ಜಿಂಬಾಬ್ವೆ ಟಿ20 ಸರಣಿ ಗೆಲುವಿನ ಬೆನ್ನಲ್ಲೇ ಮತ್ತೆ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ, ನಿಟ್ಟುಸಿರು ಬಿಟ್ಟ ಅಯ್ಯರ್

Published : Jul 26, 2026, 10:35 PM IST

ಸತತ ಸರಣಿ ಸೋಲಿನಿಂದ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದ ಟೀಂ ಇಂಡಿಯಾ ಇದೀಗ ಮತ್ತೆ ನಂಬರ್ 1 ಸ್ಥಾನಕ್ಕೇರಿದೆ. ಐಸಿಸಿ ಟಿ20 ರ್ಯಾಕಿಂಗ್‌ನಲ್ಲಿ ಭಾರತ ಮೊದಲ ಸ್ಥಾನಕ್ಕೇರಿದ್ದು, ನಾಯಕ ಶ್ರೇಯಸ್ ಅಯ್ಯರ್ ನಿಟ್ಟುಸಿರು ಬಿಟ್ಟಿದ್ದಾರೆ.

PREV
15
ಟಿ20ಯಲ್ಲಿ ನಂ.1 ಸ್ಥಾನಕ್ಕೇರಿದ ಭಾರತ

ಟಿ20ಯಲ್ಲಿ ನಂ.1 ಸ್ಥಾನದಲ್ಲಿದ್ದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಕುಸಿತ ಕಂಡಿತ್ತು. ಐರ್ಲೆಂಡ್ ಹಾಗ ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿನಿಂದ ಭಾರತ ಮೊದಲ ಸ್ಥಾನ ಬಿಟ್ಟುಕೊಡಬೇಕಾಗಿ ಬಂದಿತ್ತು. ಇದೀಗ ಜಿಂಬಾಬ್ವೆ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ‍್ಯಾಂಕ್ ಪ್ರಕಟವಾಗಿದ್ದು, ಭಾರತ ಮೊದಲ ಸ್ಥಾನಕ್ಕೇರಿದೆ.

25
2ನೇ ಸ್ಥಾನಕ್ಕೆ ಕುಸಿದಿದ್ದ ಟೀಂ ಇಂಡಿಯಾ

ಸೂರ್ಯಕುಮಾರ್ ನಾಯಕತ್ವದ ಟಿ20 ತಂಡ 2026ರ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ಈ ಮೂಲಕ ಟಿ20ಯಲ್ಲಿ ನಂ.1 ಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಐಪಿಎಲ್ ಟೂರ್ನಿ ಬಳಿಕ ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಿದ ಬಿಸಿಸಿಐ, ಶ್ರೇಯಸ್ ಅಯ್ಯರ್‌ಗೆ ನಾಯಕ ಸ್ಥಾನ ನೀಡಿತ್ತು. ಇದರ ಬೆನ್ನಲ್ಲೇ 2 ಸರಣಿ ಸೋತು ಐಸಿಸಿ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಕುಸಿದಿತ್ತು.

35
ಶ್ರೇಯಸ್ ಅಯ್ಯರ್ ಮೇಲೆ ತೀವ್ರ ಒತ್ತಡ

ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲಿ 11ನೇ ರ‍್ಯಾಂಕ್‌ನಲ್ಲಿದ್ದ ಐರ್ಲೆಂಡ್ ವಿರುದ್ದ ಭಾರತಕ್ಕೆ ಸರಣಿ ಸೋಲು. ಬಳಿಕ ಇಂಗ್ಲೆಂಡ್ ವಿರುದ್ದ 0-4 ಅಂತರದಲ್ಲಿ ಸರಣಿ ಸೋಲಿನಿಂದ ಭಾರತ ರ್ಯಾಕಿಂಗ್ ಕುಸಿತ ಅನುಭವಿಸಿತ್ತು. ಮೊದಲೇ ಸೋಲಿನ ಟೀಕೆ ನಡುವೆ ರ‍್ಯಾಂಕಿಂಗ್ ಟೀಕೆಯೂ ಶ್ರೇಯಸ್ ಅಯ್ಯರ್ ಹೆಗಲೇರಿತ್ತು. ಇದೀಗ ಮತ್ತೆ ನಂ.1 ಸ್ಥಾನಕ್ಕೇರುವ ಮೂಲಕ ಶ್ರೇಯಸ್ ಅಯ್ಯರ್ ನಿಟ್ಟುಸಿರು ಬಿಟ್ಟಿದ್ದಾರೆ.

45
ಐಸಿಸಿ ಟಿ20 ರ‍್ಯಾಂಕ್
  • ನಂ.1 , ಭಾರತ
  • ನಂ.2 , ಇಂಗ್ಲೆಂಡ್
  • ನಂ.3, ಆಸ್ಟ್ರೇಲಿಯಾ
  • ನಂ.4, ನ್ಯೂಜಿಲೆಂಡ್
  • ನಂ.5, ಸೌತ್ ಆಫ್ರಿಕಾ
  • ನಂ.6, ಪಾಕಿಸ್ತಾನ
  • ನಂ.7, ವೆಸ್ಟ್ ಇಂಡೀಸ್
  • ನಂ.8, ಬಾಂಗ್ಲಾದೇಶ
  • ನಂ.9, ಶ್ರೀಲಂಕಾ
  • ನಂ.10, ಆಫ್ಘಾನಿಸ್ತಾನ
55
12ನೇ ರ‍್ಯಾಂಕ್ ಜಿಂಬಾಬ್ವೆ ವಿರುದ್ಧ ಗೆಲುವಿನ ಕುರಿತು ಚರ್ಚೆ

ಐರ್ಲೆಂಡ್ 11ನೇ ರ‍್ಯಾಂಕ್ ಹೊಂದಿದ್ದರೆ, ಜಿಂಬಾಬ್ವೆ ಟಿ20ಯಲ್ಲ 12ನೇ ರ‍್ಯಾಂಕ್ ಹೊಂದಿದೆ. ಟೀಂ ಇಂಡಿಯಾ ಇದೀಗ 12ನೇ ರ‍್ಯಾಂಕಿಂಗ್ ತಂಡದ ಜೊತೆ ಸರಣಿ ಗೆದ್ದಿರುವುದು ದೊಡ್ಡ ಸಾಧನೆಯಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಟೀಂ ಇಂಡಿಯಾ ಸರಣಿ ಸೋಲಿನಿಂದ ಹೊರಬಂದಿದೆ ಎಂದು ಸಮಾಧಾನ ಪಟ್ಟುಕೊಂಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories