ಗುವಾಹಟಿ: ಇಂಗ್ಲೆಂಡ್ ದಿಗ್ಗಜ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಬೆಂಬಲಿಸಲು ಹೋಗಿ ತಮ್ಮ ಕ್ರಿಕೆಟ್ ಬದುಕು ಹಾಳು ಮಾಡಿಕೊಂಡೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಕೆವಿನ್ ಪೀಟರ್‌ಸನ್ ಏನಂದ್ರು ನೋಡೋಣ ಬನ್ನಿ.
ಐಪಿಎಲ್ ಆಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಜೊತೆ ನಾನು ನಡೆಸಿದ ಹೋರಾಟದಿಂದಾಗಿಯೇ ನನ್ನ ಅಂತರರಾಷ್ಟ್ರೀಯ ಕೆರಿಯರ್ ಬೇಗ ಮುಗಿದುಹೋಯ್ತು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
26
ನಾನು ಕಷ್ಟಪಟ್ಟಿದ್ದಕ್ಕೆ ಈಗಿನ ಆಟಗಾರರಿಗೆ ಅನುಕೂಲವಾಗಿದೆ
ಫ್ರಾಂಚೈಸಿ ಕ್ರಿಕೆಟ್‌ಗೆ ತಾವು ಪ್ರಾಮುಖ್ಯತೆ ನೀಡಿದ್ದಕ್ಕೆ ಆಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, ತಮ್ಮ ಆ ನಿಲುವಿನಿಂದಾಗಿ ನಂತರದ ಆಟಗಾರರಿಗೆ ಅಂತರರಾಷ್ಟ್ರೀಯ ಪಂದ್ಯಗಳ ಜೊತೆಗೆ ಟಿ20 ಲೀಗ್‌ಗಳನ್ನೂ ಆಡಲು ದಾರಿ ಸುಗಮವಾಯಿತು ಎಂದೂ ಅವರು ತಿಳಿಸಿದ್ದಾರೆ.
36
ನಾನು 150-160 ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು!
ಈ ಕುರಿತಂತೆ ಮಾತನಾಡಿರುವ ಅವರು "ಐಪಿಎಲ್ ಆಡಲು ನಾನು ದೊಡ್ಡ ತ್ಯಾಗವನ್ನೇ ಮಾಡಬೇಕಾಯ್ತು, ನನ್ನ ಕೆರಿಯರ್ ಅನ್ನೇ ಕಳೆದುಕೊಂಡೆ. ನಿಜ ಹೇಳಬೇಕೆಂದರೆ, ನಾನು 150-160 ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು. ಆಗ ನಾನು 12,000 ದಿಂದ 13,000 ರನ್ ಗಳಿಸಬಹುದಿತ್ತು," ಎಂದಿದ್ದಾರೆ.
"ಕ್ರಿಕೆಟ್ ಅಧಿಕಾರಿಗಳು ನನ್ನ ವಿರುದ್ಧ ತಿರುಗಿಬೀಳಲು ಇದೊಂದೇ ಕಾರಣವಾಗಿತ್ತು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪೀಟರ್ಸನ್ ತಮ್ಮ 33ನೇ ವಯಸ್ಸಿನಲ್ಲಿ, 104 ಟೆಸ್ಟ್ ಪಂದ್ಯಗಳನ್ನು ಆಡಿ 8,181 ರನ್ ಗಳಿಸಿದ್ದರು. ಇದರಲ್ಲಿ 23 ಶತಕ ಹಾಗೂ 35 ಅರ್ಧಶತಕಗಳು ಸೇರಿವೆ. ಇದಾದ ಬಳಿಕ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಕೊನೆಯಾಯಿತು.
56
ಇಸಿಬಿ ಟಾರ್ಗೆಟ್ ಮಾಡಲು ಮಾಧ್ಯಮಗಳನ್ನು ಬಳಸಿಕೊಂಡಿತು
2009ರ ಐಪಿಎಲ್ ಎರಡನೇ ಸೀಸನ್‌ನಲ್ಲಿ ಇಂಗ್ಲೆಂಡ್ ಆಟಗಾರರಿಗೆ ಕೇವಲ ಮೂರು ವಾರಗಳ ಕಾಲ ಆಡಲು ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಆಗಿನ ಕೋಚ್ ಪೀಟರ್ ಮೂರ್ಸ್ ಜೊತೆಗಿನ ಜಗಳ ಮತ್ತು ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ಗೆ ಹೆಚ್ಚು ಆದ್ಯತೆ ನೀಡಿದ ಪೀಟರ್ಸನ್ ನಿರ್ಧಾರ, ಬೋರ್ಡ್ ಜೊತೆಗಿನ ಸಂಬಂಧವನ್ನು ಹಾಳುಮಾಡಿತು. "ಇಸಿಬಿ ನನ್ನನ್ನು ಟಾರ್ಗೆಟ್ ಮಾಡಲು ಮಾಧ್ಯಮಗಳನ್ನು ಬಳಸಿಕೊಂಡಿತು," ಎಂದು ಪೀಟರ್ಸನ್ ಗಂಭೀರ ಆರೋಪ ಮಾಡಿದ್ದಾರೆ.
66
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್
ಐಪಿಎಲ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳ ಪರ ಆಡಿದ್ದಾರೆ. ಇದೀಗ 2025ರಿಂದ ಸೀಸನ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪೀಟರ್ಸನ್‌ರನ್ನು ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.