ಬ್ಯೂಸಿನೆಸ್ ಹೆಸ್ರಲ್ಲಿ ಕ್ರಿಕೆಟಿಗ ದೀಪಕ್ ಚಹಾರ್ ಪತ್ನಿಗೆ 10 ಲಕ್ಷ ರೂ ವಂಚನೆ, ಕಂಗಾಲಾದ ಜಯಾ!

First Published | Feb 3, 2023, 8:01 PM IST

ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹಾರ್ ಪತ್ನಿ ಕಂಗಾಲಾಗಿದ್ದಾರೆ. ಬರೋಬ್ಬರಿ 10 ಲಕ್ಷ ರೂಪಾಯಿ ಹಣ ವಂಚಿಸಲಾಗಿದೆ. ಇದೀಗ ದೀಪಕ್ ಚಹಾರ್ ತಂದೆ ಪೊಲೀಸರಿಗೆ ದೂರು ನೀಡಿ ನ್ಯಾಯ ಒದಗಿಸಲು ಮನವಿ ಮಾಡಿದ್ದಾರೆ. ಏನಿದು 10 ಲಕ್ಷ ರೂಪಾಯಿ ವಂಚನೆ ಪ್ರಕರಣ?

ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹಾರ್ ಸತತ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ದೀಪಕ್ ಚಹಾರ್ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.  ದೀಪಕ್ ಚಹಾರ್ ಪತ್ನಿ ಜಯಾ ಭಾರದ್ವಾಜ್  ಮೋಸದ ಬಲೆಗೆ ಸಿಲುಕಿದ್ದಾರೆ. ಒಂದಲ್ಲ , ಎರಡಲ್ಲ, ಬರೋಬ್ಬರಿ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 

ಹೈದರಾಬಾದ್ ಮೂಲದ ಧ್ರುವ ಪರೇಕ್ ಹಾಗೂ ಕಮಲೇಶ್ ಪರೇಕ್ ಅನ್ನೋ ಇಬ್ಬರು ಬ್ಯೂಸಿನೆಸ್ ಹಾಗೂ ಹೂಡಿಕೆ ಹೆಸರಲ್ಲಿ ದೀಪಕ್ ಚಹಾರ್ ಪತ್ನಿಯನ್ನು ಸಂಪರ್ಕಿಸಿದ್ದಾರೆ. ದೀಪಕ್ ಚಹಾರ್ ಬಹುತೇಕ ವ್ಯವಹಾರಗಳನ್ನು ಪತ್ನಿ ಜಯಾ ಭಾರದ್ವಾಜ್ ನೋಡಿಕೊಳ್ಳುತ್ತಿದ್ದಾರೆ.

Tap to resize

ಧ್ರುವ ಪರೇಕ್ ಹಾಗೂ ಕಮಲೇಶ್ ಪರೇಕ್ ಬ್ಯೂಸಿನೆಸ್‌ನಲ್ಲಿ ಹೂಡಿಕೆ ಹಾಗೂ ಲಾಭದ ಆಸೆ ತೋರಿಸಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಚಹಾರ್ ಪತ್ನಿ ಜಯಾ ಭಾರದ್ವಾಜ್ ಹಿಂದೂ ಮುಂದೂ ನೋಡದೆ 10 ಲಕ್ಷ ರೂಪಾಯಿ ನೀಡಿದ್ದಾರೆ.

ಈ ಆರೋಪಗಳಿಲ್ಲಿ ಒರ್ವ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಸಿಬ್ಬಂದಿಯಾಗಿದ್ದಾನೆ. ಇದೇ ಕಾರಣಕ್ಕೆ ಜಯಾ ಭಾರದ್ವಾಜ್ ಹೆಚ್ಚು ತಲೆಕೆಡಿಸಿಕೊಳ್ಳದೇ 10 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಆದರೆ ಹಣ ಪಡೆದ ಪರೇಕ್ ಬ್ರದರ್ಸ್ ನಾಪತ್ತೆಯಾಗಿದ್ದಾರೆ. ಫೋನ್ ಸ್ವಿಚ್ ಆಫ್ ಆಗಿದೆ.

ಅಕ್ಟೋಬರ್ 7, 2022ರಲ್ಲಿ ಜಯಾ ಭಾರದ್ವಾಜ್ 10 ಲಕ್ಷ ರೂಪಾಯಿ ಹಣವನ್ನು ಪರೇಖ್ ಬ್ರದರ್ಸ್‌ಗೆ ನೀಡಿದ್ದಾರೆ. ಇದುವರೆಗೆ ಈ ಹಣ ಹಿಂತುರಿಗಿಸಿಲ್ಲ. ಲಾಭ, ಹೂಡಿಕೆ ಕುರಿತು ಮಾತನಾಡಿದ್ದ ಇವರು ಇದೀಗ ಅಸಲು ಹಣ ಹಿಂತಿರುಗಿಸಿಲ್ಲ. ಇದಕ್ಕಾಗಿ ಹಲವು ಪ್ರಯತ್ನ ಮಾಡಿರುವ ಜಯ ಭಾರದ್ವಾಜ್ ಕೊನೆಗೆ ದೀಪಕ್ ಚಹಾರ್ ತಂದೆಯ ಬಳಿ ಹೇಳಿದ್ದಾರೆ.

ದೀಪಕ್ ಚಹಾರ್ ತಂದೆ ಲೋಕೇಂದ್ರ ಜಹಾರ್ ಆಗ್ರದ ಹರಿ ವರ್ವತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಜೊತೆಗೆ ಹಣ ನೀಡಿರುವ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ದೀಪಕ್ ಚಹಾರ್ ಹಾಗೂ ಜಯಾ ಭಾರದ್ವಾಜ್ ಜೂನ್ 2, 2022ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2021ರ ಐಪಿಎಲ್ ಪಂದ್ಯದ ವೇಳೆ ಜಯಾ ಭಾರದ್ವಾಜ್‌ಗೆ ದೀಪಕ್ ಚಹಾರ್ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. 

ದೀಪಕ್ ಚಹಾರ್ ಪ್ರೇಮ ನಿವೇದನೆ ಒಪ್ಪಿಕೊಂಡಿದ್ದ ಜಯಾ ಭಾರದ್ವಾಜ್ ಸರಿಸುಮಾರು ಒಂದು ವರ್ಷ ಪ್ರಣಯ ಹಕ್ಕಿಗಳಂತೆ ಹಾರಾಡಿದ್ದರು. ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಜಯಾ ಭಾರದ್ವಾಜ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

Latest Videos

click me!