ಬೆಂಗಳೂರು: ಕ್ರಿಕೆಟ್‌ನಲ್ಲಿ ಪ್ರತಿದಿನ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತವೇ ಹಾಗೆಯೇ ಅಪರೂಪದ ದಾಖಲೆಗಳು ಬ್ರೇಕ್ ಆಗುತ್ತವೆ. ಬನ್ನಿ ನಾವಿಂದು 2025ರಲ್ಲಿ ದಾಖಲಾದ ಅಪರೂಪದಲ್ಲೇ ಅಪರೂಪದ ಟಾಪ್-5 ದಾಖಲೆಗಳು ಯಾವುವು ಎನ್ನುವುದನ್ನು ನೋಡೋಣ.
2025 ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ 2025ರಲ್ಲಿ ನುಚ್ಚುನೂರಾದ ಕ್ರಿಕೆಟ್ ಜತ್ತಿನ ಐದು ಅಪರೂಪದ ದಾಖಲೆಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.
26
1. 413 ರನ್ ಚೇಸ್ ಮಾಡಿ ಗೆದ್ದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಜಾರ್ಖಂಡ್ ಎದುರು 413 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಹೊಸ ಇತಿಹಾಸ ಬರೆದಿದೆ. ಲಿಸ್ಟ್ 'ಎ' ಕ್ರಿಕೆಟ್ ಇತಿಹಾಸದಲ್ಲಿ 413 ರನ್ ಯಶಸ್ವಿಯಾಗಿ ಚೇಸ್ ಮಾಡಿದ ಭಾರತದ ಮೊದಲ ಕ್ರಿಕೆಟ್ ತಂಡ ಎನ್ನುವ ಅಪರೂಪದ ದಾಖಲೆಗೆ ಕರ್ನಾಟಕ ಪಾತ್ರವಾಗಿದೆ.
36
2. ದೀಪ್ತಿ ಶರ್ಮಾ ಡಬಲ್ ಧಮಾಕಾ:
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅನುಭವಿ ಆಲ್ರೌಂಡರ್ ದೀಪ್ತಿ ಶರ್ಮಾ ಅಪರೂಪದ ದಾಖಲೆ ನಿರ್ಮಿಸಿದ್ದರು. ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ 200+ ರನ್ ಹಾಗೂ 20+ ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ಆಲ್ರೌಂಡರ್ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ಎನ್ನುವ ದಾಖಲೆ ದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹೆಸರಿನಲ್ಲಿತ್ತು. ದ್ರಾವಿಡ್ ಕ್ಷೇತ್ರರಕ್ಷಕನಾಗಿ 210 ಕ್ಯಾಚ್ ಪಡೆದಿದ್ದರು. ಇದೀಗ ಇಂಗ್ಲೆಂಡ್‌ನ ಜೋ ರೂಟ್ 213 ಕ್ಯಾಚ್ ಹಿಡಿಯುವ ಮೂಲಕ ದ್ರಾವಿಡ್ ವಿಶ್ವದಾಖಲೆ ಬ್ರೇಕ್ ಮಾಡಿದ್ದಾರೆ.
56
4. ಸಚಿನ್ ದಾಖಲೆ ಮುರಿದು ಬ್ರಾಡ್ಮನ್ ಹಾದಿಯಲ್ಲಿ ಜೈಸ್ವಾಲ್
ಇನ್ನು ಯಶಸ್ವಿ ಜೈಸ್ವಾಲ್ ತಮ್ಮ 24ನೇ ವರ್ಷ ತುಂಬುವುದರೊಳಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಐದನೇ ಬಾರಿಗೆ 150+ ರನ್ ಬಾರಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ದಾಖಲೆ ಬ್ರೇಕ್ ಮಾಡಿ, ಸರ್ ಡಾನ್ ಬ್ರಾಡ್ಮನ್ ಹಾದಿಯಲ್ಲಿ ಸಾಗುತ್ತಿದ್ದಾರೆ.
66
5. ಒಂದೇ ಓವರ್‌ನಲ್ಲಿ 13 ಎಸೆತಗಳನ್ನು ಹಾಕಿದ ಅರ್ಶದೀಪ್ ಸಿಂಗ್
ದಕ್ಷಿಣ ಆಫ್ರಿಕಾ ಎದುರಿನ ಟಿ20 ಪಂದ್ಯದಲ್ಲಿ ಅರ್ಶದೀಪ್ ಸಿಂಗ್, ಒಂದೇ ಓವರ್‌ನಲ್ಲಿ ಏಳು ವೈಡ್ ಸೇರಿದಂತೆ 13 ಎಸೆತಗಳನ್ನು ಎಸೆಯುವ ಮೂಲಕ ಅತ್ಯಂತ ಕೆಟ್ಟ ದಾಖಲೆ ಬರೆದಿದ್ದಾರೆ. ಐಸಿಸಿ ಪೂರ್ಣ ಸದಸ್ಯತ್ವ ಪಡೆದ ರಾಷ್ಟ್ರಗಳ ತಂಡದ ಬೌಲರ್‌ವೊಬ್ಬ ಮಾಡಿದ ಅತಿದೀರ್ಘವಾದ ಓವರ್ ಇದೆನಿಸಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.