ರೋಹಿತ್ ಶರ್ಮಾ, ರಾಣಿ ಸೇರಿ ಐವರಿಗೆ ಖೇಲ್ ರತ್ನ ಪ್ರಶಸ್ತಿ ಗೌರವ

First Published | Aug 21, 2020, 6:18 PM IST

ನವದೆಹಲಿ: ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾಗೆ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಒಲಿದು ಬಂದಿದೆ. ಇದರೊಂದಿಗೆ ಖೇಲ್ ರತ್ನ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್, ಎಂ ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ರೋಹಿತ್ ಶರ್ಮಾ ಜತೆ ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ, ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಕೂಡಾ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮತ್ತೆ ಯಾವೆಲ್ಲಾ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಯಾರಿಗೆ ಸಿಕ್ಕಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
 

ರೋಹಿತ್ ಶರ್ಮಾ(ಕ್ರಿಕೆಟ್) ಖೇಲ್ ರತ್ನ
ಮರಿಯಪ್ಪನ್ ತಂಗವೇಲು(ಪ್ಯಾರ ಅಥ್ಲೀಟ್) ಖೇಲ್ ರತ್ನ
Tap to resize

ಮನಿಕ ಭಾತ್ರ(ಟೆನಿಸ್) ಖೇಲ್ ರತ್ನ
ವಿನೇಶ್ ಫೊಗಟ್(ಕುಸ್ತಿ) ಖೇಲ್ ರತ್ನ
ರಾಣಿ ರಾಂಪಾಲ್(ಹಾಕಿ) ಖೇಲ್ ರತ್ನ
ಆತನು ದಾಸ್(ಆರ್ಚರಿ) ಅರ್ಜುನ ಅವಾರ್ಡ್
ದ್ಯುತಿ ಚಾಂದ್(ಅಥ್ಲೇಟಿಕ್ಸ್) ಅರ್ಜುನ ಅವಾರ್ಡ್
ಇಶಾಂತ್ ಶರ್ಮಾ(ಕ್ರಿಕೆಟ್) ಅರ್ಜುನ ಅವಾರ್ಡ್
ಅರ್ಜುನ ಪ್ರಶಸ್ತಿ ಪಡೆದಿರುವವರ ಸಂಪೂರ್ಣ ಪಟ್ಟಿ
ಜೀವಮಾನ ಸಾಧನೆಯ ದ್ರೋಣಾಚಾರ್ಯ ಪ್ರಶಸ್ತಿ ಪಡೆದಿರುವವರ ಸಂಪೂರ್ಣ ಪಟ್ಟಿ
ದ್ರೋಣಾಚಾರ್ಯ ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ
ಧ್ಯಾನ್‌ ಚಂದ್ ಪ್ರಶಸ್ತಿ ಪಡೆದಿರುವವರ ಸಂಪೂರ್ಣ ಪಟ್ಟಿ

Latest Videos

click me!