ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ..! ಅಚ್ಚರಿ ಮಾಹಿತಿ ಬಿಚ್ಚಿಟ್ಟ ಪತ್ನಿ ಸಂಜನಾ

First Published | Apr 12, 2024, 1:34 PM IST

ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಮೂರು ಮಾದರಿಯ ಅತ್ಯುತ್ತಮ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಭಾರತ ತೊರೆದು ಕೆನಡಾ ಕ್ರಿಕೆಟ್ ತಂಡದ ಪರ ಆಡಲು ಮುಂದಾಗಿದ್ದರು ಎನ್ನುವ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಒಂದು ಕಾಲದಲ್ಲಿ ಜಸ್ಪ್ರೀತ್ ಬುಮ್ರಾ, ಭಾರತ ತೊರೆದು ಕೆನಡಾ ಕ್ರಿಕೆಟ್ ತಂಡದ ಪರ ಆಡಲು ಮುಂದಾಗಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ.
 

ಅರೇ, ಭಾರತದ ನಂ.1 ವೇಗದ ಬೌಲರ್ ಆಗಿರುವ ಬುಮ್ರಾ ಭಾರತವನ್ನು ಬಿಟ್ಟು ಕ್ರಿಕೆಟ್ ಶಿಶು ಎನಿಸಿಕೊಂಡಿರುವ ಕೆನಡಾ ಕ್ರಿಕೆಟ್ ತಂಡದ ಪರ ಆಡಲು ಮುಂದಾಗಿದ್ದೇಕೆ ಎಂದು ನೀವು ಕನ್ಫ್ಯೂಸ್ ಆಗಬೇಡಿ. ಹೀಗೆ ಬುಮ್ರಾ ತೀರ್ಮಾನಿಸಿದ್ದು ಈಗಲ್ಲ, ತುಂಬಾ ಹಿಂದೆ ಈ ರೀತಿ ಆಲೋಚನೆ ಮಾಡಿದ್ದರಂತೆ.

Tap to resize

ಹೌದು, ಜಿಯೋ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್, ಒಮ್ಮೆ ಬುಮ್ರಾ ಬಳಿ ತಾವು ಕೆನಡಾ ದೇಶಕ್ಕೆ ಹೋಗಲು ಮನಸ್ಸು ಮಾಡಿದ್ದೇಕೆ ಎನ್ನುವುದರ ಬಗ್ಗೆ ಹೇಳಿ ಎಂದು ಕೇಳಿದ್ದಾರೆ.

ಆಗ ಮಾತನಾಡಿದ ಜಸ್ಪ್ರೀತ್ ಬುಮ್ರಾ, "ಭಾರತದ ಪ್ರತಿ ಬೀದಿಯಲ್ಲಿ ಒಂದೆರಡಲ್ಲ ಕನಿಷ್ಠವೆಂದರೂ 25 ಕ್ರಿಕೆಟಿಗರು ಭಾರತ ಪರ ಆಡಬೇಕು ಎಂದು ಕನಸು ಕಾಣುತ್ತಾರೆ. ಹೀಗಾಗಿ ಒಂದು ಬ್ಯಾಕ್‌ಅಪ್ ಪ್ಲಾನ್ ಇರಲಿ ಎಂದು ನಾನು ಕೆನಡಾ ಹೋಗಲು ಆಲೋಚಿಸಿದ್ದೆ" ಎಂದು ಬುಮ್ರಾ ಹೇಳಿದ್ದಾರೆ.

"ಕೆನಡಾದಲ್ಲಿ ನಮ್ಮ ಚಿಕ್ಕಪ್ಪ ಇದ್ದರು. ಹೀಗಾಗಿ ನಾನು ಓದು ಮುಗಿಸಿದ ಬಳಿಕ ನಾನು ಅಲ್ಲಿಗೆ ಶಿಫ್ಟ್ ಆಗಬೇಕು ಎಂದು ಆಲೋಚಿಸಿದ್ದೆ. ನಮ್ಮ ಕುಟುಂಬ ಕೂಡಾ ಅಲ್ಲಿಗೆ ಶಿಫ್ಟ್ ಆಗಲು ತೀರ್ಮಾನಿಸಿತ್ತು" ಎಂದು ಬುಮ್ರಾ ಹೇಳಿದ್ದಾರೆ.

"ಆದರೆ ನಾವು ಕೆನಡಾಗೆ ತೆರಳಲು ನಮ್ಮ ಅಮ್ಮ ಒಪ್ಪಲಿಲ್ಲ. ಯಾಕೆಂದರೆ ಭಾರತದ ಸಂಸ್ಕೃತಿಗೂ ಹಾಗೂ ಕೆನಡಾದ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ನಾವು ಅಲ್ಲಿಗೆ ಹೋಗಲಿಲ್ಲ. ಈಗ ನಾನು ಭಾರತದಲ್ಲೇ ಕ್ರಿಕೆಟ್ ವೃತ್ತಿಬದುಕು ಕಟ್ಟಿಕೊಂಡಿದ್ದರ ಬಗ್ಗೆ ಹೆಮ್ಮೆಯಿದೆ" ಎಂದು ಬುಮ್ರಾ ಹೇಳಿದ್ದಾರೆ.

"ಒಂದು ವೇಳೆ ಅಮ್ಮ ಒಪ್ಪಿಕೊಂಡಿದ್ದರೇ, ನಾನು ಕೆನಡಾ ಕ್ರಿಕೆಟ್ ತಂಡದ ಪರ ಆಡುತ್ತಿದ್ದೆ. ಅದೃಷ್ಟವಶಾತ್ ಸರಿಯಾದ ಸಮಯದಲ್ಲಿ ನನಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅವಕಾಶ ಸಿಕ್ಕಿತು. ಇದಾದ ಬಳಿಕ ನನ್ನ ಬದುಕು ಬದಲಾಯಿತು" ಎಂದು ಬುಮ್ರಾ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಜಸ್ಪ್ರೀತ್ ಬುಮ್ರಾ, ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟರು. ಇದೀಗ ಬುಮ್ರಾ, ಮುಂಬೈ ಇಂಡಿಯನ್ಸ್ ಹಾಗೂ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ 2016ರಲ್ಲಿ ಟೀಂ ಇಂಡಿಯಾ ಪರ ಏಕದಿನ ಹಾಗೂ ಟಿ20 ಪಂದ್ಯವನ್ನಾಡಿದರು. ಇದಾದ ಬಳಿಕ 2018ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಎಂಟ್ರಿಕೊಟ್ಟರು.

Latest Videos

click me!