ಆರ್‌ಸಿಬಿ ಟ್ರೋಫಿ ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿ ಎರಡೇ ದಿನಕ್ಕೆ ವೃಂದಾವನದಲ್ಲಿ ಪ್ರಮಾನಂದ ಮಹಾರಾಜ್ ಗುರೂಜಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ವಿಶೇಷ ಅಂದರೆ ಭಗವದ್ಗೀತೆ ಕೈಯಲ್ಲಿ ಹಿಡಿದು ಆಶೀರ್ವಾದ ಪಡೆದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಮತ್ತೆ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಅಜೇಯ 75 ರನ್ ಸಿಡಿಸಿ ಮಿಂಚಿದ್ದರು. ತಂಡದ ಸಂಘಟಿತ ಹೋರಾಟ, ಕೊಹ್ಲಿ ಅಬ್ಬರಿಂದ ಆರ್‌ಸಿಬಿ ಚಾಂಪಿಯನ್ ಆಗಿದೆ. ಟ್ರೋಫಿ ಗೆದ್ದ ಎರಡನೇ ದಿನಕ್ಕೆ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜ್ ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
26
ಭಗವದ್ಗೀತೆ ಪುಸ್ತಕ ಹಿಡಿದು ದರ್ಶನ ಪಡೆದ ಕೊಹ್ಲಿ
ವೃಂದಾನವನ ಆಶ್ರಮಕ್ಕೆ ಸರಳ ಡ್ರೆಸ್‌ನಲ್ಲಿ ಬಂದಿಳಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಬರಿಗಾಲಲ್ಲಿ ನಡೆದು ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ತೆರಳಿದ್ದಾರೆ.ವಿಶೇಷ ಆಂದರೆ ಪ್ರಮಾನಂದ ಮಹಾರಾಜ್ ಗುರುಗಳು ಭೇಟಿ ವೇಳೆ ವಿರಾಟ್ ಕೊಹ್ಲಿಗೆ ಭಗವದ್ಗೀತೆ ನೀಡಿದ್ದಾರೆ.
36
ಕೊಹ್ಲಿ ಹಾಗೂ ಅನುಷ್ಕಾಗೆ ಪ್ರವಚನ
ಭಗವದ್ಗೀತೆ ಹಿಡಿದು ಹೊರಬಂದ ವಿರಾಟ್ ಕೊಹ್ಲಿ ಜೋಪಾವನಾಗಿ ಕೈಯಲ್ಲಿ ಹಿಡಿದು ಸಾಗಿದ್ದಾರೆ. ಇದೇ ವೇಳೆ ಪತ್ನಿ ಅನುಷ್ಕಾ ಶರ್ಮಾ ಕೊಹ್ಲಿಗೆ ಸಾಥ್ ನೀಡಿದ್ದಾರೆ. ಪ್ರೇಮಾನಂದ ಮಹಾರಾಜ ಗುರುಗಳ ಭೇಟಿಯಲ್ಲಿ ಕೆಲ ಹೊತ್ತು ವಿರುಷ್ಕಾ ದಂಪತಿ ಕಳೆದಿದ್ದಾರೆ. ಆಧ್ಯಾತ್ಮಿಕ ಸಮಯದಲ್ಲಿ ಮಹಾರಾಜ ಗುರುಗಳು ಪ್ರವಚನ ಮಾಡಿದ್ದಾರೆ.
ಪ್ರೇಮಾನಂದ ಮಹಾರಾಜ ಗುರುಗಳ ವೃಂದನಾವನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವುದು ಇದೇ ಮೊದಲಲ್ಲ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರತಿ ಸರಣಿಗೂ ಮುನ್ನ ಸೇರಿದಂತೆ ಹಲವು ವಿಶೇಷ ಸಂದರ್ಭಗಳಲ್ಲೂ ದಂಪತಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
56
ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ
ಕೆಲ ಹೊತ್ತು ಆಶ್ರಮದಲ್ಲಿ ಕಳೆದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬಳಿಕ ಆಗ್ರಾ ವಿಮಾನ ನಿಲ್ದಾಣ ಮೂಲಕ ಮರಳಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಆಧ್ಯಾತ್ಮಕ ಪ್ರವಾಸ ಕುರಿತು ಇದೀಗ ಸೋಶಿಯ್ ಮೀಡಿಯಾಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
66
ಆರ್‌ಸಿಬಿ ನಂ.1
2025ರಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದ ಆರ್‌ಸಿಬಿ, 2026ರಲ್ಲಿ ಸತತ 2ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ಪ್ರತಿ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿತ್ತು. ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಪ್ರತಿಯೊಬ್ಬ ಆಟಗಾರನ ಕೊಡುಗೆಯಿಂದ ಆರ್‌ಸಿಬಿ ಇದೀಗ ನಂ.1 ತಂಡವಾಗಿ ಗುರುತಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.