IPL 2026 ಟೂರ್ನಿಗೂ ಮೊದಲೇ ಅರೆಸ್ಟ್ ಆಗ್ತಾರಾ ಆರ್‌ಸಿಬಿ ವೇಗಿ ಯಶ್ ದಯಾಳ್‌?

Published : Dec 26, 2025, 03:44 PM IST

ಬೆಂಗಳೂರು: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಆರ್‌ಸಿಬಿ ಪಾಳಯದಲ್ಲಿ ತಳಮಳ ಶುರುವಾಗಿದೆ. ಆರ್‌ಸಿಬಿ ವೇಗಿ ಯಶ್ ದಯಾಳ್ ಪೋಕ್ಸೋ ಪ್ರಕರಣದಲ್ಲಿ ಅರೆಸ್ಟ್ ಆಗುವ ಭೀತಿಗೆ ಸಿಲುಕಿದ್ದಾರೆ. 

PREV
16
ಕಾನೂನು ಸಮಸ್ಯೆಗೆ ಸಿಲುಕಿದ ಯಶ್ ದಯಾಳ್

ಆರ್‌ಸಿಬಿ ಎಡಗೈ ವೇಗಿ ಯಶ್ ದಯಾಳ್ ಇದೀಗ ಗಂಭೀರ ಕಾನೂನು ಸಮಸ್ಯೆಗೆ ಸಿಲುಕಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಯಶ್ ದಯಾಳ್ ಅವರು ಕೋರಿದ್ದ ನಿರೀಕ್ಷಣಾ ಜಾಮೀನನ್ನು ರಿಜೆಕ್ಟ್ ಮಾಡಿದೆ.

26
ನಿರೀಕ್ಷಣಾ ಜಾಮೀನು ರದ್ದು

ಅಪ್ರಾಪ್ತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಪೋಕ್ಸೋ ಕೇಸ್ ಸಂಬಂಧ ಜೈಪುರ ಪೋಕ್ಸೋ ಕೋರ್ಟ್, ಯಶ್ ದಯಾಳ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರದ್ದು ಮಾಡಿದೆ.

36
ಅರೆಸ್ಟ್‌ ಭೀತಿಯಲ್ಲಿ ಯಶ್ ದಯಾಳ್

ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಈ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆಗಾಗಿ ಯಶ್ ದಯಾಳ್ ಅವರನ್ನು ಅರೆಸ್ಟ್‌ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ

46
ಕೇಸ್ ಡೀಟೈಲ್ಸ್

2023ರಲ್ಲಿ ಯಶ್ ದಯಾಳ್ ತಮ್ಮ ಮೇಲೆ ಮದುವೆಯಾಗುವುದಾಗಿ ವಂಚಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆಗ ನಾನು ಅಪ್ರಾಪ್ತೆಯಾಗಿದ್ದೆ ಎಂದು ಯುವತಿಯೊಬ್ಬಳು 2025ರ ಜುಲೈನಲ್ಲಿ ಯಶ್ ದಯಾಳ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದರು.

56
ಯಶ್ ದಯಾಳ್ ಮುಂದಿರವ ಆಯ್ಕೆಗಳೇನು?

ಪೋಕ್ಸೋ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ರದ್ದಾಗಿದ್ದರೂ, ಯಶ್ ದಯಾಳ್ ಇದೀಗ ಹೈಕೋರ್ಟ್ ಮೊರೆ ಹೋಗಬಹುದಾಗಿದೆ. ಸದ್ಯ ಕಾನೂನು ಹೋರಾಟದಲ್ಲಿ ತೊಡಗಿರುವ ಯಶ್ ದಯಾಳ್, ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

66
2026ರ ಐಪಿಎಲ್ ಆಡ್ತಾರಾ ಯಶ್ ದಯಾಳ್?

ಈ ಎಲ್ಲಾ ವಿವಾದಗಳ ಹೊರತಾಗಿಯೂ ಆರ್‌ಸಿಬಿ ಫ್ರಾಂಚೈಸಿಯು ಯಶ್ ದಯಾಳ್ ಅವರನ್ನು ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ 5 ಕೋಟಿ ರುಪಾಯಿಗೆ ರೀಟೈನ್ ಮಾಡಿಕೊಂಡಿದೆ. ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಯಶ್ ದಯಾಳ್ ಅರೆಸ್ಟ್ ಆಗ್ತಾರಾ ಅಥವಾ ಇಲ್ಲವೇ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories