ಐಪಿಎಲ್ 2026 ಸೀಸನ್‌ಗೆ ಸಿದ್ಧತೆ ನಡೆದಿದೆ. ಆದರೆ, ಯಾವುದೇ ಆಟಗಾರ ಬಯಸದ ಕೆಲವು ಕೆಟ್ಟ ದಾಖಲೆಗಳು ಹಲವು ಸ್ಟಾರ್ ಆಟಗಾರರ ಹೆಸರಿನಲ್ಲಿವೆ. ರೋಹಿತ್ ಶರ್ಮಾ, ರಶೀದ್ ಖಾನ್‌ರಂತಹ ದಿಗ್ಗಜರ ಹೆಸರಲ್ಲಿರುವ ಆ ಬೇಡದ ದಾಖಲೆಗಳು ಯಾವುವು?
ಐಪಿಎಲ್ ಹಲವು ಆಟಗಾರರಿಗೆ ಖ್ಯಾತಿ ತಂದುಕೊಟ್ಟಿದೆ. ಆದರೆ, ಕೆಲ ದಿಗ್ಗಜ ಆಟಗಾರರು ಮರೆಯಬಯಸುವಂತಹ ಕೆಲವು ಕೆಟ್ಟ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.
26
1. ರೋಹಿತ್ ಶರ್ಮಾ: ಅತಿ ಹೆಚ್ಚು ಬಾರಿ ಸಿಂಗಲ್ ಡಿಜಿಟ್‌ಗೆ ಔಟ್
ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ, ಐಪಿಎಲ್‌ನಲ್ಲಿ 267 ಇನ್ನಿಂಗ್ಸ್‌ಗಳಲ್ಲಿ 83 ಬಾರಿ ಸಿಂಗಲ್ ಡಿಜಿಟ್‌ಗೆ ಔಟಾಗಿದ್ದಾರೆ. ಇದರಲ್ಲಿ 18 ಡಕೌಟ್‌ಗಳು ಸೇರಿವೆ.
36
2. ರಶೀದ್ ಖಾನ್: ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ನೀಡಿದ ಬೌಲರ್
ಟಿ20ಯ ಅಪಾಯಕಾರಿ ಸ್ಪಿನ್ನರ್ ರಶೀದ್ ಖಾನ್, ಐಪಿಎಲ್ 2025ರ ಸೀಸನ್‌ನಲ್ಲಿ ಬರೋಬ್ಬರಿ 33 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟು ಸೀಸನ್‌ನಲ್ಲಿವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ನೀಡಿದ ಬೌಲರ್ ಎನ್ನುವ ಕೆಟ್ಟ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಐಪಿಎಲ್ 2025ರಲ್ಲಿ 4 ಓವರ್‌ಗಳಲ್ಲಿ 76 ರನ್ ನೀಡಿ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ದಾಖಲೆ ಬರೆದರು.
56
4. ಹರ್ಷಲ್ ಪಟೇಲ್: ಅತ್ಯಂತ ದುಬಾರಿ ಓವರ್ (37 ರನ್)
ಐಪಿಎಲ್ 2021ರಲ್ಲಿ ಆರ್‌ಸಿಬಿ ಪರ ಆಡಿದ್ದ ಹರ್ಷಲ್ ಪಟೇಲ್, ಒಂದೇ ಓವರ್‌ನಲ್ಲಿ 37 ರನ್ ನೀಡಿ ಐಪಿಎಲ್‌ನ ಅತ್ಯಂತ ದುಬಾರಿ ಓವರ್ ದಾಖಲೆಯನ್ನು ಸರಿಗಟ್ಟಿದರು.
66
5. ಗ್ಲೆನ್ ಮ್ಯಾಕ್ಸ್‌ವೆಲ್: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಕೌಟ್‌ಗಳು (19)
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (19) ಡಕೌಟ್ ಆದ ಆಟಗಾರ ಎಂಬ ಬೇಡದ ದಾಖಲೆ ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.