ರೋಹಿತ್‌ಗೆ ಉಪನಾಯಕತ್ವ ಬೇಡ: ಕೊಹ್ಲಿ ಬೇಡಿಕೆ..! ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ವಾ..?

First Published | Sep 18, 2021, 12:16 PM IST

ನವದೆಹಲಿ: ಭಾರತ ಏಕದಿನ ತಂಡದ ಉಪನಾಯಕನ ಸ್ಥಾನದಿಂದ ರೋಹಿತ್‌ ಶರ್ಮಾ ಅವರನ್ನು ಕೈಬಿಡುವಂತೆ ಬಿಸಿಸಿಐ ಆಯ್ಕೆ ಸಮಿತಿ ಮುಂದೆ ನಾಯಕ ವಿರಾಟ್‌ ಕೊಹ್ಲಿ ಪ್ರಸ್ತಾಪವಿರಿಸಿದ್ದಾರೆ ಎನ್ನುವ ಕುತೂಹಲಕಾರಿ ಬೆಳವಣಿಗೆಯೊಂದನ್ನು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿ ಭಾರತೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಹುಟ್ಟುಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಭಾರತ ಏಕದಿನ ತಂಡದ ಉಪನಾಯಕನ ಸ್ಥಾನದಿಂದ ರೋಹಿತ್‌ ಶರ್ಮಾ ಅವರನ್ನು ಕೈಬಿಡುವಂತೆ ಬಿಸಿಸಿಐ ಆಯ್ಕೆ ಸಮಿತಿ ಮುಂದೆ ನಾಯಕ ವಿರಾಟ್‌ ಕೊಹ್ಲಿ ಪ್ರಸ್ತಾಪವಿರಿಸಿದ್ದಾರೆ ಎನ್ನುವ ಕುತೂಹಲಕಾರಿ ಬೆಳವಣಿಗೆಯೊಂದನ್ನು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ವರದಿಯ ಪ್ರಕಾರ, ರೋಹಿತ್‌ ಬದಲು ಕೆ.ಎಲ್‌.ರಾಹುಲ್‌ರನ್ನು ಉಪನಾಯಕನನ್ನಾಗಿ ನೇಮಿಸಬೇಕು ಎಂದು ಕೊಹ್ಲಿ ಕೇಳಿದ್ದಾರೆ ಎನ್ನಲಾಗಿದೆ. ಕೊಹ್ಲಿಯ ಈ ಪ್ರಸ್ತಾಪವು ಆಯ್ಕೆ ಸಮಿತಿಗೆ ಕಿರಿಕಿರಿ ಉಂಟು ಮಾಡಿದೆ ಎನ್ನಲಾಗಿದೆ.

Tap to resize

ರೋಹಿತ್‌ಗೆ ಈಗಾಗಲೇ 34 ವರ್ಷ ವಯಸ್ಸು. 2023ರ ಏಕದಿನ ವಿಶ್ವಕಪ್‌ ದೃಷ್ಟಿಯಿಂದ ರಾಹುಲ್‌ಗೆ ಜವಾಬ್ದಾರಿ ನೀಡುವುದು ಉತ್ತಮ. ಟಿ20 ತಂಡಕ್ಕೆ ರಿಷಭ್‌ ಪಂತ್‌ರನ್ನು ಉಪನಾಯಕನನ್ನಾಗಿ ಮಾಡಬೇಕು ಎಂದು 32 ವರ್ಷದ ಕೊಹ್ಲಿ ಪ್ರಸ್ತಾಪಿಸಿದ್ದಾರೆ ಎಂದು ವರದಿ ತಿಳಿಸಿದೆ. 

ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರವಾಗಿರುವ ಬೆನ್ನಲ್ಲೇ ಇಂತಹದ್ದೊಂದು ಸುದ್ದಿ ಹೊರಬಿದ್ದಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಯುಎಇನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ ಬಳಿಕ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಗುರುವಾರವಷ್ಟೇ ಕೊಹ್ಲಿ ಘೋಷಿಸಿದ್ದರು. ಇದು ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಹುಟ್ಟುಹಾಕಿತ್ತು.

ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ, ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲೂ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ದಾಖಲೆಯ ಐದು ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

ಟಿ20 ವಿಶ್ವಕಪ್‌ನಲ್ಲಿ ತಂಡ ಉತ್ತಮ ಪ್ರದರ್ಶನ ತೋರದಿದ್ದರೆ ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತದೆ ಎಂದು ಕೊಹ್ಲಿಗೆ ತಿಳಿದಿತ್ತು. ಅದೇ ಕಾರಣದಿಂದ ಅವರೇ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ಅಲ್ಲದೇ, ಟಿ20 ವಿಶ್ವಕಪ್‌ ಬಳಿಕ ಕೊಹ್ಲಿ ಏಕದಿನ ತಂಡದ ನಾಯಕತ್ವವನ್ನೂ ಕಳೆದುಕೊಳ್ಳಬಹುದು. ಭಾರತೀಯ ಡ್ರೆಸ್ಸಿಂಗ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ನಿಜ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ.

Latest Videos

click me!