Ind vs SA: ಹರಿಣಗಳ ವಿರುದ್ದದ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ; ಪಾದಾರ್ಪಣೆ ಮಾಡ್ತಾರಾ ಆರ್‌ಸಿಬಿ ಕ್ರಿಕೆಟಿಗ?

First Published Oct 6, 2022, 11:56 AM IST

ಲಖನೌ(ಅ.06): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಲ್ಲಿನ ಏಕಾನ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ಟಿ20 ವಿಶ್ವಕಪ್‌ನಲ್ಲಿ ಆಡಲು ಗುರುವಾರ ಒಂದು ತಂಡ ಹೊರಡಲಿದ್ದು, ಮತ್ತೊಂದು ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಏಕದಿನ ಸರಣಿಯನ್ನು ಆರಂಭಿಸಲಿದೆ. ಶಿಖರ್‌ ಧವನ್‌ ನೇತೃತ್ವದ, ಬಹುತೇಕ ಯುವ ಆಟಗಾರರೇ ಇರುವ ತಂಡವು 3 ಪಂದ್ಯಗಳ ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ
 

1. ಶಿಖರ್ ಧವನ್: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ನಾಯಕರಾಗಿ ನೇಮಕವಾಗಿರುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮೇಲೆ ಆರಂಭಿಕನಾಗಿ ಉತ್ತಮ ಆರಂಭ ಒದಗಿಸಿಕೊಡುವ ಜವಾಬ್ದಾರಿಯ ಜತೆಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದ ಒತ್ತಡವಿದೆ.

2. ಶುಭ್‌ಮನ್‌ ಗಿಲ್‌: ಪ್ರತಿಭಾನ್ವಿತ ಯುವ ಬ್ಯಾಟರ್ ಶುಭ್‌ಮನ್‌ ಗಿಲ್‌, ವಿಂಡೀಸ್ ಹಾಗೂ ಜಿಂಬಾಬ್ವೆ ಎದುರು ಉತ್ತಮ ಪ್ರದರ್ಶನ ತೋರಿದ್ದರು. ಇದೀಗ ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಗಿಲ್ ಎದುರು ನೋಡುತ್ತಿದ್ದಾರೆ.
 

3. ಶ್ರೇಯಸ್ ಅಯ್ಯರ್: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್, ಬಲಾಢ್ಯ ತಂಡದ ಎದುರು ಅಭ್ಯಾಸ ನಡೆಸಲು ಉತ್ತಮ ಅವಕಾಶ ಒದಗಿ ಬಂದಿದೆ. ಅಯ್ಯರ್ ಟಿ20 ವಿಶ್ವಕಪ್ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.

4. ಸಂಜು ಸ್ಯಾಮ್ಸನ್: ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಸಂಜು ಸ್ಯಾಮ್ಸನ್‌, ಏಕದಿನ ತಂಡದಲ್ಲಿ ಭದ್ರವಾಗಿ ನೆಲೆಯೂರಲು ಎದುರು ನೋಡುತ್ತಿದ್ದು, ಹರಿಣಗಳೆದುರು ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ.

5. ರಜತ್ ಪಾಟಿದಾರ್: ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿರುವ ಪಾಟಿದಾರ್, ದೇಶಿ ಕ್ರಿಕೆಟ್‌ನಲ್ಲೂ ಮಿಂಚಿದ್ದು, ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

6. ರಾಹುಲ್ ತ್ರಿಪಾಠಿ: ಐಪಿಎಲ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಮಿಂಚುತ್ತಿರುವ ರಾಹುಲ್‌ ತ್ರಿಪಾಠಿ ಏಕದಿನ ಕ್ರಿಕೆಟ್‌ನಲ್ಲಿ ಫಿನಿಶರ್ ಪಾತ್ರವನ್ನು ನಿಭಾಯಿಸಲು ಎದುರು ನೋಡುತ್ತಿದ್ದಾರೆ.

7. ಶಾರ್ದೂಲ್ ಠಾಕೂರ್: ಕಳೆದೊಂದು ವರ್ಷದಿಂದ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಲು ಪರದಾಡುತ್ತಿರುವ ಶಾರ್ದೂಲ್ ಠಾಕೂರ್, ಬೌಲಿಂಗ್ ಆಲ್ರೌಂಡರ್ ರೂಪದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ.
 

8. ಕುಲ್ದೀಪ್ ಯಾದವ್: ಗಾಯದ ಸಮಸ್ಯೆ ಹಾಗೂ ಫಾರ್ಮ್‌ ಕಾರಣದಿಂದ ಭಾರತ ತಂಡದಿಂದ ಹೊರಗುಳಿದಿದ್ದ ಕುಲ್ದೀಪ್ ಯಾದವ್, ಇದೀಗ ಚಹಲ್, ಅಶ್ವಿನ್ ಅನುಪಸ್ಥಿತಿಯಲ್ಲಿ ತಜ್ಞ ಸ್ಪಿನ್ನರ್ ಅಗಿ ಕಣಕ್ಕಿಳಿಯಲಿದ್ದಾರೆ.

9. ಮೊಹಮ್ಮದ್ ಸಿರಾಜ್: ದಕ್ಷಿಣ ಅಫ್ರಿಕಾ ವಿರುದ್ದದ ಟಿ20 ಸರಣಿಯಲ್ಲಿ ಕೊನೆಯ ಕ್ಷಣದಲ್ಲಿ ಸೇರ್ಪಡೆಗೊಂಡಿರುವ ಹೈದರಾಬಾದ್ ಮೂಲದ ವೇಗಿ ಸಿರಾಜ್, ಇದೀಗ ಏಕದಿನ ಕ್ರಿಕೆಟ್‌ನಲ್ಲೂ ಮಿಂಚಲು ಕಾಯುತ್ತಿದ್ದಾರೆ.

10. ದೀಪಕ್ ಚಹರ್:  ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಸ್ವಿಂಗ್ ಸ್ಪೆಷಲಿಸ್ಟ್‌ ದೀಪಕ್ ಚಹರ್ ಜವಾಬ್ದಾರಿಯುತ ಬೌಲಿಂಗ್ ಪ್ರದರ್ಶನ ತೋರಬೇಕಿದೆ.
 

11. ರವಿ ಬಿಷ್ಣೋಯಿ: ಯುವ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಕೂಡಾ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಸರಣಿಯಲ್ಲಿ ಎದುರು ನೋಡುತ್ತಿದ್ದಾರೆ.

click me!