ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಜತೆ ವೆಬ್ ಚಾಟ್‌ನಲ್ಲಿ ಮಾತನಾಡಿದ ಕೊಹ್ಲಿ, ತನ್ನ ತವರು ರಾಜ್ಯದಲ್ಲಿ ತನಗಾದ ನೋವಿನ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಅಧಿಕಾರಿಯೊಬ್ಬರು ತಂದೆಯ ಬಳಿ, ಕೊಹ್ಲಿಯ ಬಳಿ ಅದ್ಭುತ ಪ್ರತಿಭೆಯಿದೆ. ಆದರೆ ಈತ ತಂಡದಲ್ಲಿ ಸೆಲೆಕ್ಟ್ ಆಗಬೇಕಾದರೆ ಸ್ವಲ್ಪ ಕೈಬಿಸಿ(ಲಂಚ) ನೀಡಬೇಕಾಗುತ್ತದೆ ಎಂದು ಆಮಿಷವೊಡ್ಡಿದ್ದರು.
ಆಗ ತಮ್ಮ ತಂದೆ, ಕೊಹ್ಲಿಯ ಬಳಿ ಪ್ರತಿಭೆ ಇದೆ ಎಂದಾದರೆ ಅವರನ್ನು ಆಯ್ಕೆ ಮಾಡಿ, ನಾನಂತು ಅವನನ್ನು ಆಯ್ಕೆ ಮಾಡಲು ಒಂದು ರುಪಾಯಿ ಕೂಡಾ ನೀಡುವುದಿಲ್ಲ ಎಂದು ಹೇಳಿದ್ದರಂತೆ.
ಇದಾದ ಬಳಿಕ ನಾನು ಜೂನಿಯರ್ ತಂಡಕ್ಕೆ ಆಯ್ಕೆಯಾಗಲಿಲ್ಲ. ನನ್ನ ಕನಸು ಭಗ್ನವಾದಂತೆ ಆಗಿತ್ತು. ತಂಡದಲ್ಲಿ ಸ್ಥಾನ ಪಡೆಯಲಿಲ್ಲವಲ್ಲ ಎಂದು ನಾನು ದಿನವಿಡೀ ಕಣ್ಣೀರು ಹಾಕಿದ್ದೆ ಎಂದು ವಿರಾಟ್ ಕೊಹ್ಲಿ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಈ ಒಂದು ಘಟನೆ ನನಗೆ ಸಾಕಷ್ಟು ಪಾಠವನ್ನು ಕಲಿಸಿತು ಎಂದ ಕೊಹ್ಲಿ
ಈ ಜಗತ್ತೇ ಹೀಗೆ, ನೀನು ಯಶಸ್ವಿಯಾಗಬೇಕೆಂದರೆ ಬೇರೆಯವರಿಗಿಂತ ಹೆಚ್ಚು ಶ್ರಮ ಪಡಬೇಕು.
ನನ್ನ ಕಠಿಣ ಪರಿಶ್ರಮದಿಂದಾಗಿ ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ. ನನ್ನ ತಂದೆಯ ನಡುವಳಿಕೆ ಹಾಗೂ ಸಂದೇಶ ನನ್ನನ್ನು ಒಳ್ಳೆಯ ದಾರಿಯಲ್ಲಿ ನಡೆಯಲು ಪ್ರೇರೇಪಿಸಿತು. ಅವರ ಸ್ಪೂರ್ತಿಯ ಮಾತುಗಳು ನನ್ನ ಮೇಲೆ ಆಗಾಧ ಪರಿಣಾಮ ಬೀರಿದವು ಎಂದು ಕೊಹ್ಲಿ ಹೇಳಿದ್ದಾರೆ.