ICL ಆಡಿ ವೃತ್ತಿ ಬದುಕು ಹಾಳು ಮಾಡಿಕೊಂಡ ಟಾಪ್ 5 ಕ್ರಿಕೆಟಿಗರಿವರು..!

First Published Mar 26, 2020, 5:09 PM IST

ಭಾರತ ಕ್ರಿಕೆಟ್ ಇತಿಹಾಸದಲ್ಲಿ 2007ನೇ ಇಸವಿ ಕರಾಳ ಅಧ್ಯಾಯ ಎಂದರೆ ತಪ್ಪಾಗಲಾರದು. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದಾಗ ಜೀ ವಾಹಿನಿಯ ಮುಖ್ಯಸ್ಥ ಸುಭಾಶ್ ಚಂದ್ರ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಸೇರಿ ಇಂಡಿಯನ್ ಕ್ರಿಕೆಟ್ ಲೀಗ್ ಆರಂಭಿಸಿದರು.  
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಗೆದ್ದ ಒಂದು ತಿಂಗಳ ಬಳಿಕ ವಿಶ್ವದ ಕೆಲ ಖ್ಯಾತನಾಮ ಆಟಗಾರರನ್ನೊಳಗೊಂಡ ಇಂಡಿಯನ್ ಕ್ರಿಕೆಟ್ ಲೀಗ್(ಐಸಿಎಲ್) ಆರಂಭವಾಯಿತು. ಬಿಸಿಸಿಐಗೆ ಸೆಡ್ಡು ಹೊಡೆದು ಆರಂಭವಾದ ಐಸಿಎಲ್ ಅಷ್ಟೇ ಬೇಗ ಅಂತ್ಯವಾಗಿದ್ದು ಮಾತ್ರ ವಿಪರ್ಯಾಸ. ಬಂಡಾಯ ಲೀಗ್‌ನಲ್ಲಿ ಪಾಲ್ಗೊಂಡ ಆಟಗಾರರನ್ನು ಬ್ಯಾನ್ ಮಾಡಬೇಕೆಂದು ಬಿಸಿಸಿಐ ಎಲ್ಲಾ ಕ್ರಿಕೆಟ್ ಮಂಡಳಿಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಆ ಬಳಿಕ  ಬ್ಯಾನ್ ಹಿಂಪಡೆಯಲಾಯಿತಾದರೂ ಕೆಲ ಕ್ರಿಕೆಟಿಗರ ವೃತ್ತಿ ಬದುಕಿನ ಮೇಲೆ ಋಣಾತ್ಮಕ ಪರಿಣಾಮ ಬೀರಿತು. ಅಂತಹ 5 ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

1. ಅಬ್ದುಲ್ ರಜಾಕ್
undefined
ಪಾಕಿಸ್ತಾನ ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದ ಸ್ಟಾರ್ ಆಲ್ರೌಂಡರ್ ಅಬ್ದುಲ್ ರಜಾಕ್ ಐಸಿಎಲ್‌ ಟೂರ್ನಿಯಲ್ಲಿ ಹೈದ್ರಾಬಾದ್ ಹೀರೋಸ್ ತಂಡ ಸೇರಿಕೊಂಡಿದ್ದರು. ಬಳಿಕ ಐಸಿಎಲ್ ಸೇರಿದ ತಪ್ಪಿಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನಿಂದ 2 ವರ್ಷ ನಿಷೇಧಕ್ಕೆ ಗುರಿಯಾದರು. ನಿಷೇಧ ಹಿಂಪಡೆದು 2009ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರಾದರೂ, ಅಮೂಲ್ಯ ಎರಡು ವರ್ಷಗಳ ಕ್ರಿಕೆಟ್ ಬದುಕು ಹಾಳು ಮಾಡಿಕೊಂಡರು.
undefined
2 ಜಸ್ಟಿನ್ ಕೆಂಪ್
undefined
ಐಸಿಎಲ್ ಸೇರುವ ಮುನ್ನ ದಕ್ಷಿಣ ಆಫ್ರಿಕಾದ ಜಸ್ಟಿನ್ ಕೆಂಪ್ ವೃತ್ತಿಜೀವನದ ಅಮೋಘ ಫಾರ್ಮ್‌ನಲ್ಲಿದ್ದರು. ಬಿಗ್ ಹಿಟ್ಟಿಂಗ್ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಹರಿಣಗಳ ಪಾಲಿನ ಆಪತ್ಭಾಂದವ ಎನಿಸಿದ್ದ ಕೆಂಪ್ ಐಸಿಎಲ್ ಸೇರಿ ಕೈಸುಟ್ಟುಕೊಂಡರು. ಕೆಂಪ್ ಕೂಡಾ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯಿಂದ ನಿಷೇಧಕ್ಕೆ ಗುರಿಯಾದರು. 2009ರಲ್ಲಿ ನಿಷೇಧ ಹಿಂಪಡೆಯಲಾಯಿತಾದರೂ, ಅಷ್ಟರಲ್ಲಾಗಲೇ ಆಲ್ಬೀ ಮೋರ್ಕೆಲ್ ತಂಡದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡಿದ್ದರು. ಹೀಗಾಗಿ ಕೆಂಪ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾದರು.
undefined
3 ಇಮ್ರಾನ್ ನಜೀರ್
undefined
ಸ್ಫೋಟಕ ಬ್ಯಾಟಿಂಗ್ ಮೂಲಕ ಪಾಕ್ ತಂಡದಲ್ಲಿ ಮಿಂಚುತ್ತಿದ್ದ ಪ್ರತಿಭಾನ್ವಿತ ಕ್ರಿಕೆಟಿಗ ಇಮ್ರಾನ್ ನಜೀರ್ ವೃತ್ತಿ ಬದುಕು ಐಸಿಎಲ್‌ನಿಂದ ಬರ್ಬಾದ್ ಆಗಿ ಹೋಯ್ತು. 2009ರಲ್ಲಿ ನಜೀರ್ ಮೇಲೆ ಹೇರಲಾಗಿದ್ದ ಬ್ಯಾನ್ ಪಿಸಿಬಿ ಹಿಂಪಡೆಯಿತಾದರೂ ಹಳೆಯ ಖದರ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
undefined
4.ಆಫ್ತಾಬ್ ಅಹಮ್ಮದ್
undefined
ಶಕೀಬ್ ಅಲ್ ಹಸನ್, ಮುಷ್ಪಿಕುರ್ ರಹೀರ್ ಅವರಂತಹ ಆಟಗಾರರು ಬಾಂಗ್ಲಾ ತಂಡದಲ್ಲಿ ಮಿಂಚುವ ಮುನ್ನ ಆಫ್ತಾಬ್ ಅಹಮ್ಮದ್ ಬಾಂಗ್ಲಾದೇಶ ತಂಡದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದರು. ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಗೆಲುವಿನಲ್ಲಿ ಆಫ್ತಾಬ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಐಸಿಎಲ್ ಸೇರಿ ಆಫ್ತಾಬ್ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ 10 ವರ್ಷಗಳ ನಿಷೇಧಕ್ಕೆ ಗುರಿಯಾದರು. ನಿಷೇಧ ಹಿಂಪಡೆದು ತಂಡ ಕೂಡಿಕೊಂಡರಾದರು, ಹೆಚ್ಚು ಕಾಲ ತಂಡದಲ್ಲಿ ನೆಲೆಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
undefined
5. ಶೇನ್ ಬಾಂಡ್
undefined
ಐಸಿಎಲ್ ಟೂರ್ನಿಯಲ್ಲಿ ಪಾಲ್ಗೊಂಡು ವೃತ್ತಿ ಬದುಕು ಹಾಳು ಮಾಡಿಕೊಂಡ ಆಟಗಾರರ ಪಟ್ಟಿಯಲ್ಲಿನ ಅತಿ ಪ್ರಮುಖ ಆಟಗಾರ ಎಂದರೆ ಅದು ಬಹುಶಃ ಶೇನ್ ಬಾಂಡ್ ಎನ್ನಬಹುದು. ಕಿವೀಸ್ ತಂಡದ ಮಾರಕ ವೇಗಿ ಎನಿಸಿಕೊಂಡಿದ್ದ ಬಾಂಡ್ ಐಸಿಎಲ್ ಸೇರಿ ಅತಿ ದೊಡ್ಡ ತಪ್ಪು ಮಾಡಿ ಬಿಟ್ಟರು. ಕೆಲಕಾಲದ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಬಾಂಡ್ ಮೇಲೆ ಹೇರಿದ್ದ ನಿಷೇಧ ಹಿಂಪಡೆಯಲಾಯಿತಾದರೂ, ಗಾಯದ ಸಮಸ್ಯೆಯಿಂದಾಗಿ ಹಳೆಯ ಖದರ್ ಉಳಿಸಿಕೊಳ್ಳಲು ಬಾಂಡ್‌ಗೆ ಸಾಧ್ಯವಾಗಲಿಲ್ಲ.
undefined
click me!