ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ KL ರಾಹುಲ್ ಭೇಟಿ; ಇಲ್ಲಿವೆ ಫೋಟೋಗಳು

ಬೆಂಗಳೂರು: ಫಿಟ್ನೆಸ್ ಸಮಸ್ಯೆಯಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಕೆ ಎಲ್ ರಾಹುಲ್ ಇದೀಗ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು. ಇದಾದ ನಂತರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಿದರು. ಇಲ್ಲಿವೆ ನೋಡಿ ಎಕ್ಸ್‌ಕ್ಲೂಸಿವ್ ಫೋಟೋಗಳು

ಶ್ರೀ ಕ್ಷೇತ್ರಕ್ಕೆ ಭೇಟಿ

ಫಿಟ್ನೆಸ್ ಸಮಸ್ಯೆಯಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಕೆ ಎಲ್ ರಾಹುಲ್ ಇದೀಗ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಐಪಿಎಲ್‌ ವೇಳೆ ಗಾಯ:

16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್‌ ನಾಯಕ ಕೆ ಎಲ್ ರಾಹುಲ್ ಗಾಯಗೊಂಡಿದ್ದರು.
 


ಟೆಸ್ಟ್ ವಿಶ್ವಕಪ್‌ನಿಂದಲೂ ಔಟ್:

ತೊಡೆ ನೋವಿನ ಸಮಸ್ಯೆಯಿಂದ ಐಪಿಎಲ್‌ ಅರ್ಧದಲ್ಲೇ ತೊರೆದಿದ್ದ ಕೆ ಎಲ್ ರಾಹುಲ್, ಆಸ್ಟ್ರೇಲಿಯಾ ಎದುರಿನ ಟೆಸ್ಟ್ ವಿಶ್ವಕಪ್‌ ಫೈನಲ್‌ನಿಂದಲೂ ಹೊರಬಿದ್ದಿದ್ದರು.

ವಿಂಡೀಸ್ ಸರಣಿಯಿಂದಲೂ ಹೊರಕ್ಕೆ:

ಜುಲೈ 12ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್‌ ಪ್ರವಾಸಕ್ಕೆ ಭಾರತ ಟೆಸ್ಟ್&ಏಕದಿನ ಸರಣಿಗೆ ಭಾರತ ತಂಡ ಪ್ರಕಟಿಸಿದ್ದು, ಕೆ ಎಲ್ ರಾಹುಲ್‌ ಫಿಟ್ ಆಗದ ಹಿನ್ನಲೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ

ಬಡ ವಿದ್ಯಾರ್ಥಿಗೆ ನೆರವು:

ಕೆಲ ದಿನಗಳ ಹಿಂದಷ್ಟೇ ಕೆ ಎಲ್ ರಾಹುಲ್, ಬಾಗಲಕೋಟೆಯ ಬಡ ವಿದ್ಯಾರ್ಥಿಗೆ ಸಿಎ ಮಾಡಲು ಆರ್ಥಿಕವಾಗಿ ನೆರವಾಗುವ ಮೂಲಕ ಗಮನ ಸೆಳೆದಿದ್ದರು.

ಧರ್ಮಸ್ಥಳಕ್ಕೆ ಭೇಟಿ

ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ಕೆ ಎಲ್ ರಾಹುಲ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು.

ವೀರೇಂದ್ರ ಹೆಗ್ಗಡೆ ಭೇಟಿ:

ಇದಾದ ನಂತರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಿದರು. ಶ್ರೀ ಹೆಗ್ಗಡೆಯವರು ರಾಹುಲ್‌ ಅವರನ್ನು ಸನ್ಮಾನಿಸಿದರು.
 

ಡಿ. ವೀರೇಂದ್ರ ಹೆಗ್ಗಡೆ ಕುಟುಂಬ ಭೇಟಿ

ಹೇಮಾವತಿ ವಿ. ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.
 

Latest Videos

click me!