ಚೊಚ್ಚಲ ವುಮೆನ್ಸ್ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಟಾಪ್ 10 ಪ್ರತಿಭಾನ್ವಿತ ಕ್ರಿಕೆಟರ್ಸ್‌..!

Published : Feb 27, 2023, 03:05 PM IST

ಬೆಂಗಳೂರು(ಫೆ.27): ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದ್ದು, ಮುಂಬರುವ ಮಾರ್ಚ್‌ 04ರಿಂದ 26ರ ವರೆಗೆ ಮುಂಬೈನಲ್ಲಿ ಮಹಿಳಾ ಐಪಿಎಲ್ ಟೂರ್ನಿ ಜರುಗಲಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್‌, ಮುಂಬೈ ಇಂಡಿಯನ್ಸ್‌ ಹಾಗೂ ಯುಪಿ ವಾರಿಯರ್ಸ್‌ ಹೀಗೆ 5 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ   

PREV
110
ಚೊಚ್ಚಲ ವುಮೆನ್ಸ್ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಟಾಪ್ 10 ಪ್ರತಿಭಾನ್ವಿತ ಕ್ರಿಕೆಟರ್ಸ್‌..!
1. ಸ್ಮೃತಿ ಮಂಧನಾ:

WPL ಟೂರ್ನಿಯ ಅತ್ಯಂತ ದುಬಾರಿ ಆಟಗಾರ್ತಿ ಸ್ಮೃತಿ ಮಂಧನಾ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು 3.40 ಕೋಟಿ ರುಪಾಯಿ ನೀಡಿ ಸೆಳೆದುಕೊಂಡಿದೆ. ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಮಂಧನಾ, ಚೇಸಿಂಗ್ ಮಾಡುವ ವಿಚಾರದಲ್ಲಿ 13ಕ್ಕೂ ಹೆಚ್ಚುಬಾರಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
 

210
2. ಶಫಾಲಿ ವರ್ಮಾ:

ವಿಸ್ಪೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಶಫಾಲಿ ವರ್ಮಾ ಅವರನ್ನು 2 ಕೋಟಿ ರುಪಾಯಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯು ಖರೀದಿಸಿದೆ. 15ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಶಫಾಲಿ 56 ಟಿ20 ಪಂದ್ಯಗಳನ್ನಾಡಿ 1,333 ರನ್‌ ಚಚ್ಚಿದ್ದಾರೆ.
 

310
3. ಹರ್ಮನ್‌ಪ್ರೀತ್ ಕೌರ್:

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 1.80 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಸ್ಥಿರ ಪ್ರದರ್ಶನಕ್ಕೆ ಹೆಸರಾಗಿರುವ ಕೌರ್, ಭಾರತ ಪರ 270 ಪಂದ್ಯಗಳನ್ನಾಡಿ ಸುಮಾರು 6,000ಕ್ಕೂ ಅಧಿಕ ರನ್ ಬಾರಿಸಿದ್ದಾರೆ.
 

410
4. ರಿಚಾ ಘೋಷ್:

ಭಾರತ ತಂಡದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು 1.90 ಕೋಟಿ ರುಪಾಯಿ ನೀಡಿ ಖರೀದಿಸಿದೆ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ರಿಚಾ, ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ

510
5. ದೀಪ್ತಿ ಶರ್ಮಾ:

ಭಾರತದ ತಾರಾ ಆಲ್ರೌಂಡರ್ ದೀಪ್ತಿ ಶರ್ಮಾ ಅವರಿಗೆ 2.60 ಕೋಟಿ ರುಪಾಯಿ ನೀಡಿ ಯುಪಿ ವಾರಿಯರ್ಸ್‌ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಭಾರತ ಪರ 150ಕ್ಕೂ ಅಧಿಕ ಪಂದ್ಯಗಳನ್ನಾಡಿರುವ ದೀಪ್ತಿ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.
 

610
6. ನಥಾಲಿ ಶೀವರ್:

ತಮ್ಮ ಅಸಾಧಾರಣ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ಮೂಲಕ ಎದುರಾಳಿ ತಂಡವನ್ನು ಕಾಡುವ ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್ ನಥಾಲಿ ಶೀವರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಬರೋಬ್ಬರಿ 3.20 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಶೀವರ್ ಸೇರ್ಪಡೆ ಮುಂಬೈ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
 

710
7. ತಾಹಿಲಾ ಮೆಗ್ರಾಥ್‌;

ಸ್ಪೋಟಕ ಬ್ಯಾಟರ್ ಹಾಗೂ ಮಾರಕ ವೇಗಿಯಾಗಿರುವ ಆಸ್ಟ್ರೇಲಿಯಾದ ತಾಹಿಲಾ ಮೆಗ್‌ಗ್ರಾಥ್ ಅವರನ್ನು ಯುಪಿ ವಾರಿಯರ್ಸ್‌ ತಂಡವು 1.40 ಕೋಟಿ ರುಪಾಯಿ ನೀಡಿ ಖರೀದಿಸಿದೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಮೆಗ್ರಾಥ್‌, ವಿಶ್ವ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

810
8. ಮಾರಿಜಾನೆ ಕ್ಯಾಪ್‌

ದಕ್ಷಿಣ ಆಫ್ರಿಕಾ ತಂಡದ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿರುವ ಮಾರಿಜಾನೆ ಕ್ಯಾಪ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 1.50 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಮಾರಿಜಾನೆ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡುವುದಷ್ಟೇ ಅಲ್ಲದೇ ಕೆಳಕ್ರಮಾಂಕದಲ್ಲಿ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ.
 

910
9. ಡಿಯೋಂದ್ರಾ ಡಾಟಿನ್:

ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್ ಡಾಟಿನ್ ಅವರನ್ನು 60 ಲಕ್ಷ ರುಪಾಯಿ ನೀಡಿ ಗುಜರಾತ್ ಜೈಂಟ್ಸ್‌ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ತಮ್ಮ ವೃತ್ತಿಜೀವನದಲ್ಲಿ 250 ಕ್ಕೂ ಅಧಿಕ ಪಂದ್ಯಗಳನ್ನಾಡಿ 6000ಕ್ಕೂ ಅಧಿಕ ರನ್ ಹಾಗೂ 134 ವಿಕೆಟ್ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಚಚ್ಚಿದ ಹೆಗ್ಗಳಿಕೆ ಡಾಟಿನ್ ಅವರದ್ದು.  

1010
10. ಸೋಫಿ ಎಕ್ಲೆಸ್ಟೋನ್‌:

ಇಂಗ್ಲೆಂಡ್‌ನ ಅಗ್ರಶ್ರೇಯಾಂಕಿತ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಅವರನ್ನು ಯುಪಿ ವಾರಿಯರ್ಸ್‌ ಫ್ರಾಂಚೈಸಿಯು 1.80 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಭಾರತದ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಎಕ್ಲೆಸ್ಟೋನ್‌ ಎದುರಾಳಿ ತಂಡದ ಬ್ಯಾಟರ್‌ಗಳು ಕಾಡುವ ಸಾಧ್ಯತೆಯಿದೆ.
 

Read more Photos on
click me!

Recommended Stories