ಧೋನಿ ಬಳಿಕ ವಿರುಷ್ಕಾ ಜೋಡಿಗೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಆಹ್ವಾನ, ಇನ್ವಿಟೇಶನ್ ಪಡೆದ ಕ್ರಿಕೆಟಿಗರ ಲಿಸ್ಟ್!

Published : Jan 16, 2024, 08:06 PM ISTUpdated : Jan 16, 2024, 08:08 PM IST

ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಆಯೋಧ್ಯೆಯಲ್ಲಿ ಪೂಜಾ ಕೈಂಕರ್ಯ ಆರಂಭಗೊಂಡಿದೆ. ಜ.22ರ ಪ್ರಾಣಪ್ರತಿಷ್ಠೆಗೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಇದೀಗ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೂ ಆಹ್ವಾನ ನೀಡಲಾಗಿದೆ. 

PREV
18
ಧೋನಿ ಬಳಿಕ ವಿರುಷ್ಕಾ ಜೋಡಿಗೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಆಹ್ವಾನ, ಇನ್ವಿಟೇಶನ್ ಪಡೆದ ಕ್ರಿಕೆಟಿಗರ ಲಿಸ್ಟ್!

ಜನವರಿ 22ರಂದು ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ಸಾವಿರಾರು ಗಣ್ಯರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಈ ಪೈಕಿ ಇಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾಗೆ ಆಹ್ವಾನ ನೀಡಲಾಗಿದೆ.
 

28

ಆಫ್ಘಾನಿಸ್ತಾನ ವಿರುದ್ಧದ ಟಿ20 ಕ್ರಿಕೆಟ್‌ನಲ್ಲಿ ಬ್ಯೂಸಿಯಾಗಿರುವ ವಿರಾಟ್ ಕೊಹ್ಲಿ  ತಮ್ಮ ಬ್ಯೂಸಿ ಶೆಡ್ಯೂಲ್ ನಡುವೆ ರಾಮ ಮಂದಿರ ಆಹ್ವಾನ ಸ್ವೀಕರಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

38

ಇಂದೋರ್‌ನಲ್ಲಿನ 2ನೇ ಟಿ20 ಪಂದ್ಯ ಗೆದ್ದ ಟೀಂ ಇಂಡಿಯಾ ನೇರವಾಗಿ 3ನೇ ಹಾಗೂ ಅಂತಿಮ ಪಂದ್ಯಕ್ಕಾಗಿ ಬೆಂಗಳೂರಿಗೆ ಪ್ರಯಾಣ ಮಾಡಿತ್ತು. ಆದರೆ ವಿರಾಟ್ ಕೊಹ್ಲಿ ಮುಂಬೈಗೆ ಪ್ರಯಾಣ ಮಾಡಿದ್ದರು.

48

ಆಯೋಧ್ಯೆ ರಾಮ ಮಂದಿರ ಆಹ್ವಾನ ಸ್ವೀಕರಿಸಲು ವಿರಾಟ್ ಕೊಹ್ಲಿ ಇಂದೋರ್‌ನಿಂದ ಮುಂಬೆನಲ್ಲಿರುವ ಮನೆಗೆ ಮರಳಿದ್ದರು. ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ಸ್ವೀಕರಿಸಲು ಕೊಹ್ಲಿ ಮುಂಬೆಗೆ ಮರಳಿದ್ದರು.

58

ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕೊಹ್ಲಿ ಹಾಗೂ ಅನುಷ್ಕಾ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ಸ್ವೀಕರಿಸಿದ್ದಾರೆ. ಇನ್ನು ಮುಂಬೈನಿಂದ ಕೊಹ್ಲಿ ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

68

ಕೊಹ್ಲಿಗೂ ಮೊದಲು ಟೀಂ ಮಾಜಿ ನಾಯಕ ಎಂ.ಎಸ್.ಧೋನಿಗೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ನೀಡಲಾಗಿದೆ. ಧೋನಿ ರಾಂಚಿ ನಿವಾಸದಲ್ಲಿ ಆಹ್ವಾನ ಸ್ವೀಕರಿಸಿದ್ದಾರೆ.
 

78

ಕ್ರಿಕೆಟಿಗರ ಪೈಕಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಅವರ ಕುಟುಂಬಕ್ಕೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ನೀಡಲಾಗಿದೆ. ಸಚಿನ್ ಕುಟುಂಬ ಸಮೇತ ಜನವರಿ 22ರಂದು ಆಯೋಧ್ಯೆಗೆ ತೆರಳುವ ಸಾಧ್ಯತೆ ಇದೆ.

88

ಮಾಜಿ ಕ್ರಿಕೆಟಿಗ, ಕರ್ನಾಟಕದ ವೆಂಕಟೇಶ್ ಪ್ರಸಾದ್ ಕೂಡ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಆಹ್ವಾನ ಸ್ವೀಕರಿಸಿದ್ದಾರೆ. ವೆಂಕಟೇಶ್ ಪ್ರಸಾದ್ ಜನವರಿ 22ರಂದು ಆಯೋಧ್ಯೆಗೆ ತೆರಳುವುದಾಗಿ ಹೇಳಿದ್ದಾರೆ.

Read more Photos on
click me!

Recommended Stories