮಾರ ಸಂಗಕ್ಕರ್

ಶ್ರೀಲಂಕಾ ಮಾಜಿ ದಿಗ್ಗಜ ಆಟಗಾರ ಕುಮಾರ ಸಂಗಕ್ಕರ 594 ಪಂದ್ಯಗಳನ್ನಾಡಿ 28,016 ರನ್ ಬಾರಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

89
4. ರಿಕಿ ಪಾಂಟಿಂಗ್

ಆಸ್ಟ್ರೇಲಿಯಾ ದಿಗ್ಗಜ ನಾಯಕ ರಿಕಿ ಪಾಂಟಿಂಗ್‌ 560 ಪಂದ್ಯಗಳನ್ನಾಡಿ 27,483 ರನ್ ಸಿಡಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

99
5. ಮಹೇಲಾ ಜಯವರ್ಧನೆ

ಶ್ರೀಲಂಕಾ ಮಾಜಿ ನಾಯಕ ಮಹೇಲಾ ಜಯವರ್ಧನೆ 725 ಪಂದ್ಯಗಳನ್ನಾಡಿ 25,957 ರನ್ ಸಿಡಿಸುವ ಮೂಲಕ ಐದನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories