ಜಿಂಬಾಬ್ವೆ ಪ್ರವಾಸದಿಂದ ವಾಷಿಂಗ್ಟನ್ ಸುಂದರ್ ಔಟ್, RCB ಕ್ರಿಕೆಟಿಗನಿಗೆ ಒಲಿದ ಜಾಕ್‌ಪಾಟ್..!

First Published Aug 16, 2022, 3:35 PM IST

ಹರಾರೆ: ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಕೆ ಎಲ್ ರಾಹುಲ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಈಗಾಗಲೇ ಜಿಂಬಾಬ್ವೆಗೆ ಬಂದಿಳಿದಿದೆ. ಜಿಂಬಾಬ್ವೆ ಎದುರಿನ ಏಕದಿನ ಸರಣಿಗೂ ಮುನ್ನ ಭುಜದ ನೋವಿಗೆ ತುತ್ತಾಗಿದ್ದ ವಾಷಿಂಗ್ಟನ್ ಸುಂದರ್, ಜಿಂಬಾಬ್ವೆ ಪ್ರವಾಸದಿಂದ ಹೊರಬಿದ್ದಿದ್ದರು. ಇದೀಗ ವಾಷಿಂಗ್ಟನ್ ಸುಂದರ್‌ ಅವರ ಬದಲಿ ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿ ಹೆಸರಿಸಿದ್ದು, ಆರ್‌ಸಿಬಿ ಆಟಗಾರನಿಗೆ ಜಾಕ್‌ಪಾಟ್ ಹೊಡೆದಿದೆ. 
 

ಆಗಸ್ಟ್‌ 18ರಿಂದ ಜಿಂಬಾಬ್ವೆ ವಿರುದ್ದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಬಿದ್ದಿದ್ದಾರೆ. ಭುಜದ ನೋವಿನ ಸಮಸ್ಯೆಯಿಂದ ತಮಿಳುನಾಡು ಮೂಲದ ಆಟಗಾರ ಬಳಲುತ್ತಿದ್ದಾರೆ.
 

ಇದೀಗ ಬಿಸಿಸಿಐ ಆಯ್ಕೆ ಸಮಿತಿಯು ವಾಷಿಂಗ್ಟನ್ ಸುಂದರ್ ಅವರಿಗೆ ಬದಲಿ ಆಟಗಾರನನ್ನು ಹೆಸರಿಸಿದ್ದು, ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ಶಹಬಾಜ್ ಅಹಮದ್‌ಗೆ ತಂಡದಲ್ಲಿ ಮಣೆ ಹಾಕಲಾಗಿದೆ. 
 

2020ರಲ್ಲಿ ಶೆಹಬಾಜ್‌ ಅಹಮದ್‌ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತೆಕ್ಕೆಗೆ ಖರೀದಿಸಿತ್ತು. ಇದುವರೆಗೂ ಐಪಿಎಲ್‌ನಲ್ಲಿ 29 ಪಂದ್ಯಗಳನ್ನಾಡಿ 279 ರನ್‌ ಹಾಗೂ 13 ವಿಕೆಟ್ ಕಬಳಿಸಿದ್ದಾರೆ. 
 

ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದ ಕೌಂಟಿ ಪಂದ್ಯವೊಂದರಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಎಡ ಭುಜದ ನೋವಿಗೆ ತುತ್ತಾಗಿದ್ದು, ಜಿಂಬಾಬ್ವೆ ಪ್ರವಾಸದಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಆಗಸ್ಟ್ 18, 20 ಹಾಗೂ 22 ರಂದು ನಡೆಯಲಿದೆ. ಕೆ ಎಲ್ ರಾಹುಲ್‌, ಭಾರತ ಕ್ರಿಕೆಟ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ.

ಈ ಮೊದಲು ಶಿಖರ್ ಧವನ್ ಅವರನ್ನು ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಜಿಂಬಾಬ್ವೆ ಪ್ರವಾಸಕ್ಕೂ ರಾಹುಲ್‌ ಸಂಪೂರ್ಣ ಫಿಟ್‌ ಆಗಿದ್ದರಿಂದ ಕೆ ಎಲ್ ರಾಹುಲ್‌ಗೆ ನಾಯಕ ಪಟ್ಟ ಕಟ್ಟಲಾಗಿದ್ದು, ಶಿಖರ್ ಧವನ್ ಅವರನ್ನು ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ.
 

ಇನ್ನು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತಾರಾ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಯುಜುವೇಂದ್ರ ಚಹಲ್ ಅವರಂತಹ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
 

click me!