ಐಪಿಎಲ್ ಮಿನಿ ಹರಾಜಿನಲ್ಲಿ ಈ 10 ಆಟಗಾರರ ಮೇಲೆ ಕಣ್ಣಿಟ್ಟಿವೆ ಎಲ್ಲಾ ಫ್ರಾಂಚೈಸಿಗಳು! ಇವರಿಗೆಲ್ಲಾ ಈ ಸಲ ಜಾಕ್‌ಪಾಟ್

Published : Nov 21, 2025, 02:13 PM IST

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಮುಂಬರುವ ಡಿಸೆಂಬರ್ 16ರಂದು ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ 10 ಆಟಗಾರರಿಗೆ ಜಾಕ್‌ಪಾಟ್ ಆಗುವ ಸಾಧ್ಯತೆಯಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ. 

PREV
110
1. ಸರ್ಫರಾಜ್ ಖಾನ್:

ಮುಂಬೈ ಮೂಲದ ಕ್ರಿಕೆಟಿಗ ಸರ್ಫರಾಜ್ ಖಾನ್ ಸದ್ಯ ದೇಶಿ ಕ್ರಿಕೆಟ್‌ನಲ್ಲಿ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಹುಡುಕುತ್ತಿರುವ ಕೆಕೆಆರ್, ಚೆನ್ನೈಗೆ ಸರ್ಫರಾಜ್ ಒಳ್ಳೆಯ ಆಯ್ಕೆಯಾಗಬಲ್ಲರು.

210
2. ಕ್ಯಾಮರೋನ್ ಗ್ರೀನ್:

ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಈ ಬಾರಿಯ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಹರಾಜಾಗಬಲ್ಲ ಆಟಗಾರ ಎನಿಸಿದ್ದಾರೆ. ಗ್ರೀನ್ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದು, ಕೆಕೆಆರ್ ಫ್ರಾಂಚೈಸಿ ಈ ಆಟಗಾರನ ಮೇಲೆ ಕಣ್ಣಿಟ್ಟಿದೆ ಎನ್ನಲಾಗುತ್ತಿದೆ.

310
3. ಲಿಯಾಮ್ ಲಿವಿಂಗ್‌ಸ್ಟೋನ್:

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಲಿವಿಂಗ್‌ಸ್ಟೋನ್ ಅವರನ್ನು ಈ ಬಾರಿ ಪಂಜಾಬ್ ಕಿಂಗ್ಸ್ ಖರೀದಿಸುವ ಸಾಧ್ಯತೆಯಿದೆ. ಮ್ಯಾಕ್ಸ್‌ವೆಲ್ ಸ್ಥಾನಕ್ಕೆ ಲಿವಿಂಗ್‌ಸ್ಟೋನ್ ಪಂಜಾಬ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಇನ್ನು ಡೆಲ್ಲಿ ಹಾಗೂ ಚೆನ್ನೈ ಕೂಡಾ ಲಿವಿಂಗ್‌ಸ್ಟೋನ್ ಮೇಲೆ ಕಣ್ಣಿಟ್ಟಿದೆ.

410
4. ಆಂಡ್ರೆ ರಸೆಲ್

ಕಳೆದೊಂದು ದಶಕದಿಂದ ಕೆಕೆಆರ್ ತಂಡದಲ್ಲಿದ್ದ ಆಂಡ್ರೆ ರಸೆಲ್ ಇದೀಗ ಹರಾಜಿನಲ್ಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಈ ವಿಂಡೀಸ್ ಸ್ಟಾರ್ ಆಲ್ರೌಂಡರ್ ಮೇಲೆ ಕಣ್ಣಿಟ್ಟಿದೆ ಎಂದು ವರದಿಯಾಗಿದೆ. ರಸೆಲ್ ಕೂಡಾ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

510
5. ಕ್ವಿಂಟನ್ ಡಿ ಕಾಕ್

ದಕ್ಷಿಣ ಆಫ್ರಿಕಾ ಮೂಲದ ವಿಕೆಟ್‌ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್‌ಗೂ ಈ ಬಾರಿ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್ ಇಲ್ಲವೇ ರಾಜಸ್ಥಾನ ರಾಯಲ್ಸ್ ಈ ಆಟಗಾರನ ಮೇಲೆ ಬಿಡ್ ಮಾಡುವ ಸಾಧ್ಯತೆಯಿದೆ.

610
6. ವಿಯಾನ್ ಮುಲ್ದರ್

ಇದು ನಿಮಗೆ ಕೊಂಚ ಅಚ್ಚರಿ ಎನಿಸಬಹುದು. ಆದರೆ ದಕ್ಷಿಣ ಆಫ್ರಿಕಾ ಮೂಲದ ಆಲ್ರೌಂಡರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಮುಲ್ದರ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹಾಗೂ 2-3 ಓವರ್ ಅನಾಯಾಸವಾಗಿ ಬೌಲಿಂಗ್ ಮಾಡಲಿದ್ದು, ಈತನ ಮೇಲೂ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

710
7. ಮಥೀಶಾ ಪತಿರಾಣ

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪತಿರಾಣ ರಿಲೀಸ್ ಮಾಡಿದ್ದು ನಿಜಕ್ಕೂ ಫ್ಯಾನ್ಸ್‌ಗೆ ಶಾಕ್ ನೀಡಿತ್ತು. ಇನ್ನು ಕಡಿಮೆ ಮೊತ್ತಕ್ಕೆ ಸಿಎಸ್‌ಕೆ ವಾಪಾಸ್ ಖರೀದಿಸುವ ಲೆಕ್ಕಚಾರದಲ್ಲಿದೆ ಎನ್ನಲಾಗುತ್ತಿದೆ.

810
8. ಡೇವಿಡ್ ಮಿಲ್ಲರ್

ಲಖನೌ ಫ್ರಾಂಚೈಸಿಯು ಡೇವಿಡ್ ಮಿಲ್ಲರ್ ಅವರನ್ನು ರಿಲೀಸ್ ಮಾಡಿದೆ. ಬಿಗ್ ಹಿಟ್ಟರ್ ಹಾಗೂ ಮ್ಯಾಚ್ ಫಿನಿಶರ್ ಆಗಿರುವ ಮಿಲ್ಲರ್ ಯಾವುದೇ ತಂಡದಲ್ಲಿದ್ದರೂ ಎದುರಾಳಿಗೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಮಿಲ್ಲರ್ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

910
9. ರಚಿನ್ ರವೀಂದ್ರ

ಕಿವೀಸ್ ಮೂಲದ ಆಲ್ರೌಂಡರ್ ರಚಿನ್ ರವೀಂದ್ರ ತಾವೆಂಥ ಉಪಯುಕ್ತ ಐಪಿಎಲ್ ಆಟಗಾರ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ರಚಿನ್ ಈ ಬಾರಿ ಮುಂಬೈ ಇಂಡಿಯನ್ಸ್ ಇಲ್ಲವೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

1010
10. ವನಿಂದು ಹಸರಂಗ

ಲಂಕಾ ಮೂಲದ ಅನುಭವಿ ಸ್ಪಿನ್ನರ್ ವನಿಂದು ಹಸರಂಗ ಐಪಿಎಲ್‌ಗೆ ಹೇಳಿ ಮಾಡಿಸಿದ ಬೌಲರ್ ಆಗಿದ್ದಾರೆ. ಕೆಕೆಆರ್ ಫ್ರಾಂಚೈಸಿಯು ಹಸರಂಗ ಅವರ ಮೇಲೆ ಬಿಡ್ ಮಾಡುವ ಸಾಧ್ಯತೆ ಹೆಚ್ಚಿದೆ.

Read more Photos on
click me!

Recommended Stories