ದೀದಿ ನೀಡಿದ್ದ ಜಮೀನು ವಾಪಾಸ್ ಕೊಟ್ಟ ದಾದ..! ಬಿಜೆಪಿ ಸೇರ್ತಾರ ಕೋಲ್ಕತಾ ಮಹರಾಜ..?

First Published | Aug 24, 2020, 1:50 PM IST

ಕೋಲ್ಕತ: ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಇದೀಗ ಮತ್ತೊಮ್ಮೆ ಬಿಸಿಸಿಐ ಸುದ್ದಿಯಲ್ಲಿದ್ದಾರೆ. ಆದರೆ ಈಗ ಸುದ್ದಿಯಲ್ಲಿರುವುದು ಕ್ರಿಕೆಟ್ ಕುರಿತಾಗಿ ಅಲ್ಲ ಬದಲಾಗಿ ರಾಜಕೀಯ ಕಾರಣಕ್ಕಾಗಿ ಸೌರವ್ ಗಂಗೂಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿದ ಬಳಿಕ ಸೌರವ್ ಗಂಗೂಲಿ ರಾಜಕೀಯ ಪ್ರವೇಶ ಮಾಡುತ್ತಾರಾ ಎನ್ನುವ ಕುರಿತಂತೆ ಚರ್ಚೆಗಳು ಆರಂಭವಾಗಿವೆ. ದೀದಿಯನ್ನು ಭೇಟಿ ಮಾಡಿದ್ದಕ್ಕೂ ದಾದಾ ಬಿಜೆಪಿ ಸೇರುತ್ತಾರೆ ಎನ್ನುವುದಕ್ಕೂ ಏನು ಸಂಬಂಧ ಎನ್ನುತ್ತೀರಾ? ಈ ಸ್ಟೋರಿ ನೋಡಿ ನಿಮಗೆ ಅರ್ಥವಾಗುತ್ತೆ.

ಒಂದು ಕಡೆ ಕೊರೋನಾ ಭೀತಿಯ ನಡುವೆಯೇ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಭರದಿಂದ ಸಿದ್ಧತೆಗಳು ಆರಂಭವಾಗಿವೆ.
undefined
ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಕಚೇರಿಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ದಾದ ಭೇಟಿ ಮಾಡಿದ್ದಾರೆ ಎಂದು ಔಟ್‌ಲುಕ್‌ ಮ್ಯಾಗ್‌ಜಿನ್ ವೆಬ್‌ಸೈಟ್ ವರದಿ ಮಾಡಿದೆ.
undefined

Latest Videos


ಈ ವರದಿ ಪ್ರಕಾರ ಸೌರವ್‌ಗೆ ತೃಣಮೂಲ ಕಾಂಗ್ರೆಸ್ ಸರ್ಕಾರ ನೀಡಿದ್ದ ಜಮೀನನ್ನು ಸರ್ಕಾರಕ್ಕೆ ಹಿಂತಿರುಗಿಸಿ ನೀಡಲು ಗಂಗೂಲಿ ದೀದಿಯನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.
undefined
ಈ ಹಿಂದೆ ಎಡ ಸರ್ಕಾರ ಶಾಲೆಯನ್ನು ನಿರ್ಮಿಸಲು ಸೌರವ್ ಗಂಗೂಲಿಗೆ ಜಮೀನನ್ನು ನೀಡಿತ್ತು. ಆದರೆ ಕಾನೂನು ತೊಡಕುಗಳು ಎದುರಾಗಿದ್ದರಿಂದ ಶಾಲೆಯನ್ನು ನಿರ್ಮಿಸಲು ಗಂಗೂಲಿಗೆ ಸಾಧ್ಯವಾಗಿರಲಿಲ್ಲ.
undefined
ತೃಣಮೂಲ ಕಾಂಗ್ರೆಸ್ ಸರ್ಕಾರದ ಪಶ್ಚಿಮ ಬಂಗಾಳ ಗೃಹ ನಿರ್ಮಾಣಾಭಿವೃದ್ದಿ ಪ್ರಾಧಿಕಾರವು ಸೌರವ್ ಗಂಗೂಲಿಗೆ 12ನೇ ತರಗತಿ(ICSE)ವರೆಗೆ ಶಾಲೆಯನ್ನು ಕಟ್ಟಲು ಜಮೀನನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ದಾದಗೆ ಕಾನೂನು ತೊಡಕುಗಳು ಎದುರಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
undefined
ಈಗ ಗಂಗೂಲಿ ಎಜುಕೇಶನ್ ಅಂಡ್ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷರಾಗಿರುವ ಸೌರವ್ ತಮಗೆ ನೀಡಿದ್ದ ಜಮೀನನ್ನು ಹಿಂತಿರುಗಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
undefined
ಇದೇ ವೇಳೆ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಲಿದ್ದಾರೆ ಎನ್ನುವ ಗಾಳಿ ಸುದ್ದಿಯೂ ಹರಿದಾಡಲಾರಂಭಿಸಿದೆ.
undefined
ಕಳೆದ ವರ್ಷ ಸೌರವ್ ಗಂಗೂಲಿ ತಮಗೆ ರಾಜಕೀಯ ಸೇರುವ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದ್ದರು.
undefined
click me!