T20 World Cup: ಅಮೂಲ್ಯ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ ICC

Suvarna News   | Asianet News
Published : Nov 15, 2021, 05:11 PM IST

ದುಬೈ: ಯುಎಇನಲ್ಲಿ ನಡೆದ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು (ICC T20 World Cup) ಯಶಸ್ವಿಯಾಗಿ ಮುಕ್ತಾಯವಾಗಿದ್ದು, ನ್ಯೂಜಿಲೆಂಡ್ (New Zealand Cricket) ಎದುರು 8 ವಿಕೆಟ್‌ಗಳ ಜಯ ಸಾಧಿಸಿದ ಆರೋನ್ ಫಿಂಚ್ (Aaron Finch) ನೇತೃತ್ವದ ಆಸ್ಟ್ರೇಲಿಯಾ (Australia Cricket Team) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು (ICC) 6 ತಂಡಗಳಿಂದ ಒಟ್ಟು 11 ಆಟಗಾರರನ್ನೊಳಗೊಂಡ ಅಮೂಲ್ಯ ಆಟಗಾರರ ತಂಡವನ್ನು ಪ್ರಕಟಿಸಿದೆ. ಅಚ್ಚರಿಯ ಸಂಗತಿಯೆಂದರೆ ಈ ತಂಡದಲ್ಲಿ ಯಾವೊಬ್ಬ ಭಾರತೀಯ ಆಟಗಾರನು ಸ್ಥಾನ ಪಡೆಯಲು ಯಶಸ್ವಿಯಾಗಲಿಲ್ಲ. ಐಸಿಸಿ ಪ್ರಕಟಿಸಿದ ಅಮೂಲ್ಯ ಆಟಗಾರರ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ. ಅವರ ಪ್ರದರ್ಶನ ಹೇಗಿತ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ.  

PREV
112
T20 World Cup: ಅಮೂಲ್ಯ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ ICC

1. ಡೇವಿಡ್ ವಾರ್ನರ್
ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್. ಟೂರ್ನಿಯುದ್ದಕ್ಕೂ ಅಧ್ಭುತ ಪ್ರದರ್ಶನ ತೋರುವುದರೊಂದಿಗೆ ವಾರ್ನರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಾರ್ನರ್‌ 7 ಪಂದ್ಯಗಳನ್ನಾಡಿ 289 ರನ್ ಸಿಡಿಸಿದ್ದರು.

212

2. ಜೋಸ್‌ ಬಟ್ಲರ್
ಇಂಗ್ಲೆಂಡ್ ತಂಡದ ವಿಕೆಟ್‌ ಕೀಪರ್. ಜೋಸ್ ಬಟ್ಲರ್‌ 6 ಪಂದ್ಯಗಳನ್ನಾಡಿ ಒಂದು ಶತಕ ಸಹಿತ 269 ರನ್‌ ಬಾರಿಸಿ ಮಿಂಚಿದ್ದರು. ಐಸಿಸಿ ಅಮೂಲ್ಯ ಆಟಗಾರರ ತಂಡದಲ್ಲಿ ವಾರ್ನರ್ ಜತೆ ಆರಂಭಿಕನಾಗಿ ಸ್ಥಾನ ಪಡೆದಿದ್ದಾರೆ.

312

3. ಬಾಬರ್ ಅಜಂ
ಪಾಕಿಸ್ತಾನ ತಂಡದ ನಾಯಕ ಹಾಗೂ ಐಸಿಸಿ ಆಯ್ಕೆ ಮಾಡಿದ ಅಮೂಲ್ಯ ಆಟಗಾರರ ತಂಡದ ನಾಯಕ ಬಾಬರ್ ಅಜಂ, 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್ ಕೂಡಾ ಹೌದು. ಟೂರ್ನಿಯಲ್ಲಿ ಬಾಬರ್ ಅಜಂ 6 ಪಂದ್ಯಗಳನ್ನಾಡಿ 303 ರನ್‌ ಸಿಡಿಸಿದ್ದರು.

412

4. ಚರಿತ್ ಅಸಲಂಕಾ
ಶ್ರೀಲಂಕಾ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಯುವ ಬ್ಯಾಟರ್ ಚರಿತ್ ಅಸಲಂಕಾ, ಟೂರ್ನಿಯಲ್ಲಿ ಆರು ಪಂದ್ಯಗಳನ್ನಾಡಿ 231 ರನ್‌ ಸಿಡಿಸುವ ಮೂಲಕ ಗಮನ ಸೆಳೆದಿದ್ದರು.

512

5. ಏಯ್ಡನ್‌ ಮಾರ್ಕ್‌ರಮ್‌
ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್‌ ಏಯ್ಡನ್‌ ಮಾರ್ಕ್‌ರಮ್‌ ಟಿ20 ವಿಶ್ವಕಪ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿ 2 ಅರ್ಧಶತಕ ಸಹಿತ 162 ರನ್ ಬಾರಿಸಿದ್ದರು. ತಂಡದ ಉಪಯುಕ್ತ ಸಂದರ್ಭದಲ್ಲಿ ಆಸರೆಯಾಗಿದ್ದರಿಂದ ಮಾರ್ಕ್‌ರಮ್‌ ಅಮೂಲ್ಯ ಆಟಗಾರರನ್ನೊಳಗೊಂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

612
Moeen Ali

6. ಮೋಯಿನ್ ಅಲಿ
ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೋಯಿನ್ ಅಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೂಲ್ಯ ಕಾಣಿಕೆ ನೀಡುವ ಮೂಲಕ ತಂಡ ಸೆಮೀಸ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೋಯಿನ್ ಅಲಿ ಬ್ಯಾಟಿಂಗ್‌ನಲ್ಲಿ ಒಂದು ಅರ್ಧಶತಕ ಸಹಿತ 92 ರನ್ ಹಾಗೂ ಬೌಲಿಂಗ್‌ನಲ್ಲಿ 7 ವಿಕೆಟ್ ಕಬಳಿಸಿ ಮಿಂಚಿದ್ದರು.

712
Wanindu Hasaranga

7. ವನಿಂದು ಹಸರಂಗ
ಲಂಕಾದ ಸ್ಟಾರ್ ಆಲ್ರೌಂಡರ್‌ ವನಿಂದು ಹಸರಂಗ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಬೌಲಿಂಗ್‌ನಲ್ಲಿ ಹಸರಂಗ 8 ಪಂದ್ಯಗಳನ್ನಾಡಿ 16 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

812

8. ಆಡಂ ಜಂಪಾ
ಆಸ್ಟ್ರೇಲಿಯಾದ ಅನುಭವಿ ಲೆಗ್‌ಸ್ಪಿನ್ನರ್ ಆಡಂ ಜಂಪಾ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ವಿಕೆಟ್ ಕಬಳಿಸುವ ಮೂಲಕ ತಂಡ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ತನ್ನದೇ ಆದ ಪಾತ್ರ ನಿಭಾಯಿಸಿದ್ದರು, ಜಂಪಾ 7 ಪಂದ್ಯಗಳಿಂದ 13 ವಿಕೆಟ್ ಕಬಳಿಸಿದ್ದರು.

912
जोश हेजलवुड

9. ಜೋಶ್ ಹೇಜಲ್‌ವುಡ್
ಆಸೀಸ್‌ ಮಾರಕ ವೇಗಿ ಜೋಶ್ ಹೇಜಲ್‌ವುಡ್‌ ಟೂರ್ನಿಯುದ್ದಕ್ಕೂ ಅತ್ಯಂತ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದರು. ಹೇಜಲ್‌ವುಡ್ 7 ಪಂದ್ಯಗಳಿಂದ 11 ವಿಕೆಟ್ ಕಬಳಿಸಿ ಮಿಂಚಿದ್ದರು. 

1012

10. ಟ್ರೆಂಟ್ ಬೌಲ್‌
ಕಿವೀಸ್ ಎಡಗೈ ವೇಗದ ಬೌಲರ್ ಟ್ರೆಂಟ್‌ ಬೌಲ್ಟ್‌, ನ್ಯೂಜಿಲೆಂಡ್ ತಂಡವು ಫೈನಲ್‌ಗೇರುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಬೌಲ್ಟ್ 7 ಪಂದ್ಯಗಳಿಂದ 13 ವಿಕೆಟ್‌ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ವೇಗದ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.

1112

11. ಏನ್ರಿಚ್‌ ನೊಕಿಯೆ
ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾರಕ ವೇಗಿ ಏನ್ರಿಚ್ ನೊಕಿಯೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇವಲ 5 ಪಂದ್ಯಗಳನ್ನಾಡಿ 9 ವಿಕೆಟ್ ಕಬಳಿಸುವ ಮೂಲಕ ಮಿಂಚಿನ ಪ್ರದರ್ಶನ ತೋರಿದ್ದರು.

1212

12ನೇ ಆಟಗಾರನಾಗಿ ಶಾಹೀನ್ ಅಫ್ರಿದಿ
ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ 6 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸುವ ಮೂಲಕ ಅಮೂಲ್ಯ ಆಟಗಾರರ ಪಟ್ಟಿಯಲ್ಲಿ 12 ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.

Read more Photos on
click me!

Recommended Stories