IPL ಮತ್ತು PSL ಎರಡೂ ಟೂರ್ನಿಯಲ್ಲೂ ಕ್ಯಾಪ್ಟನ್ ಆದ ಟಾಪ್ 8 ನಾಯಕರಿವರು!

Published : Apr 08, 2026, 11:05 AM IST

ಬೆಂಗಳೂರು: ಸದ್ಯ ಏಕಕಾಲದಲ್ಲಿ ಐಪಿಎಲ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿ ನಡೆಯುತ್ತಿದೆ. ಕರಾಚಿ ಕಿಂಗ್ಸ್ ನಾಯಕ ಡೇವಿಡ್ ವಾರ್ನರ್ ಅರೆಸ್ಟ್‌ ಆದ ಬೆನ್ನಲ್ಲೇ ಕ್ಯಾಪ್ಟನ್ಸ್ ವಿಚಾರ ಮುನ್ನಲೆಗೆ ಬಂದಿದೆ. ಇದೀಗ ಐಪಿಎಲ್ & ಪಿಎಸ್‌ಎಲ್‌ನಲ್ಲಿ ಕ್ಯಾಪ್ಟನ್ ಆದ ಟಾಪ್-8 ಆಟಗಾರರು ಯಾರೆಂದು ನೋಡೋಣ. 

PREV
18
1. ಡೇವಿಡ್ ವಾರ್ನರ್:

ಐಪಿಎಲ್‌ ಹಾಗೂ ಪಿಎಸ್‌ಎಲ್‌ನ ಯಶಸ್ವಿ ನಾಯಕರಲ್ಲಿ ಡೇವಿಡ್ ವಾರ್ನರ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ವಾರ್ನರ್‌ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. 2016ರಲ್ಲಿ ವಾರ್ನರ್ ನೇತೃತ್ವದ ಆರೆಂಜ್ ಆರ್ಮಿ ಐಪಿಎಲ್ ಟ್ರೋಫಿ ಜಯಿಸಿತ್ತು. ಇನ್ನು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವಾರ್ನರ್ ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

28
2. ಶೇನ್ ವಾಟ್ಸನ್:

ಆಸೀಸ್ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ಇನ್ನು ಪಿಎಸ್‌ಎಲ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಎರಡು ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

38
3. ಬ್ರೆಂಡನ್ ಮೆಕ್ಕಲಂ:

ಸೌರವ್ ಗಂಗೂಲಿ ಬಳಿಕ 2009ರಲ್ಲಿ ಬ್ರೆಂಡನ್ ಮೆಕ್ಕಲಂ ನಾಯಕರಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಇದಾದ ಬಳಿಕ 2016ರಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಒಂದು ಪಂದ್ಯದಲ್ಲಿ ಮುನ್ನಡೆಸಿದ್ದರು. ಇನ್ನು ಪಿಎಸ್‌ಎಲ್‌ನಲ್ಲಿ ಮೆಕ್ಕಲಂ ಲಾಹೋರ್ ಖಲಂದರ್ಸ್ ತಂಡವನ್ನು 18 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಆದರೆ ಲಾಹೋರ್ ತಂಡವು ಈ ಪೈಕಿ 11 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.

48
4. ಡ್ಯಾರನ್ ಸ್ಯಾಮಿ:

ಡ್ಯಾರನ್ ಸ್ಯಾಮಿ 2014ರಲ್ಲಿ ನಾಲ್ಕು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು. ಇನ್ನು ಪಿಎಸ್‌ಎಲ್ ಟೂರ್ನಿಯಲ್ಲಿ ಪೇಶಾವರ್ ಝಲ್ಮಿ ತಂಡವನ್ನು ಮುನ್ನಡೆಸಿದ್ದರು. ಸ್ಯಾಮಿ ನಾಯಕತ್ವದಲ್ಲೇ ಝಲ್ಮಿ ತಂಡವು 2017ರಲ್ಲಿ ಪಿಎಸ್‌ಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

58
5. ಕುಮಾರ ಸಂಗಕ್ಕರ:

ರಾಜಸ್ಥಾನ ರಾಯಲ್ಸ್ ತಂಡದ ಹಾಲಿ ಹೆಡ್‌ಕೋಚ್ ಆಗಿರುವ ಕುಮಾರ ಸಂಗಕ್ಕರ, ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರು. ಐಪಿಎಲ್‌ನಲ್ಲಿ ಸಂಗಾ ಒಟ್ಟು 47 ಪಂದ್ಯಗಳನ್ನು ಮುನ್ನಡೆಸಿ ಕೇವಲ 15 ಪಂದ್ಯಗಳನ್ನಷ್ಟೇ ಗೆದ್ದಿದ್ದರು. ಇನ್ನು ಪಿಎಸ್‌ಎಲ್‌ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು 10 ಪಂದ್ಯಗಳಲ್ಲಿ ಮುನ್ನಡೆಸಿದ್ದರು.

68
6. ಇಯಾನ್ ಮಾರ್ಗನ್:

ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್, 2020 ಹಾಗೂ 2021ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿ ಫೈನಲ್‌ಗೂ ಕೊಂಡೊಯ್ದಿದ್ದರು. ಇನ್ನು ಪಿಎಸ್‌ಎಲ್ ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು.

78
7. ಜೆಪಿ ಡುಮಿನಿ:

ಜೆಪಿ ಡುಮಿನಿ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಇನ್ನು ಐಪಿಎಲ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಎರಡು ಪಂದ್ಯಗಳಲ್ಲಿ ನಾಯಕರಾಗಿ ಮುನ್ನಡೆಸಿದ್ದರು.

88
8. ಡ್ವೇನ್ ಬ್ರಾವೋ:

ವೆಸ್ಟ್‌ ಇಂಡೀಸ್ ದಿಗ್ಗಜ ಆಲ್ರೌಂಡರ್ ಡ್ವೇನ್ ಬ್ರಾವೋ ಐಪಿಎಲ್ ಹಾಗೂ ಪಿಎಸ್‌ಎಲ್ ಟೂರ್ನಿಯಲ್ಲಿ ಹಂಗಾಮಿ ನಾಯಕರಾಗಿದ್ದರು. 2010ರ ಐಪಿಎಲ್‌ನ ಒಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಇನ್ನು 2016ರ ಪಿಎಸ್‌ಎಲ್‌ನಲ್ಲಿ ಲಾಹೋರ್ ಖಲಂದರ್ಸ್ ತಂಡವನ್ನು ಹಂಗಾಮಿ ನಾಯಕನಾಗಿ ಒಂದು ಪಂದ್ಯದಲ್ಲಿ ಮುನ್ನಡೆಸಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories