ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರರ ಪೈಕಿ ನಾಲ್ವರು ಭಾರತೀಯರೇ ಇದ್ದಾರೆ. ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಏಕೈಕ ವಿದೇಶಿ ಆಟಗಾರನಾಗಿ ಈ ಲಿಸ್ಟ್‌ನಲ್ಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಜಗತ್ತಿನಲ್ಲೇ ಅತ್ಯಂತ ಜನಪ್ರಿಯ ಟಿ20 ಲೀಗ್. ಈ ಲೀಗ್ ಆರಂಭವಾದಾಗಿನಿಂದ ಅನೇಕ ಬ್ಯಾಟರ್‌ಗಳು ತಮ್ಮ ಅದ್ಭುತ ಪ್ರದರ್ಶನದಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಟಾಪ್ 5 ಪಟ್ಟಿಯಲ್ಲಿ ನಾಲ್ವರು ಭಾರತೀಯ ಆಟಗಾರರಿದ್ದು, ಕೇವಲ ಒಬ್ಬನೇ ಒಬ್ಬ ವಿದೇಶಿ ಆಟಗಾರ ಸ್ಥಾನ ಪಡೆದಿದ್ದಾರೆ.
26
1. ವಿರಾಟ್ ಕೊಹ್ಲಿ: 8,661 ರನ್
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. 2008ರಿಂದ 2025ರವರೆಗೆ 267 ಪಂದ್ಯಗಳಲ್ಲಿ 8,661 ರನ್ ಗಳಿಸಿದ್ದಾರೆ. 8,000 ರನ್ ಗಡಿ ದಾಟಿದ ಏಕೈಕ ಆಟಗಾರ ಇವರು. 2016ರ ಸೀಸನ್‌ನಲ್ಲಿ 973 ರನ್ ಗಳಿಸಿ, ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದರು. ಅವರ ಖಾತೆಯಲ್ಲಿ 8 ಶತಕ, 63 ಅರ್ಧಶತಕಗಳಿವೆ.
36
2. ರೋಹಿತ್ ಶರ್ಮಾ: 7,046 ರನ್
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಇದ್ದಾರೆ. ರೋಹಿತ್ ಇದುವರೆಗೆ 272 ಐಪಿಎಲ್ ಪಂದ್ಯಗಳಲ್ಲಿ 7,046 ರನ್ ಗಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 2 ಶತಕ ಮತ್ತು 47 ಅರ್ಧಶತಕಗಳನ್ನು ಬಾರಿಸಿದ್ದಾರೆ. 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದೊಂದಿಗೆ ವೃತ್ತಿಜೀವನ ಆರಂಭಿಸಿದ ರೋಹಿತ್, ನಂತರ ಮುಂಬೈ ಇಂಡಿಯನ್ಸ್ ತಂಡದ ಆಧಾರಸ್ತಂಭವಾದರು.
ಐಪಿಎಲ್‌ನ ಅತ್ಯಂತ ನಂಬಿಕಸ್ಥ ಆರಂಭಿಕ ಆಟಗಾರರಲ್ಲಿ ಒಬ್ಬರಾದ ಶಿಖರ್ ಧವನ್ ಮೂರನೇ ಸ್ಥಾನದಲ್ಲಿದ್ದಾರೆ. 2008ರಿಂದ 2024ರ ನಡುವೆ 222 ಪಂದ್ಯಗಳಲ್ಲಿ 6,769 ರನ್ ಗಳಿಸಿದ್ದಾರೆ. ಧವನ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 51 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅವರು ಡೆಲ್ಲಿ, ಡೆಕ್ಕನ್, ಮುಂಬೈ, ಹೈದರಾಬಾದ್ ಮತ್ತು ಪಂಜಾಬ್‌ನಂತಹ ಐದು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ.
56
4. ಡೇವಿಡ್ ವಾರ್ನರ್: 6,565 ರನ್
ಈ ಟಾಪ್ 5 ಲಿಸ್ಟ್‌ನಲ್ಲಿರುವ ಏಕೈಕ ವಿದೇಶಿ ಆಟಗಾರ ಡೇವಿಡ್ ವಾರ್ನರ್. 184 ಐಪಿಎಲ್ ಪಂದ್ಯಗಳಲ್ಲಿ ವಾರ್ನರ್ 6,565 ರನ್ ಗಳಿಸಿದ್ದಾರೆ. ವಾರ್ನರ್ ಐಪಿಎಲ್‌ನಲ್ಲಿ 4 ಶತಕ ಮತ್ತು 62 ಅರ್ಧಶತಕಗಳನ್ನು ಗಳಿಸಿದ್ದಾರೆ. ಮೂರು ಬಾರಿ (2015, 2017, 2019) ಆರೆಂಜ್ ಕ್ಯಾಪ್ ಗೆದ್ದ ಏಕೈಕ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ.
66
5. ಸುರೇಶ್ ರೈನಾ: 5,000 ರನ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಆಟಗಾರ ಸುರೇಶ್ ರೈನಾ 5,528 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. 2008ರಿಂದ 2021ರವರೆಗೆ 205 ಪಂದ್ಯಗಳನ್ನಾಡಿದ ರೈನಾ, ಐಪಿಎಲ್‌ನಲ್ಲಿ 5,000 ರನ್ ಗಡಿ ದಾಟಿದ ಮೊದಲ ಆಟಗಾರ. ಇದಕ್ಕಾಗಿಯೇ ಅಭಿಮಾನಿಗಳು ಅವರನ್ನು 'ಮಿಸ್ಟರ್ ಐಪಿಎಲ್' ಎಂದು ಕರೆಯುತ್ತಾರೆ. ಸಿಎಸ್‌ಕೆ ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ರೈನಾ ಪ್ರಮುಖ ಪಾತ್ರ ವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.