Hardik Pandya Watch Controversy: ದುಬಾರಿ ವಾಚ್‌ ಬಗ್ಗೆ ಸ್ಪಷ್ಟನೆ ಕೊಟ್ಟ ಟೀಂ ಇಂಡಿಯಾ ಆಲ್ರೌಂಡರ್..!

Suvarna News   | Asianet News
Published : Nov 17, 2021, 10:36 AM IST

ಮುಂಬೈ: ದುಬಾರಿ ವಾಚ್ ಖರೀದಿಯ ಕುರಿತಂತೆ ಟೀಂ ಇಂಡಿಯಾ (Team India) ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ(Hardik Pandya), ಇದೀಗ ವಿವಾದದ ಸುಳಿಗೆ ಸಿಲುಕಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ನೀರಸ ಪ್ರದರ್ಶನ ತೋರಿ, ಈಗಾಗಲೇ ಫಾರ್ಮ್‌ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ಎದುರು ತವರಿನಲ್ಲಿ ಆರಂಭವಾಗಲಿರುವ ಸರಣಿಯಿಂದ ಹೊರಬಿದ್ದಿರುವ ಹಾರ್ದಿಕ್‌ ಪಾಂಡ್ಯಗೆ ಮತ್ತೊಂದು ಶಾಕ್ ಎದುರಾಗಿದೆ. ಅಷ್ಟಕ್ಕೂ ಏನಿದು ವಾಚ್‌ ವಿವಾದ? ಈ ಕುರಿತಂತೆ ಹಾರ್ದಿಕ್ ಪಾಂಡ್ಯ ಹೇಳಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
17
Hardik Pandya Watch Controversy: ದುಬಾರಿ ವಾಚ್‌ ಬಗ್ಗೆ ಸ್ಪಷ್ಟನೆ ಕೊಟ್ಟ ಟೀಂ ಇಂಡಿಯಾ ಆಲ್ರೌಂಡರ್..!

ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ಸ್ಥಾನ ಪಡೆಯಲು ವಿಫಲರಾಗುವ ಮೂಲಕ ಮುಖಭಂಗ ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ ಎದುರಾಗಿದೆ.

27

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಕಳಪೆ ಪ್ರದರ್ಶನದೊಂದಿಗೆ ಬಿಸಿಸಿಐ(BCCI), ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹಾರ್ದಿಕ್‌ ಪಾಂಡ್ಯ, ದುಬೈನಿಂದ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. 
 

37

ದುಬೈನಿಂದ (Duai) ಹಾರ್ದಿಕ್‌ ತಲಾ 5 ಕೋಟಿ ರುಪಾಯಿ ಮೌಲ್ಯದ ಎರಡು ವಾಚ್‌ ತಂದಿದ್ದು, ಖರೀದಿಗೆ ಸೂಕ್ತ ದಾಖಲೆ ನೀಡದ ಕಾರಣ ವಾಚ್‌ಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

(photo source- Instagram)

47

ಹಾರ್ದಿಕ್ ಪಾಂಡ್ಯ ದುಬೈನಿಂದ ತಂದ ಎರಡು ದುಬಾರಿ ಮೌಲ್ಯದ ವಾಚ್‌ಗಳಿಗೆ ಯಾವುದೇ ಬಿಲ್ ಹೊಂದಿರಲಿಲ್ಲ. ಹೀಗಾಗಿ ಆದಾಯ ಸುಂಕ ಇಲಾಖೆಯ ಅಧಿಕಾರಿಗಳು ಆ ವಾಚ್‌ಗಳನ್ನು ಸೀಜ್ ಮಾಡಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿತ್ತು.  

57

ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆ ನೀಡಿರುವ ಹಾರ್ದಿಕ್‌, ‘ದುಬೈನಿಂದ ಬಂದಿಳಿದ ಬಳಿಕ ಸ್ವತಃ ನಾನೇ ಸುಂಕ ಪಾವತಿ ಹಾಗೂ ಖರೀದಿ ದಾಖಲೆ ಒದಗಿಸಲು ಕಸ್ಟಮ್ಸ್‌ ಅಧಿಕಾರಿಗಳ ಬಳಿ ಹೋಗಿದ್ದೇನೆ ಎಂದಿದ್ದಾರೆ

67

ಈ ಘಟನೆಯ ಕುರಿತಂತೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಖರೀದಿಯ ಬಗ್ಗೆ ಎಲ್ಲ ದಾಖಲೆಗಳನ್ನು ನೀಡುವಂತೆ ಕಸ್ಟಮ್ಸ್‌ ಅಧಿಕಾರಿಗಳು ಕೇಳಿದ್ದಾರೆ. ಅವುಗಳನ್ನು ಒದಗಿಸಿದ್ದೇನೆ. ನಾನು ತಂದಿರುವ ವಾಚ್‌ ಬೆಲೆ 5 ಕೋಟಿ ರು. ಅಲ್ಲ. ಅದರ ಬೆಲೆ 1.5 ಕೋಟಿ’ ಎಂದು ಸ್ಪಷ್ಟಪಡಿಸಿದ್ದಾರೆ.
 

77

ಕಳೆದ ವರ್ಷ ಹಾರ್ದಿಕ್‌ರ ಸಹೋದರ ಕೃನಾಲ್‌ ಪಾಂಡ್ಯ (Krunal Pandya) ದುಬೈನಿಂದ ದುಬಾರಿ ವಾಚ್‌ ಹಾಗೂ ದುಬಾರಿ ಮೊತ್ತದ ಚಿನ್ನಾಭರಗಳನ್ನು ತಂದಾಗಲೂ ಇದೇ ರೀತಿಯ ವಿವಾದ ಸೃಷ್ಟಿಯಾಗಿತ್ತು.
 

Read more Photos on
click me!

Recommended Stories