ಪಂದ್ಯದ ಮಹತ್ವದ ಘಟ್ಟದಲ್ಲಿ ವಿರಾಟ್‌ ಕೊಹ್ಲಿ ಮೈದಾನ ತೊರೆದಿದ್ದೇಕೆ..?

Suvarna News   | Asianet News
Published : Mar 19, 2021, 03:10 PM IST

ಅಹಮದಾಬಾದ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟಿ20 ಸರಣಿ ರೋಚಕ ಘಟ್ಟ ತಲುಪಿದ್ದು, 4ನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 8 ರನ್‌ಗಳ ರೋಚಕ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ.  ಇಂಗ್ಲೆಂಡ್‌ ವಿರುದ್ದ 4ನೇ ಟಿ20 ಪಂದ್ಯದ ಕೊನೆಯ ನಾಲ್ಕು ಓವರ್‌ಗಳು ಬಾಕಿ ಇದ್ದಾಗ ಪಂದ್ಯ ರೋಚಕ ಹಂತ ತಲುಪಿತ್ತು. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮೈದಾನ ತೊರೆದಿದ್ದರು. ಇದು ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳನ್ನುಂಟು ಮಾಡಿತ್ತು. ಅಷ್ಟಕ್ಕೂ ಕೊಹ್ಲಿ ಮೈದಾನ ತೊರೆದಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
19
ಪಂದ್ಯದ ಮಹತ್ವದ ಘಟ್ಟದಲ್ಲಿ ವಿರಾಟ್‌ ಕೊಹ್ಲಿ ಮೈದಾನ ತೊರೆದಿದ್ದೇಕೆ..?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್‌ಗಳ ರೋಚಕ ಗೆಲುವು ಸಾಧಿಸುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-2ರ ಸಮಬಲ ಸಾಧಿಸಿದೆ.

29

ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಹಾಗೂ ಶ್ರೇಯಸ್‌ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 185 ರನ್‌ ಕಲೆಹಾಕಿತ್ತು.

39

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್, ಜೇಸನ್ ರಾಯ್ ಹಾಗೂ ಬೆನ್ ಸ್ಟೋಕ್ಸ್‌ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ 8 ವಿಕೆಟ್‌ ಕಳೆದುಕೊಂಡು 177 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮಾರ್ಗನ್‌ ಪಡೆ 8 ರನ್‌ ಅಂತರದಲ್ಲಿ ಭಾರತಕ್ಕೆ ಶರಣಾಯಿತು.

49

ಪಂದ್ಯ ಮುಕ್ತಾಯಕ್ಕೆ ಕೊನೆಯ 4 ಓವರ್‌ಗಳಿದ್ದಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನ ತೊರೆದು ಡಗೌಟ್‌ ಸೇರಿದ್ದರು, ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 

59

ಕೊಹ್ಲಿಯದ್ದು ಅದ್ಭುತ ನಾಯಕತ್ವ, ರೋಹಿತ್‌ ಶರ್ಮಾಗೆ ನಾಯಕತ್ವ ನೀಡಿದ್ದು ನಿಜಕ್ಕೂ ಒಳ್ಳೆಯ ರಣತಂತ್ರ ಎಂದು ಇಂಗ್ಲೆಂಡ್‌ ಮಾಜಿ ನಾಯಕ ವ್ಯಂಗ್ಯವಾಡಿದ್ದರು.

69

ಪಂದ್ಯದ ಮಹತ್ವದ ಘಟ್ಟದಲ್ಲಿ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ದೇಕೆ ಎನ್ನುವುದಕ್ಕೆ ಸ್ವತಃ ಕೊಹ್ಲಿಯೇ ಉತ್ತರಿಸಿದ್ದು, ಫಿಟ್ನೆಸ್‌ ಕಾರಣದಿಂದಾಗಿ ತಾವು ಮೈದಾನ ತೊರೆದಿದ್ದಾಗಿ ತಿಳಿಸಿದ್ದಾರೆ. 

79

ನಾನು ಚೆಂಡು ಹಿಡಿಯಲು ಓಡಿ, ಡೈವ್‌ ಮಾಡಿ ಬಾಲನ್ನು ಎಸೆದೆ. ನಾನಾಗ ಒಳ್ಳೆಯ ಪೊಷಿಸನ್‌ನಲ್ಲಿರಲಿಲ್ಲ. ಮತ್ತೆ ಹೆಚ್ಚಿನ ಗಾಯಕ್ಕೆ ಒಳಗಾಗಬಾರದು ಎನ್ನುವ ಉದ್ದೇಶದಿಂದ ಮೈದಾನ ತೊರೆದೆ ಎಂದು ಕೊಹ್ಲಿ ಹೇಳಿದ್ದಾರೆ.

89

5ನೇ ಟಿ20 ಪಂದ್ಯದ ವೇಳೆಗೆ ತಾವು ಸಂಪೂರ್ಣ ಆಗಿರಲಿದ್ದು, ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯುವುದಾಗಿ ತಿಳಿಸುವ ಮೂಲಕ ಅಭಿಮಾನಿಗಳಲ್ಲಿ ಉಂಟಾಗಿದ್ದ ಗೊಂದಲ ಹಾಗೂ ಆತಂಕಗಳಿಗೆ ವಿರಾಟ್ ಕೊಹ್ಲಿ ತೆರೆ ಎಳೆದಿದ್ದಾರೆ.

99

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಕೊನೆಯ ಹಾಗೂ ನಿರ್ಣಾಯಕ ಪಂದ್ಯ ಮಾರ್ಚ್ 20ರಂದು ಮೊಟೇರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.

click me!

Recommended Stories