ಏಷ್ಯಾಕಪ್ ಸರಣಿಗೂ ಮುನ್ನ ಹೊಸ ಲುಕ್, ಕಿವಿ ಚುಚ್ಚಿಸಿ ಸ್ಟೈಲೀಶ್ ಇಯರಿಂಗ್ಸ್ ಹಾಕಿದ ಕೊಹ್ಲಿ!

Published : Aug 21, 2023, 08:33 PM IST

ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಆಗಸ್ಟ್ 30 ರಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿವಿ ಚುಚ್ಚಿಸಿ ಹೊಸ ಕಿವಿಯೋಲೆ ಹಾಕಿದ್ದಾರೆ.   

PREV
17
ಏಷ್ಯಾಕಪ್ ಸರಣಿಗೂ ಮುನ್ನ ಹೊಸ ಲುಕ್, ಕಿವಿ ಚುಚ್ಚಿಸಿ ಸ್ಟೈಲೀಶ್ ಇಯರಿಂಗ್ಸ್  ಹಾಕಿದ ಕೊಹ್ಲಿ!

ಪ್ರತಿ ಟೂರ್ನಿಗೆ ಹೊಸ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಪರಂಪರೆಯನ್ನು ಎಂ.ಎಸ್.ಧೋನಿ ಹುಟ್ಟು ಹಾಕಿದ್ದರು. ಇದೀಗ ವಿರಾಟ್ ಕೊಹ್ಲಿ ಸರದಿ. ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಈ ಟೂರ್ನಿಗೆ ಇದೀಗ ವಿರಾಟ್ ಕೊಹ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
 

27

ಆಗಸ್ಟ್ 30 ರಿಂದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಬಿಸಿಸಿಐ ತಂಡ ಪ್ರಕಟಿಸಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ ಹೊಸ ಲುಕ್‌ನಲ್ಲಿ ಪ್ರತ್ಯಕ್ಷಗೊಂಡಿದ್ದಾರೆ. ಕೊಹ್ಲಿ ಕಿವಿ ಚುಚ್ಚಿಸಿಕೊಂಡಿದ್ದಾರೆ.
 

37

ವಿರಾಟ್ ಕೊಹ್ಲಿ ಕಿವಿ ಚುಚ್ಚಿಸಿಕೊಂಡು ಕಿವಿಯೋಲೆ ಹಾಕಿದ್ದಾರೆ. ಸ್ಟೈಲೀಶ್ ಇಯರಿಂಗ್ಸ್ ಹಾಕಿರುವ ಕೊಹ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

47

ಹೊಸ ಲುಕ್‌ನಲ್ಲಿ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಹೊಸ ಲುಕ್ ಕೊಹ್ಲಿಯನ್ನು ಮತ್ತಷ್ಟು ಸ್ಟೈಲೀಶ್ ಮಾಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

57
Virat Kohli

ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಆರಂಭಿಕ ದಿನಗಳಲ್ಲಿ ಕೊಹ್ಲಿ ಕಿವಿಯೋಲೆಯಲ್ಲಿ ಕಾಣಿಸಿಕೊಂಡಿದ್ದರು.  ಬಳಿಕ ಕೊಹ್ಲಿ ತಮ್ಮ ಲುಕ್ ಹಾಗೂ ಫಿಸಿಕ್ ಬದಲಿಸಿದ್ದರು.

67

ಕೊಹ್ಲಿ ಶೀಘ್ರದಲ್ಲೇ ಏಷ್ಯಾಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ದ ಆಡಲಿದೆ. ಸೆಪ್ಟೆಂಬರ್ 2 ರಂದು ಈ ಪಂದ್ಯ ನಡೆಯಲಿದೆ.

77

ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜಿಸಲಾಗಿದ್ದರೆ, ಇತರ ಏಷ್ಯಾಕಪ್ ಪಂದ್ಯಗಳು ಪಾಕಿಸ್ತಾನದಲ್ಲಿ ಆಯೋಜಿಸಲಾಗಿದೆ. ಭಾರತ ತಂಡ ಪಾಕ್ ಪ್ರವಾಸಕ್ಕೆ ನಿರಾಕರಿಸಿದ ಕಾರಣ ಈ ರೀತಿ ಆಯೋಜನೆ ಮಾಡಲಾಗಿದೆ.
 

Read more Photos on
click me!

Recommended Stories