2020ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಟಾಪ್ 10 ಕ್ರಿಕೆಟಿಗರಿವರು

First Published Dec 31, 2020, 7:04 PM IST

ಬೆಂಗಳೂರು: 2020ರ ವರ್ಷ ಹಲವು ಏರಿಳಿತಗಳನ್ನು ಕಂಡ ವರ್ಷ. ಇದಕ್ಕೆ ಕ್ರಿಕೆಟ್‌ ಕೂಡಾ ಹೊರತಾಗಿಲ್ಲ. ಕೊರೋನಾ ಕಾರಣದಿಂದಾಗಿ ಕ್ರಿಕೆಟ್‌ ಸೇರಿದಂತೆ ಹಲವು ದೇಸಿ ಹಾಗೂ ಅಂತಾರಾಷ್ಟ್ರೀಯ ಟೂರ್ನಿಗಳು ಮುಂದೂಲ್ಪಟ್ಟಿವೆ.
ಇನ್ನು ಈ ವರ್ಷದಲ್ಲಿ ಹಲವು ಕ್ರಿಕೆಟಿಗರು ತಮ್ಮ ವೃತ್ತಿಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಕೆಲವು ಆಟಗಾರರು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೆ, ಮತ್ತೆ ಕೆಲವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

1. ಪ್ರಗ್ಯಾನ್ ಓಜಾ: ಟೀಂ ಇಂಡಿಯಾ ಎಡಗೈ ಲೆಗ್‌ಸ್ಪಿನ್ನರ್ ಓಜಾ ಈ ವರ್ಷದ ಫೆಬ್ರವರಿಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸಚಿನ್‌ ತೆಂಡುಲ್ಕರ್ ವಿದಾಯದ ಪಂದ್ಯವೇ ಓಜಾ ಪಾಲಿಗೆ ಭಾರತ ಪರ ಕೊನೆಯ ಪಂದ್ಯವಾಗಿತ್ತು.
undefined
2. ವಾಸೀಂ ಜಾಫರ್‌: ದೇಸಿ ಕ್ರಿಕೆಟ್‌ನ ಬಾದ್‌ಶಾ, ವಾಸೀಂ ಜಾಫರ್ ಇದೇ ಮಾರ್ಚ್‌ ತಿಂಗಳಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ರಣಜಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ದಾಖಲೆ ಜಾಫರ್ ಹೆಸರಿನಲ್ಲಿದೆ
undefined
3. ಎಂ ಎಸ್ ಧೋನಿ: ಭಾರತ ಕ್ರಿಕೆಟ್‌ ಕಂಡ ಶ್ರೇಷ್ಠ ನಾಯಕ ಎಂ. ಎಸ್‌. ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿನೂತನ ರೀತಿಯಲ್ಲಿ ಗುಡ್‌ಬೈ ಹೇಳಿದ್ದಾರೆ. ಆದರೆ ಐಪಿಎಲ್‌ ಆಡುತ್ತಿದ್ದಾರೆ.
undefined
4. ಸುರೇಶ್ ರೈನಾ: ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೆಲವೇ ನಿಮಿಷಗಳ ಅಂತರದಲ್ಲಿ ಟೀಂ ಇಂಡಿಯಾ ಎಡಗೈ ಬ್ಯಾಟ್ಸ್‌ಮನ್ ರೈನಾ ಕೂಡಾ ದಿಢೀರ್ ಎನ್ನುವಂತೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು.
undefined
5. ಇಯಾನ್ ಬೆಲ್‌: 2015ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಅನುಭವಿ ಬಲಗೈ ಬ್ಯಾಟ್ಸ್‌ಮನ್‌ ಬೆಲ್ ಸೆಪ್ಟೆಂಬರ್ 05ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
undefined
6. ಇರ್ಫಾನ್ ಪಠಾಣ್: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡಾ ಇದೇ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಪಠಾಣ್ ಭಾರತ ಪರ 29 ಟೆಸ್ಟ್, 120 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಿದ್ದಾರೆ.
undefined
7. ಮೊಹಮ್ಮದ್ ಆಮೀರ್: ಪಾಕಿಸ್ತಾನದ ಪ್ರತಿಭಾನ್ವಿತ ವೇಗಿ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಪಾಕ್‌ ಪರ ಆಮೀರ್ 36, 61, ಹಾಗೂ 50 ಟಿ20 ಪಂದ್ಯಗಳನ್ನಾಡಿದ್ದು ಒಟ್ಟಾರೆ 259 ವಿಕೆಟ್ ಕಬಳಿಸಿದ್ದಾರೆ.
undefined
8. ಮರ್ಲಾನ್‌ ಸಾಮ್ಯುಯಲ್ಸ್‌: ವೆಸ್ಟ್‌ ಇಂಡೀಸ್‌ ಆಲ್ರೌಂಡರ್, 2 ಟಿ20 ವಿಶ್ವಕಪ್ ಹೀರೋ ಸಾಮ್ಯುಯಲ್ಸ್ ಕೂಡಾ ಇದೇ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
undefined
9. ಪಾರ್ಥಿವ್ ಪಟೇಲ್: 17ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಪಟೇಲ್ 13ನೇ ಆವೃತ್ತಿಯ ಐಪಿಎಲ್‌ ಮುಗಿದ ಕೆಲವೇ ದಿನಗಳಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ಧಾರೆ.
undefined
10. ಶೇನ್‌ ವಾಟ್ಸನ್‌: ವಿಶ್ವಕ್ರಿಕೆಟ್‌ ಕಂಡ ಶ್ರೇಷ್ಠ ಆಲ್ರೌಂಡರ್ ಆಸ್ಟ್ರೇಲಿಯಾದ ಶೇನ್ ವಾಟ್ಸನ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
undefined
click me!