1. ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ಲಯದಲ್ಲಿದ್ದು, ಆಸೀಸ್ ಎದುರಿಸಿ ಎರಡನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹಿಟ್‌ಮ್ಯಾನ್ ಅದೇ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
2. ಕೆ ಎಲ್ ರಾಹುಲ್: ಆಸೀಸ್ ಎದುರಿನ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದ ರಾಹುಲ್, ಆ ಬಳಿಕ ಎರಡು ಪಂದ್ಯಗಳಲ್ಲಿ ವಿಫಲವಾಗಿದ್ದರು. ಇದೀಗ ರಾಹುಲ್, ಟಿ20 ವಿಶ್ವಕಪ್‌ಗೂ ಮುನ್ನ ಲಯ ಕಂಡುಕೊಳ್ಳಲು ಹಾತೊರೆಯುತ್ತಿದ್ದಾರೆ.
3. ವಿರಾಟ್ ಕೊಹ್ಲಿ: ಏಷ್ಯಾಕಪ್ ಟೂರ್ನಿಯಿಂದ ಭರ್ಜರಿ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ, ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಆಸೀಸ್ ಎದುರು ಅಬ್ಬರಿಸಿದ್ದರು. ಇದೀಗ ಅದೇ ಲಯ ಹರಿಣಗಳ ವಿರುದ್ದದವೂ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದ್ದಾರೆ.
4. ಸೂರ್ಯಕುಮಾರ್ ಯಾದವ್: ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಆಸೀಸ್ ಎದುರೂ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಸೂರ್ಯ, ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ.
5. ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ಗೆ ಆಸೀಸ್ ಎದುರಿನ ಸರಣಿಯಲ್ಲಿ ಮಿಂಚಲು ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಪಂತ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದೆ.
6. ದಿನೇಶ್ ಕಾರ್ತಿಕ್: ಟೀಂ ಇಂಡಿಯಾ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್, ಆಸೀಸ್ ಎದುರಿನ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದರು. ಅದೇ ಪ್ರದರ್ಶನ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದ್ದಾರೆ.
7. ಅಕ್ಷರ್ ಪಟೇಲ್: ಜಡೇಜಾ ಅನುಪಸ್ಥಿತಿಯಲ್ಲಿ ತಂಡ ಕೂಡಿಕೊಂಡಿರುವ ಅಕ್ಷರ್ ಪಟೇಲ್, ಆಸೀಸ್ ಎದುರಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಅಕ್ಷರ್ ಪಟೇಲ್ ಮೇಲೆ ಸಾಕಷ್ಟು ನಿರೀಕ್ಷೆಗಳು ಸೃಷ್ಟಿಯಾಗಿವೆ.
Image credit: Getty
8. ರವಿಚಂದ್ರನ್ ಅಶ್ವಿನ್: ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್, ಆಸೀಸ್ ಸರಣಿಯಲ್ಲಿ ಕೇವಲ ಒಂದು ವಿಕೆಟ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಹರಿಣಗಳ ಎದುರಿನ ಸರಣಿಯಲ್ಲಿ ಅನುಭವಿ ಅಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಮಣೆಹಾಕುವ ಸಾಧ್ಯತೆಯಿದೆ.
Image credit: Getty
9. ದೀಪಕ್ ಚಹರ್: ಅನುಭವಿ ವೇಗಿ ಗಾಯದ ಸಮಸ್ಯೆಯಿಂದ ಕಮ್‌ಬ್ಯಾಕ್ ಮಾಡಿದ್ದು, ಆಸೀಸ್ ಸರಣಿಯಲ್ಲಿ ಬೆಂಚ್ ಕಾಯಿಸಿದ್ದರು. ಇದೀಗ ಭುವನೇಶ್ವರ್ ಕುಮಾರ್ ವಿಶ್ರಾಂತಿ ಪಡೆದಿರುವುದರಿಂದ ದೀಪಕ್ ಚಹರ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ.
Arshdeep Singh
10. ಆರ್ಶದೀಪ್ ಸಿಂಗ್: ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್, ಆಸೀಸ್ ಎದುರಿನ ಸರಣಿಯಲ್ಲಿ ದುಬಾರಿಯಾಗಿದ್ದರು. ಹೀಗಾಗಿ ಯುವ ವೇಗಿ ಆರ್ಶದೀಪ್ ಸಿಂಗ್‌ಗೆ ಹರಿಣಗಳ ಎದುರಿನ ಸರಣಿಯಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ.
11. ಜಸ್ಪ್ರೀತ್ ಬುಮ್ರಾ: ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಬಳಿಕ ಕಮ್‌ಬ್ಯಾಕ್ ಮಾಡಿದ್ದರಾದರೂ, ಆಸೀಸ್ ಎದುರಿನ ಸರಣಿಯಲ್ಲಿ ನಿರೀಕ್ಷಿತ ಲಯಕ್ಕೆ ಮರಳಿರಲಿಲ್ಲ. ಇದೀಗ ಹರಿಣಗಳ ಎದುರು ಫಾರ್ಮ್‌ಗೆ ಮರಳಲು ಬುಮ್ರಾ ತುದಿಗಾಲಿನಲ್ಲಿ ನಿಂತಿದ್ದಾರೆ