Vaibhav Suryavanshi Education Qualification: ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಶಿಕ್ಷಣದ ಬಗ್ಗೆ ನಿಮಗೆ ಗೊತ್ತಾ? ತಾಜ್‌ಪುರದ ಪುಟ್ಟ ಹಳ್ಳಿಯಿಂದ ಬಂದ 14 ವರ್ಷದ ವೈಭವ್, ಯಾವ ಕ್ಲಾಸ್‌ನಲ್ಲಿ ಓದುತ್ತಿದ್ದಾರೆ, ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಅವರ ಶೈಕ್ಷಣಿಕ ಹಿನ್ನೆಲೆ ಮತ್ತು ಶಾಲಾ ಜೀವನದ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ. ವೈಭವ್ ಸೂರ್ಯವಂಶಿ ಕೇವಲ ಮೈದಾನದಲ್ಲಿ ಮಾತ್ರವಲ್ಲ, ತಮ್ಮ ಓದಿನ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. 14ನೇ ವಯಸ್ಸಿಗೆ ಕ್ರಿಕೆಟ್ ಮೈದಾನದಲ್ಲಿ ಸಂಚಲನ ಮೂಡಿಸಿರುವ ಅವರು ಸದ್ಯ ಶಾಲೆಯಲ್ಲಿ ಓದುತ್ತಿದ್ದಾರೆ.
26
ವೈಭವ್ ಸೂರ್ಯವಂಶಿ 9ನೇ ಕ್ಲಾಸ್ ಸ್ಟೂಡೆಂಟ್
ವೈಭವ್ ಸದ್ಯ 9ನೇ ತರಗತಿ ವಿದ್ಯಾರ್ಥಿ. ಆದರೆ, ಅವರ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ, ಓದಿನ ಹಾದಿ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ವೈಭವ್ ಅವರ ಆರಂಭಿಕ ಶಿಕ್ಷಣ ಸಮಸ್ತಿಪುರದ ತಾಜ್‌ಪುರ ಎಂಬ ತಮ್ಮ ಹಳ್ಳಿಯಲ್ಲಿ ಶುರುವಾಯಿತು. ಕ್ರಿಕೆಟ್‌ನಲ್ಲಿ ಸುಧಾರಣೆ ಕಂಡಂತೆ, ಓದು ಮತ್ತು ಅಭ್ಯಾಸದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಯಿತು.
36
ಬೆಳಗ್ಗೆ ಶಾಲೆ, ಸಂಜೆ ಕ್ರಿಕೆಟ್
ವೈಭವ್ ಬಿಹಾರದ ಡಾ. ಮುಕ್ತೇಶ್ವರ್ ಸಿನ್ಹಾ ಮಾಡೆಸ್ಟಿ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಲೆಯ ವೆಬ್‌ಸೈಟ್ ಪ್ರಕಾರ, ವಾರ್ಷಿಕ ಶುಲ್ಕ 5,300 ರೂ. ಇದರಲ್ಲಿ 2,100 ರೂ. ಟ್ಯೂಷನ್, 800 ರೂ. ಪರೀಕ್ಷೆ ಮತ್ತು 2,400 ರೂ. ಚಟುವಟಿಕೆ ಶುಲ್ಕ ಸೇರಿದೆ. ಕೇವಲ 4 ವರ್ಷದವರಿದ್ದಾಗ ಅವರ ತಂದೆ ಕೈಗೆ ಬ್ಯಾಟ್ ಕೊಟ್ಟಿದ್ದರು. ಆದರೂ, ವೈಭವ್ ಅವರ ಪ್ರಾಥಮಿಕ ಶಿಕ್ಷಣ ನಿರಂತರವಾಗಿ ಸಾಗಿತ್ತು. ಬೆಳಿಗ್ಗೆ ಶಾಲೆ, ಸಂಜೆ ಕ್ರಿಕೆಟ್, ಎರಡೂ ಒಟ್ಟೊಟ್ಟಿಗೆ ನಡೆಯುತ್ತಿತ್ತು.
ಏನೇ ಮಾಡಿದರೂ ಮನಸ್ಸಿಟ್ಟು ಮಾಡಬೇಕು ಎನ್ನುವುದು ವೈಭವ್ ಗುರಿ
ನಿರಂತರ ಕ್ರಿಕೆಟ್ ಟೂರ್ನಮೆಂಟ್‌ಗಳು ಮತ್ತು ಪ್ರಯಾಣದಿಂದಾಗಿ ವೈಭವ್ ಅವರ ಓದಿನ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ವೈಭವ್ ತುಂಬಾ ಶ್ರಮಜೀವಿ, ಆದರೆ ಕ್ರಿಕೆಟ್‌ನಿಂದಾಗಿ ಓದುವ ಸಮಯ ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾರೆ ಅವರ ಕೋಚ್. ವೈಭವ್ ಪ್ರಕಾರ, 'ಏನೇ ಮಾಡಿದರೂ ಮನಸ್ಸಿಟ್ಟು ಮಾಡಬೇಕು'. ಹಾಗಾಗಿಯೇ ಅವರು ಶಾಲೆಯ ಅಂಕಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರ ಗಮನ ಕೌಶಲ್ಯ, ಫಿಟ್‌ನೆಸ್ ಮೇಲೆ ಇದೆ.
56
ಭವಿಷ್ಯದ ತಾರೆಯಾಗಿ ಗುರುತಿಸಿಕೊಳ್ಳುತ್ತಿರುವ ವೈಭವ್
ಶಿಕ್ಷಣವು ವೈಭವ್ ಸೂರ್ಯವಂಶಿ ಅವರ ಕ್ರಿಕೆಟ್ ಆಟವನ್ನು ಮತ್ತಷ್ಟು ಪರಿಪಕ್ವ ಮಾಡಿದೆ. ಪಂದ್ಯದ ಸನ್ನಿವೇಶವನ್ನು ಅರಿಯುವುದು, ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಇದೆಲ್ಲವನ್ನೂ ಅವರು ಶಾಲೆಯ ಮೂಲ ಶಿಕ್ಷಣದಿಂದಲೇ ಕಲಿತಿದ್ದಾರೆ. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಸ್ಪೋಟಕ ಆರಂಭ ಒದಗಿಸಿಕೊಡುತ್ತಾ ಬಂದಿರುವ ವೈಭವ್ ಸೂರ್ಯವಂಶಿ, ಭಾರತದ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದಾರೆ.
66
ಓದು ಮುಂದುವರೆಸುವ ಆಲೋಚನೆಯಲ್ಲಿದ್ದಾರೆ ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಅವರು ಓದನ್ನು ಮುಂದುವರಿಸುವ ಆಲೋಚನೆ ಹೊಂದಿದ್ದಾರೆ. ಕ್ರಿಕೆಟ್ ಜೊತೆಗೆ ತಮ್ಮ ಶಿಕ್ಷಣವನ್ನೂ ಮುಂದುವರಿಸಲು ಅವರು ಬಯಸುತ್ತಾರೆ. ಇವರ ಪಯಣ ಒಂದನ್ನು ಸ್ಪಷ್ಟಪಡಿಸುತ್ತದೆ, ಅದೇನೆಂದರೆ, ಮನಸ್ಸಿದ್ದರೆ ಮಾರ್ಗವುಂಟು, ಆಟ-ಪಾಠ ಎರಡನ್ನೂ ಒಟ್ಟಿಗೆ ನಿಭಾಯಿಸಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.