ಮಾಡೆಲ್ ಆದಿತಿ ಜೊತೆ ಇಶಾನ್ ಕಿಶನ್ ಮದುವೆ, ಪ್ರೀತಿ ಖಚಿತಪಡಿಸಿದ ಕ್ರಿಕೆಟಿಗನ ಅಜ್ಜ

Published : Feb 16, 2026, 10:58 PM IST

ಮಾಡೆಲ್ ಆದಿತಿ ಜೊತೆ ಇಶಾನ್ ಕಿಶನ್ ಮದುವೆ, ಇಶಾನ್ ಕಿಶನ್‌ ಬಹುಕಾಲದ ಗರ್ಲ್‌ಫ್ರೆಂಡ್ ಮದುವೆಯಾಗುತ್ತಾರೆ. ಕಿಶನ್ ಪ್ರೀತಿಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ. ಯಾರು ಈ ಸುಂದರಿ? 

PREV
15
ಗರ್ಲ್‌‌ಫ್ರೆಂಡ್ ಜೊತೆ ಮದುವೆ

ಟಿ20 ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಇಶಾನ್ ಕಿಶನ್ ಇತಿಹಾಸ ರಚಿಸಿದ್ದರು. ಇದರ ಬೆನ್ನಲ್ಲೇ ಇಶಾನ್ ಕಿಶನ್ ಮದುವೆ ಮಾತುಕತೆಗಳು ಕೇಳಿಬರುತ್ತಿದೆ. ಇಶಾನ್ ಕಿಶನ್ ಗರ್ಲ್‌ಫ್ರೆಂಡ್, ಮದುವೆ ಮಾತುಗಳ ಬೆನ್ನಲ್ಲೇ ಕ್ರಿಕೆಟಿನ ಅಜ್ಜ ಅನುರಾಗ್ ಪಾಂಡೆ ಖಚಿತಪಡಿಸಿದ್ದಾರೆ. ಇಶಾನ್ ಕಿಶನ್ ಗರ್ಲ್‌ಫ್ರೆಂಡ್ ಇರುವುದು ನಿಜ. ಆಕೆಯ ಜೊತೆಗೆ ಮದುವೆಯಾಗುತ್ತಾರೆ ಎಂದಿದ್ದಾರೆ.

25
ಇಶಾನ್ ಕಿಶನ್ ಮದುವೆಯಾಗೋ ಹುಡಿಗಿ ಯಾರು?

ಇಶಾನ್ ಕಿಶನ್ ಮದುವೆಯಾಗುತ್ತಿರುವ ಹುಡಿಗಿ ಆದಿತಿ ಹುಂಡಿಯಾ. ಇಶಾನ್ ಕಿಶನ್ ಕಳೆದ ಕೆಲ ವರ್ಷಗಳಿಂದ ಅದಿತಿ ಹುಂಡಿಯಾ ಜೊತೆ ಪ್ರೀತಿಯಲ್ಲಿದ್ದಾರೆ. ಈ ಕುರಿತು ಇಶಾನ್ ಕಿಶನ್ ತನ್ನ ಅಜ್ಜನ ಬಳಿ ಹೇಳಿಕೊಂಡಿದ್ದರು. ಇಶಾನ್ ಕಿಶನ್ ಪ್ರೀತಿ ವಿಚಾರ ಎರಡೂ ಮನೆಯವರಿಗೂ ಗೊತ್ತಿದೆ. ಇವರಿಬ್ಬರ ಪ್ರೀತಿಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಅನುರಾಗ್ ಪಾಂಡೆ ಹೇಳಿದ್ದಾರೆ.

35
ಯಾರು ಈ ಅದಿತಿ ಹುಂಡಿಯಾ

ಅದಿತಿ ಹುಂಡಿಯಾ ಜೈಪುರದ ಮಾಡೆಲ್. ಹಲವು ಬ್ಯೂಟಿ ವೇದಿಕೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2018ರಲ್ಲಿ ಮಿಸ್ ದಿವಾ ಪ್ರಶಸ್ತಿ ಗೆದ್ದಿರುವ ಅದಿತಿ ಹುಂಡಿಯಾ, ಬಳಿಕ ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿ ಗಮನ ಸೆಳೆದಿದ್ದರು. 2019ರ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಚಿಯರ್ ಮಾಡಿ ಕ್ಯಾಮೆರಾ ಕಣ್ಣಿಗೆ ಬಿದ್ದು ವೈರಲ್ ಆಗಿದ್ದರು. ಜೈಪುರದ ಖ್ಯಾತ ಉದ್ಯಮಿ ಪುತ್ರಿಯಾಗಿರುವ ಆದಿತಿ, ಇಶಾನ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ.

45
ಮಕ್ಕಳ ಖುಷಿ ನಮ್ಮ ಖುಷಿ

ಇಶಾನ್ ಕಿಶನ್ ಪ್ರೀತಿಸುತ್ತಿರುವ ವಿಚಾರ ಹೇಳಿದ್ದಾರೆ. ಮಾಡೆಲ್ ಅದಿತಿ ಜೊತೆ ಪ್ರೀತಿಯಲ್ಲಿದ್ದಾರೆ. ಇಶಾನ್ ಕಿಶನ್ ನಿರ್ಧಾರವೇ ನಮ್ಮದು. ಮಕ್ಕಳು ಖುಷಿಯಾಗಿರುವುದು ಮುಖ್ಯ. ಅವರ ಪ್ರೀತಿಯನ್ನು ನಾವು ಒಪ್ಪಿದ್ದೇವೆ. ಆಕೆಯನ್ನು ಮನೆಗೆ ಸ್ವಾಗತಿಸವು ನಾವು ಸಿದ್ಧರಿದ್ದೇವೆ ಎಂದು ಅನುರಾಗ್ ಪಾಂಡೆ ಹೇಳಿದ್ದಾರೆ.

55
ಇಶಾನ್-ಅದಿತಿಯಿಂದ ಅಧಿಕೃತ ಘೋಷಣೆ ಇಲ್ಲ

ಇಶಾನ್ ಕಿಶನ್ ಹಾಗೂ ಅದಿತಿ ಪ್ರೀತಿ ಕುರಿತು ಅಜ್ಜ ಅನುರಾಗ್ ಪಾಂಡೆ ಖಚಿತಪಡಿಸಿದ್ದಾರೆ. ಆದರೆ ಕ್ರಿಕೆಟಿಗ ಇಶಾನ್ ಕಿಶನ್, ಮಾಡೆಲ್ ಆದಿತಿ ಈ ಕುರಿತು ಯಾವುದೇ ವಿಚಾರ ಅಧಿಕೃತಗೊಳಿಸಿಲ್ಲ. ಅನುರಾಗ್ ಪಾಂಡೆ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದೆ ಎನ್ನುತ್ತಿದೆ.

ಇಶಾನ್-ಅದಿತಿಯಿಂದ ಅಧಿಕೃತ ಘೋಷಣೆ ಇಲ್ಲ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories