ಟೀಂ ಇಂಡಿಯಾ ಕ್ರಿಕೆಟಿಗ to ಬಿಸಿಸಿಐ ಅಧ್ಯಕ್ಷ; ಗಂಗೂಲಿ ಹೋರಾಟದ ಹಾದಿ!

First Published | Oct 23, 2019, 12:18 PM IST

ಟೀಂ ಇಂಡಿಯಾ ಮಾಜಿ ನಾಯಕ, ಅಗ್ರೆಸ್ಸಿವ್ ಕ್ರಿಕೆಟರ್ ಎಂದೇ ಗುರುತಿಸಿಕೊಂಡಿದ್ದ ಸೌರವ್ ಗಂಗೂಲಿ ಇದೀಗ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಗಂಗೂಲಿ ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ. ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಗಂಗೂಲಿಗೆ ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಚುಕ್ಕಾಣಿ ಹೆಗಲೇರಿದೆ. ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದಾಗಿನಿಂದ, ಇಲ್ಲೀವರೆಗೂ ಗಂಗೂಲಿ ಹೋರಾಟ ಹಾದಿಯಲ್ಲೇ ಮುನ್ನಡೆದಿದ್ದಾರೆ. ಇದೀಗ 9 ತಿಂಗಳ ಅಧಿಕಾರ ಕೂಡ ಸವಾಲಿನಿಂದ ಕೂಡಿದೆ.  ಚಿತ್ರಗಳಲ್ಲಿ ಗಂಗೂಲಿ ಸ್ಮರಣೀಯ ಹೆಜ್ಜೆಗಳ ವಿವರ.

ಬಿಸಿಸಿಐ 39ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ
ಜುಲೈ 8, 1972ರಲ್ಲಿ ಕೋಲ್ಕಾತದಲ್ಲಿ ಹುಟ್ಟಿದ ಸೌರವ್ ಗಂಗೂಲಿ
Tap to resize

gangulyಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಗಂಗೂಲಿಗೆ ಬಾಲ್ಯದಲ್ಲಿ ಮಹರಾಜ ಎಂದು ಕರೆಯುತ್ತಿದ್ದರು
ಫುಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಗಂಗೂಲಿ, ಸಹೋದರನಿಂದ ಕ್ರಿಕೆಟ್‌ನತ್ತ ಒಲವು
1992ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಸೌರವ್ ಗಂಗೂಲಿ
ಕುಟುಂಬದ ವಿರೋಧದ ನಡುವೆ ಫೆ. 21, 1997ರಲ್ಲಿ ಬಾಲ್ಯದ ಗೆಳತಿ ಡೋನಾ ರಾಯ್ ಮದುವೆಯಾದ ಗಂಗೂಲಿ
1999ರ ವಿಶ್ವಕಪ್ ಟೂರ್ನಿಯಲ್ಲಿ ಗಂಗೂಲಿ ಆರಂಭಿಕನಾಗಿ ಬಡ್ತಿ
ಮ್ಯಾಚ್ ಫಿಕ್ಸಿಂಗ್‌ನಿಂದ ನಾಯಕ ಅಜರ್‌ಗೆ ನಿಷೇದ, 2000ನೇ ಇಸವಿಯಲ್ಲಿ ಗಂಗೂಲಿಗೆ ನಾಯಕತ್ವ
2002ರ ನಾಟ್ ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಮಣಿಸಿದ ಗಂಗೂಲಿ ನೇತೃತ್ವ ಟೀಂ ಇಂಡಿಯಾಗೆ ಪ್ರಶಸ್ತಿ
ನಾಟ್ ವೆಸ್ಟ್ ಸರಣಿ ಗೆಲ್ಲುತ್ತಿದ್ದಂತೆ ಲಾರ್ಡ್ಸ್ ಬಾಲ್ಕನಿಯಲ್ಲಿ ಶರ್ಟ್ ಬಿಚ್ಚಿ ಇಂಗ್ಲೆಂಡ್ ಕ್ರಿಕೆಟಿಗ ಆ್ಯಂಡ್ರೂ ಫ್ಲಿಂಟಾಫ್‌ಗೆ ತಿರುಗೇಟು
2003ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ರನ್ನರ್ ಅಪ್ ಪ್ರಶಸ್ತಿ
ಕಳಪೆ ಪ್ರದರ್ಶನ ಹಾಗೂ ಫಿಟ್ನೆಸ್ ಸಮಸ್ಯೆಯಿಂದ 2005ರಲ್ಲಿ ತಂಡದಿಂದ ಹೊರಬಿದ್ದ ಸೌರವ್ ಗಂಗೂಲಿ
ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಸೌರವ್ ಗಂಗೂಲಿಗೆ ಕೋಚ್ ಗ್ರೆಗ್ ಚಾಪೆಲ್ ಶಾಕ್
ಗಂಗೂಲಿ ಅನ್‌ಫಿಟ್ ಎಂದು ಬಿಸಿಸಿಐಗೆ ಪತ್ರ ಬರೆದ ಕೋಚ್ ಚಾಪೆಲ್, ತಂಡದಿಂದ ಡ್ರಾಪ್
2006ರಲ್ಲಿ ಮತ್ತೆ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಸೌರವ್ ಗಂಗೂಲಿ
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಗಂಗೂಲಿ
2008ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ನಾಯಕನಾಗಿ ಆಯ್ಕೆ, 2009ರಲ್ಲಿ ನಾಯಕತ್ವ ಬದಲಾವಣೆ
ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವೀಕ್ಷಕ ವಿವರಣೆಗಾರ, ವಿಶ್ಲೇಷಕನಾಗಿ ಕಾಣಿಸಿಕೊಂಡ ಗಂಗೂಲಿ
2015ರಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷನಾಗಿ ಆಯ್ಕೆ
2015ರಿಂದ 2019ರ, ಅಕ್ಟೋಬರ್ ವರೆಗೆ ಬಂಗಾಳ ಕ್ರಿಕೆಟ್ ಸಂಸ್ಥಯ ಅಧ್ಯಕ್ಷ
ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷಸ್ಥಾನಕ್ಕೆ ಚುನಾಯಿತರಾಗಿ, ಅ.23ರಕ್ಕೆ ಅಧಿಕಾರ ಸ್ವೀಕರಿಸಿದ ದಾದಾ

Latest Videos

click me!