ಸಂಜನಾ ಜತೆಗಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡ ಜಸ್ಪ್ರೀತ್ ಬುಮ್ರಾ

Suvarna News   | Asianet News
Published : Mar 19, 2021, 05:51 PM IST

ನವದೆಹಲಿ: ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಕೆಲದಿನಗಳ ಹಿಂದಷ್ಟೇ ಟಿವಿ ನಿರೂಪಕಿ ಸಂಜನಾ ಗಣೇಶನ್‌ರನ್ನು ವಿವಾಹವಾಗಿದ್ದರು. ಇದೀಗ ತಮ್ಮ ವಿವಾಹಕ್ಕೆ ಶುಭಕೋರಿದ ಎಲ್ಲಾ ಅಭಿಮಾನಿಗಳಿಗೆ ಈ ತಾರಾ ಜೋಡಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಕೆಲವು ಆರತಕ್ಷತೆಯ ಫೋಟೋಗಳನ್ನು ಹಂಚಿಕೊಂಡಿರುವ ಬುಮ್ರಾ, ನಿಮ್ಮ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.  

PREV
17
ಸಂಜನಾ ಜತೆಗಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡ ಜಸ್ಪ್ರೀತ್ ಬುಮ್ರಾ

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್‌ ಜೋಡಿ ಮಾರ್ಚ್‌ 15ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

27

ತೀರಾ ಖಾಸಗಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಕೆಲವು ಆಪ್ತ ಬಂಧುಮಿತ್ರರು ಮಾತ್ರ ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.

37

ಗೋವಾದಲ್ಲಿಯೇ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ಕೂಡಾ ನಡೆದಿದ್ದು, ಕೆಲವು ಮುದ್ದಾದ ಫೋಟೋಗಳನ್ನು ಬುಮ್ರಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

47

ನೀವು ತೋರಿದ ಪ್ರೀತಿ, ವಿಶ್ವಾಸ ಹಾಗೂ ಹಾರೈಕೆಗಳಿಗೆ ನಾವು ಚಿರಋಣಿ ಎಂದು ಅಭಿಮಾನಿಗಳಿಗೆ ಟೀಂ ಇಂಡಿಯಾ ವೇಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

57

ಬುಮ್ರಾ ಇಂಗ್ಲೆಂಡ್‌ ವಿರುದ್ದದ 4ನೇ ಟೆಸ್ಟ್‌ಗೂ ಮುನ್ನ ಬಿಸಿಸಿಐನಿಂದ ರಜೆ ಪಡೆದುಕೊಂಡಿದ್ದರು. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಬುಮ್ರಾ ಇಂಗ್ಲೆಂಡ್‌ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದಲೂ ಹೊರಗುಳಿದಿದ್ದಾರೆ. 

67

2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಜಸ್ಪ್ರೀತ್ ಬುಮ್ರಾ, ಭಾರತ ಪರ ಇದುವರೆಗೂ 19 ಟೆಸ್ಟ್, 67 ಏಕದಿನ ಹಾಗೂ 50 ಟಿ20 ಪಂದ್ಯಗಳನ್ನಾಡಿದ್ದು ಒಟ್ಟಾರೆ 200ಕ್ಕೂ ಅಧಿಕ ಬಲಿ ಪಡೆದಿದ್ದಾರೆ.

77

ಸದ್ಯ ಬುಮ್ರಾ ಹನಿಮೂನ್‌ ರಜೆಯಲ್ಲಿದ್ದು, ಏಪ್ರಿಲ್‌ 09ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ವೇಳೆಗೆ ಮುಂಬೈ ಇಂಡಿಯನ್ಸ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ.

click me!

Recommended Stories