ಕಡಿಮೆ ಟೆಸ್ಟ್ ಮೊತ್ತಗಳು, ಭಾರತ vs ನ್ಯೂಜಿಲೆಂಡ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನ ಭಾರತ 46 ರನ್‌ಗಳಿಗೆ ಆಲೌಟ್ ಆಯ್ತು. ಯಾವ ಭಾರತೀಯ ಆಟಗಾರನೂ ದೊಡ್ಡ ಇನ್ನಿಂಗ್ಸ್ ಆಡ್ಲಿಕ್ಕೆ ಆಗಲಿಲ್ಲ. ರಿಷಭ್ ಪಂತ್, ಯಶಸ್ವಿ ಜೈಸ್ವಾಲ್ ಮಾತ್ರ ಎರಡಂಕಿ ರನ್ ಗಳಿಸಿದ್ರು. ಉಳಿದವರೆಲ್ಲ ಒಂದಂಕಿ ರನ್‌ಗಳಿಗೆ ಔಟಾದ್ರು.
ಇದು ಭಾರತ ತಂಡದ ಸ್ವಂತ ನೆಲದಲ್ಲಿ ಗಳಿಸಿದ ಅತಿ ಕಡಿಮೆ ಮೊತ್ತ. ಇದು ಭಾರತದ ಟೆಸ್ಟ್ ಇತಿಹಾಸದಲ್ಲಿ ಮೂರನೇ ಅತಿ ಕಡಿಮೆ ಮೊತ್ತ ಕೂಡ ಹೌದು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಟಾಪ್ 10 ಕಡಿಮೆ ಸ್ಕೋರ್ ಪಟ್ಟಿ ಇಲ್ಲಿದೆ.
10. ಆಸ್ಟ್ರೇಲಿಯಾ - 42 ರನ್‌ಗಳು
1888 ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 113 ರನ್ ಗಳಿಸಿತ್ತು. ಆಸ್ಟ್ರೇಲಿಯಾ 42 ರನ್‌ಗಳಿಗೆ ಆಲೌಟ್ ಆಯ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 82 ರನ್ ಗಳಿಸಿದ ಆಸ್ಟ್ರೇಲಿಯಾ ಕೊನೆಗೆ 126 ರನ್‌ಗಳ ಅಂತರದಿಂದ ಸೋತಿತ್ತು.
9. ನ್ಯೂಜಿಲೆಂಡ್ - 42 ರನ್‌ಗಳು
1946 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 42 ರನ್‌ಗಳಿಗೆ ಆಲೌಟ್ ಆಯ್ತು. ಆಸ್ಟ್ರೇಲಿಯಾ 199/8ಕ್ಕೆ ಡಿಕ್ಲೇರ್ ಮಾಡಿದ್ದರಿಂದ, ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 54 ರನ್‌ಗಳಿಗೆ ಮತ್ತೆ ಕುಸಿಯಿತು. ಇದರಿಂದ ಇನ್ನಿಂಗ್ಸ್ ಮತ್ತು 103 ರನ್‌ಗಳ ಅಂತರದಿಂದ ಸೋಲನುಭವಿಸಿತು.
8. ಐರ್ಲೆಂಡ್ - 38 ರನ್‌ಗಳು
2019 ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಜೊತೆ ನಡೆದ ಐತಿಹಾಸಿಕ ಟೆಸ್ಟ್‌ನಲ್ಲಿ ಐರ್ಲೆಂಡ್ 182 ರನ್‌ಗಳ ಗುರಿ ಬೆನ್ನಟ್ಟುವಾಗ 38 ರನ್‌ಗಳಿಗೆ ಆಲೌಟ್ ಆಯ್ತು. ಆದ್ರೆ ಮೊದಲ ಇನ್ನಿಂಗ್ಸ್‌ನಲ್ಲಿ 207 ರನ್ ಗಳಿಸಿ ಇಂಗ್ಲೆಂಡನ್ನು 85 ರನ್‌ಗಳಿಗೆ ಆಲೌಟ್ ಮಾಡಿತ್ತು.
7. ಭಾರತ - 36 ರನ್‌ಗಳು
2020 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್‌ಗಳ ಮುನ್ನಡೆ ಸಾಧಿಸಿದ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ತನ್ನ ಕಡಿಮೆ ಟೆಸ್ಟ್ ಮೊತ್ತವಾದ 36 ರನ್‌ಗಳನ್ನು ದಾಖಲಿಸಿತು. ಕಡಿಮೆ ಗುರಿಯನ್ನು ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆದ್ದಿತು.
6. ಆಸ್ಟ್ರೇಲಿಯಾ - 36 ರನ್‌ಗಳು
1902 ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ 376/9 ಮೊತ್ತ ನಿಗದಿಪಡಿಸಿದ ನಂತರ ಆಸ್ಟ್ರೇಲಿಯಾ 36 ರನ್‌ಗಳಿಗೆ ಆಲೌಟ್ ಆಯ್ತು. ಫಾಲೋ ಆನ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು.
5. ದಕ್ಷಿಣ ಆಫ್ರಿಕಾ - 36 ರನ್‌ಗಳು
1932 ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ಜೊತೆ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 36 ರನ್‌ಗಳಿಗೆ ಕುಸಿಯಿತು. 117 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಬೆನ್ನಟ್ಟುವಾಗ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 45 ರನ್‌ಗಳಿಗೆ ಆಲೌಟ್ ಆದರು. ಇದರಿಂದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಮತ್ತು 72 ರನ್‌ಗಳ ಅಂತರದಿಂದ ಸೋತಿತು.
4. ದಕ್ಷಿಣ ಆಫ್ರಿಕಾ - 35 ರನ್‌ಗಳು
1899 ರಲ್ಲಿ ಕೇಪ್‌ಟೌನ್‌ನಲ್ಲಿ ಇಂಗ್ಲೆಂಡ್ ಜೊತೆ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 35 ರನ್‌ಗಳಿಗೆ ಕುಸಿಯಿತು. ಇಂಗ್ಲೆಂಡನ್ನು 92 ರನ್‌ಗಳಿಗೆ ಕಟ್ಟಿಹಾಕಿತ್ತು. 246 ರನ್‌ಗಳ ಗುರಿಯೊಂದಿಗೆ ಕಣಕ್ಕಿಳಿದು 210 ರನ್‌ಗಳ ಅಂತರದಿಂದ ಸೋತಿತು.
3. ದಕ್ಷಿಣ ಆಫ್ರಿಕಾ - 30 ರನ್‌ಗಳು
1924 ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಗಳಿಸಿದ 438 ರನ್‌ಗಳಿಗೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ 30 ರನ್‌ಗಳಿಗೆ ಆಲೌಟ್ ಆಯ್ತು. ಫಾಲೋ-ಆನ್ ನಂತರ ಅವರು ಇನ್ನಿಂಗ್ಸ್ ಮತ್ತು 18 ರನ್‌ಗಳ ಅಂತರದಿಂದ ಸೋತರು.
2. ದಕ್ಷಿಣ ಆಫ್ರಿಕಾ - 30 ರನ್‌ಗಳು
1896 ರಲ್ಲಿ ಕ್ಯಾನ್‌ಬೆರಾದಲ್ಲಿ ದಕ್ಷಿಣ ಆಫ್ರಿಕಾ ಮತ್ತೆ 319 ರನ್‌ಗಳ ಬೆನ್ನಟ್ಟುವಿಕೆಯಲ್ಲಿ 30 ರನ್‌ಗಳ ಮೊತ್ತದೊಂದಿಗೆ ಸೋಲನುಭವಿಸಿತು. ಈ ಪಂದ್ಯದಲ್ಲಿ 288 ರನ್‌ಗಳ ಅಂತರದಿಂದ ಇಂಗ್ಲೆಂಡ್ ವಿರುದ್ಧ ಸೋತಿತು.
1. ನ್ಯೂಜಿಲೆಂಡ್ - 26 ರನ್‌ಗಳು
1955 ರಲ್ಲಿ ಆಕ್ಲೆಂಡ್‌ನಲ್ಲಿ 26 ರನ್‌ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್ ಟೆಸ್ಟ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತವನ್ನು ದಾಖಲಿಸಿ ಕೆಟ್ಟ ಸಾಧನೆ ಮಾಡಿತು. ಮೊದಲ ಇನ್ನಿಂಗ್ಸ್ ನಂತರ 46 ರನ್‌ಗಳ ಹಿನ್ನಡೆಯಲ್ಲಿದ್ದ ಅವರು ಈ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 26 ರನ್‌ಗಳ ಅಂತರದಿಂದ ಸೋತರು.