1. ಋತುರಾಜ್ ಗಾಯಕ್ವಾಡ್:
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬೆಂಚ್ ಕಾಯಿಸಿದ್ದ ಪ್ರತಿಭಾನ್ವಿತ ಬ್ಯಾಟರ್ ಗಾಯಕ್ವಾಡ್, ಇದೀಗ ಐರ್ಲೆಂಡ್ ಎದುರು ಇನಿಂಗ್ಸ್ ಆರಂಭಿಸುವ ಹೊಣೆ ಹೊತ್ತುಕೊಂಡಿದ್ದಾರೆ. ಉತ್ತಮ ಇನಿಂಗ್ಸ್ ಕಟ್ಟುವ ಜತೆಗೆ ಉಪನಾಯಕನಾಗಿಯೂ ತಮ್ಮ ಸಾಮರ್ಥ್ಯವನ್ನು ಗಾಯಕ್ವಾಡ್ ಸಾಬೀತುಪಡಿಸಬೇಕಿದೆ.
2. ಯಶಸ್ವಿ ಜೈಸ್ವಾಲ್:
ಮುಂಬೈ ಮೂಲದ ಸ್ಪೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮಿಂಚಿದ್ದ ಯಶಸ್ವಿ, ಇದೀಗ ಅದೇ ಲಯವನ್ನು ಐರ್ಲೆಂಡ್ ಸರಣಿಯಲ್ಲೂ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
3. ಸಂಜು ಸ್ಯಾಮ್ಸನ್:
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್, ವಿಂಡೀಸ್ ಎದುರಿನ ಟಿ20 ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದರು. ಮುಂಬರುವ ಏಷ್ಯಾಕಪ್ ಹಾಗೂ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಬೇಕಿದ್ದರೇ, ಸಂಜು ಅಸಾಧಾರಣ ಪ್ರದರ್ಶನ ತೋರಬೇಕಿದೆ.
4. ತಿಲಕ್ ವರ್ಮಾ
ಭಾರತ 4ನೇ ಕ್ರಮಾಂಕದ ಭವಿಷ್ಯದ ತಾರೆ ಎಂದೇ ಬಿಂಬಿತವಾಗುತ್ತಿರುವ ತಿಲಕ್ ವರ್ಮಾ ಪಾಲಿಗೂ ಈ ಸರಣಿ ಸಾಕಷ್ಟು ಮಹತ್ವದ್ದಾಗಿದೆ. ವಿಂಡೀಸ್ ಎದುರು ಸ್ಥಿರ ಪ್ರದರ್ಶನದ ಮೂಲಕ ಮಿಂಚಿದ್ದ ತಿಲಕ್, ಐರ್ಲೆಂಡ್ ನೆಲದಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ.
5. ರಿಂಕು ಸಿಂಗ್
ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಮ್ಯಾಚ್ ಫಿನಿಶರ್ ಆಗಿ ಅಬ್ಬರಿಸಿದ್ದ ರಿಂಕು ಸಿಂಗ್, ಇದೇ ಮೊದಲ ಬಾರಿಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ರಿಂಕು ಮತ್ತೆ ಸಾಕಷ್ಟು ನಿರೀಕ್ಷೆಗಳಿವೆ.
6. ಶಿವಂ ದುಬೆ:
ಆಲ್ರೌಂಡರ್ ಶಿವಂ ದುಬೆ ಕೂಡಾ ಕಳೆದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ದುಬೆಗೆ ಈ ಸರಣಿ ಸಾಕಷ್ಟು ಮಹತ್ವದ್ದೆನಿಸಿದೆ.
7. ವಾಷಿಂಗ್ಟನ್ ಸುಂದರ್:
ತಮಿಳುನಾಡು ಮೂಲದ ಪ್ರತಿಭಾನ್ವಿತ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಫಿಟ್ನೆಸ್ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದು, ಇದೀಗ ತಂಡ ಕೂಡಿಕೊಂಡಿದ್ದು, ಈ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
8. ಜಸ್ಪ್ರೀತ್ ಬುಮ್ರಾ:
ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 11 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಬುಮ್ರಾನಿಗೆ ನಾಯಕ ಪಟ್ಟ ಕಟ್ಟಲಾಗಿದ್ದು, ಐರ್ಲೆಂಡ್ ಎದುರು ಮಿಂಚಿ, ಏಷ್ಯಾಕಪ್‌ನಲ್ಲಿ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ.
9. ರವಿ ಬಿಷ್ಣೋಯ್:
ಯುವ ಪ್ರತಿಭಾನ್ವಿತ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯ್, ತಮ್ಮ ಚಾಣಾಕ್ಷ ಸ್ಪಿನ್ ದಾಳಿಯ ಮೂಲಕ ಐರ್ಲೆಂಡ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ರವಿ ಬಿಷ್ಣೋಯ್ ಎದುರು ನೋಡುತ್ತಿದ್ದಾರೆ.
10. ಪ್ರಸಿದ್ಧ್ ಕೃಷ್ಣ:
ಕನ್ನಡದ ವೇಗಿ ಪ್ರಸಿದ್ಧ್ ಕೃಷ್ಣ ಸಹ ಹಲವು ತಿಂಗಳುಗಳ ಬಳಿಕ ಕ್ರಿಕೆಟ್‌ಗೆ ವಾಪಸಾಗಲು ಕಾತರಿಸುತ್ತಿದ್ದು, ಏಷ್ಯಾಕಪ್ ಹಾಗೂ ವಿಶ್ವಕಪ್ ತಂಡಕ್ಕೆ ಆಯ್ಕೆ ನಿರೀಕ್ಷೆಯಲ್ಲಿರುವ ಪ್ರಸಿದ್ಧ್ ತಮ್ಮ ಸಾಮರ್ಥ್ಯ ಅನಾವರಣ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
11. ಮುಕೇಶ್ ಕುಮಾರ್:
ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಯುವ ವೇಗಿ ಮುಕೇಶ್ ಕುಮಾರ್‌ಗೆ ಮತ್ತೊಮ್ಮೆ ಭಾರತ ಕ್ರಿಕೆಟ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.