ರಾಹುಲ್ ದ್ರಾವಿಡ್ ಅವರಿಂದ ತೆರೆವಾಗಿದ್ದ ಟೀಂ ಇಂಡಿಯಾ ಹೆಡ್ ಕೋಚ್ ಸ್ಥಾನವನ್ನು ಇದೀಗ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಲಂಕರಿಸಿದ್ದಾರೆ. ಗಂಭೀರ್ ಅವರ ಮುಂದೆ ಸಾಕಷ್ಟು ಸವಾಲು ಹಾಗೂ ನಿರೀಕ್ಷೆಗಳ ಭಾರವೇ ಇದೆ.
2003ರಿಂದ 2016ರ ವರೆಗೆ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಆಗಿ ಗಮನ ಸೆಳೆದಿದ್ದ ಗೌತಮ್ ಗಂಭೀರ್, ಟೀಂ ಇಂಡಿಯಾ ಎರಡು ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2007ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಬಾರಿಸುವ ಮೂಲಕ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ದಶಕಗಳ ಕಾಲ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದು ಮಾತ್ರವಲ್ಲದೇ, ಲೋಕಸಭಾ ಸಂಸದರಾಗಿಯೂ ಗಂಭೀರ್ ಸೈ ಎನಿಸಿಕೊಂಡಿದ್ದರು. ಸ್ಪೋರ್ಟ್ಸ್‌ಕೀಡಾ ವರದಿ ಪ್ರಕಾರ ಗೌತಮ್ ಗಂಭೀರ್ ಅವರ ಒಟ್ಟು ಸಂಪತ್ತು ಬರೋಬ್ಬರಿ 205 ಕೋಟಿ ರುಪಾಯಿಗಳಾಗಿವೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗಂಭೀರ್ ಕಳೆದ ಐಪಿಎಲ್ ವೇಳೆ 25 ಕೋಟಿ ರುಪಾಯಿ ಗಳಿಸಿದ್ದರು. ಇದಕ್ಕೂ ಮೊದಲು ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದಾಗ ಒಂದು ಸೀಸನ್‌ಗೆ 3.5 ಕೋಟಿ ರುಪಾಯಿ ಗಳಿಸುತ್ತಿದ್ದರು ಎಂದು ವರದಿಯಾಗಿದೆ.
ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಗಂಭೀರ್ 2019ರಲ್ಲಿ ರಾಜಕೀಯಕ್ಕೆ ಎಂಟ್ರಿಕೊಟ್ಟರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಡೆಲ್ಲಿ ಪಶ್ಚಿಮ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಗಂಭೀರ್ ಸಂಸದರಾಗಿದ್ದಾಗಲೇ ಖಾಸಗಿ ಕ್ರೀಡಾ ಚಾನೆಲ್‌ನಲ್ಲಿ ವೀಕ್ಷಕ ವಿವರಣೆಗಾರ ಹಾಗೂ ಕ್ರಿಕೆಟ್ ವಿಶ್ಲೇಷಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಗಂಭೀರ್ ವಾರ್ಷಿಕ 1.5 ಕೋಟಿ ರುಪಾಯಿ ಸಂಪಾಧಿಸುತ್ತಿದ್ದರು.
ಗೌತಮ್ ಗಂಭೀರ್ ದೆಹಲಿಯಲ್ಲಿ 20 ಕೋಟಿ ರುಪಾಯಿ ಮೌಲ್ಯದ ಐಶಾರಾಮಿ ಮನೆಯಲ್ಲಿ ತಮ್ಮ ಪತ್ನಿ ಹಾಗೂ ಮತ್ತಿಬ್ಬರು ಮಕ್ಕಳ ಜತೆ ವಾಸವಾಗಿದ್ದಾರೆ. ಇದಷ್ಟೇ ಅಲ್ಲದೇ ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ ಎರಡು ಪ್ರಾಪರ್ಟಿಗಳು ಗಂಭೀರ್ ಹೆಸರಿನಲ್ಲಿವೆ.
ಇನ್ನು ಇದರ ಜತೆಗೆ ಗೌತಮ್ ಗಂಭೀರ್ ಬಳಿ ಆಡಿ ಕ್ಯೂ5, ಬಿಎಂಡಬ್ಲ್ಯೂ 530D, ಟಯೋಟಾ ಕೊರೊಲಾ ಮತ್ತ ಮಹೇಂದ್ರಾ ಬೊಲೆರೋ ಸ್ಟಿಂಜರ್‌ನಂತಹ ಐಶಾರಾಮಿ ಕಾರುಗಳ ಕಲೆಕ್ಷನ್ ಇದೆ.