CBSE ಟಾಪರ್‌, ಐಎಎಫ್‌ ಕೆಲಸ, ಎಲ್ಲವನ್ನೂ ಬಿಟ್ಟು ಈಕೆ ಆಯ್ಕೆ ಮಾಡಿಕೊಂಡಿದ್ದು ಕ್ರಿಕೆಟ್‌!

First Published | Jun 16, 2023, 3:33 PM IST

ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಆಲ್ರೌಂಡರ್ ಶಿಖಾ ಪಾಂಡೆ ಓರ್ವ ಪ್ರತಿಭಾನ್ವಿಯ ವಿದ್ಯಾರ್ಥಿ. ಓದಿನಲ್ಲಿ ಸಿಬಿಎಸ್‌ಇ ಟಾಪರ್ ಆಗಿದ್ದ ಶಿಖಾ ಪಾಂಡೆ, ಇಂಜಿನಿಯರಿಂಗ್ ಪದವಿಧರೇ ಕೂಡಾ ಹೌದು. ಏರ್‌ಫೋರ್ಸ್‌ನಲ್ಲಿ ಉದ್ಯೋಗ ಪಡೆದ ಶಿಖಾ ಪಾಂಡೆ, ತಾವು ಕ್ರಿಕೆಟರ್ ಆಗುವ ಕನಸು ನನಸು ಮಾಡಿಕೊಂಡ ರೀತಿ ನಿಜಕ್ಕೂ ಸ್ಪೂರ್ತಿ

ಬಲಗೈ ವೇಗಿ ಹಾಗೂ ಮಧ್ಯಮ ಕ್ರಮಾಂಕದ ಮಹಿಳಾ ಬ್ಯಾಟರ್‌ ಶಿಖಾ ಪಾಂಡೆ ಅವರ ಕ್ರಿಕೆಟ್ ಜರ್ನಿಯ ಕಥೆ ತುಂಬಾ ಕುತೂಹಲಕಾರಿಯಾದದ್ದು. ಶಿಖಾ ಪಾಂಡೆ ತಮ್ಮ ಕನಸು ನನಸು ಮಾಡಿಕೊಂಡಿದ್ದೇ ಒಂದು ಸ್ಪೂರ್ತಿಯ ಕಥೆ.

ಏರ್‌ಫೋರ್ಸ್‌ನಲ್ಲಿ ಒಳ್ಳೆಯ ಅವಕಾಶ ಸಿಕ್ಕರೇ ಲೈಫ್ ಸೆಟ್ಲ್ ಆಯ್ತು ಎಂದು ಸುಮ್ಮನೇ ಇರುವವರ ನಡುವೆ ಶಿಖಾ ಕೊಂಚ ಭಿನ್ನವಾಗಿ ನಿಲ್ಲುತ್ತಾರೆ. ಉತ್ತಮ ಸಂಬಳದ ಏರ್‌ಫೋರ್ಸ್‌ನಲ್ಲಿನ ಹುದ್ದೆ ತೊರೆದು ವೃತ್ತಿಪರ ಕ್ರಿಕೆಟರ್ ಆಗುವ ಕನಸು ನನಸಾಗಿಸಿಕೊಂಡಿದ್ದಾರೆ ಶಿಖಾ ಪಾಂಡೆ

Tap to resize

ತೆಲಂಗಾಣದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಶಿಖಾ ಪಾಂಡೆ, ಓದುವುದರಲ್ಲಿ ತುಂಬಾ ಪ್ರತಿಭಾವಂತೆಯಾಗಿದ್ದರು. 10ನೇ ತರಗತಿ CBSE ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು.

ಕ್ರಿಕೆಟ್‌ನಲ್ಲಿಯೂ ಆಸಕ್ತಿ ಹೊಂದಿದ್ದ ಶಿಖಾ ಪಾಂಡೆ, ಸಿಬಿಎಸ್‌ಇ ಪರೀಕ್ಷೆಯಲ್ಲಿ ಟಾಪರ್ ಆಗುತ್ತಿದ್ದಂತೆಯೇ , ಓದಿನತ್ತ ಮತ್ತಷ್ಟು ಗಮನ ಹರಿಸಿದರು. ಹೀಗಾಗಿ ಕ್ರಿಕೆಟ್‌ ಕಡೆಗಿನ ಶಿಖಾ ಪಾಂಡೆ ಗಮನ ಕಡಿಮೆಯಾಗುತ್ತಾ ಬಂತು.

ಗೋವಾ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ, ಮತ್ತೆ ಶಿಖಾ ಪಾಂಡೆ ಕ್ರಿಕೆಟ್ ಅಂಗಳಕ್ಕೆ ಮರಳಿದರು. ಬೆಳಗ್ಗೆ ಓದಿನತ್ತ ಗಮನ ಹರಿಸಿದರೆ, ಸಂಜೆಯ ಮೇಲೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು.

ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಕಾಲೇಜ್ ಕ್ಯಾಂಪಸ್‌ ಸೆಲೆಕ್ಷನ್ ವೇಳೆ ಶಿಖಾ ಪಾಂಡೆ ಅವರಿಗೆ ಮೂರು ಎಂಎನ್‌ಸಿ ಕಂಪನಿಗಳು ಒಳ್ಳೆಯ ಸಂಬಳದ ಉದ್ಯೋಗದ ಆಫರ್‌ ನೀಡಿದ್ದವು. ಆದರೆ ಕಾರ್ಪೋರೇಟ್‌ ಕಂಪನಿಗಳ ಆಫರ್‌ ಅನ್ನು ಶಿಖಾ ತಿರಸ್ಕರಿಸಿ ಓದು ಹಾಗೂ ಕ್ರಿಕೆಟ್‌ನತ್ತ ಗಮನ ಹರಿಸಿದರು.

ಇದಾದ ಬಳಿಕ 2011ರಲ್ಲಿ ಶಿಖಾ ಪಾಂಡೆ ಇಂಡಿಯನ್‌ ಏರ್‌ಫೋರ್ಸ್‌ ಸೇರಿದರು. ಇದಾಗಿ ಮರು ವರ್ಷವೇ ಶಿಖಾ ಏರ್‌ ಟ್ರಾಫಿಕ್ ಕಂಟ್ರೋಲರ್ ಆಗಿ ಬಡ್ತಿ ಪಡೆದರು. ಹೀಗಿದ್ದೂ ಶಿಖಾ ಅವರ ಸೆಳೆತ ಕ್ರಿಕೆಟ್‌ನತ್ತ ಹೆಚ್ಚಿತ್ತು.

ಇದಾದ ಬಳಿಕ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಲಾರಂಭಿಸಿದರು. ಪರಿಣಾಮ, 2014ರಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದರು. ಈ ಮೂಲಕ ದಿಲೀಪ್ ಸರ್‌ದೇಸಾಯಿ ಬಳಿಕ ಭಾರತ ಪ್ರತಿನಿಧಿಸಿದ ಮೊದಲ ಗೋವಾ ಕ್ರಿಕೆಟರ್ ಎನ್ನುವ ಹೆಗ್ಗಳಿಕೆಗೆ ಶಿಖಾ ಪಾತ್ರರಾದರು.

2014ರಲ್ಲಿಯೇ ಶಿಖಾ ಪಾಂಡೆ ಭಾರತ ಪರ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯವನ್ನಾಡಿ ಮಿಂಚಿದರು. 2020ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಶಿಖಾ ಪಾಂಡೆಗೆ ಇಂಡಿಯನ್‌ ಏರ್‌ಫೋರ್ಸ್‌ನಲ್ಲಿ ಸ್ಕ್ವಾಡ್ರನ್ ಲೀಡರ್ ರ‍್ಯಾಂಕ್‌ ನೀಡಿ ಗೌರವಿಸಲಾಯಿತು.

Latest Videos

click me!