Published : Mar 25, 2020, 11:33 AM ISTUpdated : Mar 25, 2020, 03:46 PM IST
ಕೊರೋನಾ ವೈರಸ್ ಭಾರತದಲ್ಲಿ ತೀವ್ರ ವೇಗದಲ್ಲಿ ಹರಡುತ್ತಿರುವ ಕಾರಣ ಪ್ರಧಾನಿ ನರೇಂದ್ರ ಇಂದಿನಿಂದ(ಮಾ.25) 21 ದಿನಗಳ ವರೆಗೆ ಸಂಪೂರ್ಣ ಭಾರತ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. ತುರ್ತು ಸೇವೆ ಸೇರಿದಂತೆ ಕೆಲ ಸೇವೆ ಹೊರತು ಪಡಿಸಿ ಇನ್ಯಾವ ಸೇವೆಗಳು ಲಭ್ಯವಿಲ್ಲ. ಕೊರೋನಾ ವೈರಸ್ ತಡೆಯಲು ಲಾಕ್‌ಡೌನ್ ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ. ಇದೀಗ ಪ್ರಧಾನಿ ನಿರ್ಧಾರವನ್ನು ಕ್ರಿಕೆಟಿಗರು, ಸೆಲೆಬ್ರೆಟಿಗಳು , ಗಣ್ಯರು ಸೇರಿದಂತೆ ಬಹುತೇಕರು ಸ್ವಾಗತಿಸಿದ್ದಾರೆ. ಆದರೆ ಹಲವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೀಗ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಇದೀಗ ಭಾರತೀಯರಿಗೆ ಹಿಂದಿ ಭಾಷೆಯಲ್ಲಿ ಪೀಟರ್ಸನ್ ಮನವಿ ಮಾಡಿದ್ದಾರೆ.