ಟೀಮ್‌ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮ ಬಳಿ ಇರುವ 7 ದುಬಾರಿ ವಸ್ತುಗಳಿವು!

Published : Apr 18, 2024, 04:42 PM IST

ಟೀಮ್‌ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮ ಹಲವು ದುಬಾರಿ ವಸ್ತುಗಳ ಮಾಲೀಕ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿರುವ ರೋಹಿತ್‌ ಶರ್ಮ ಅವರ ಬಳಿಕ ಇರುವ 7 ದುಬಾರಿ ವಸ್ತುಗಳ ಲಿಸ್ಟ್‌ ಇಲ್ಲಿದೆ.

PREV
111
ಟೀಮ್‌ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮ ಬಳಿ ಇರುವ 7 ದುಬಾರಿ ವಸ್ತುಗಳಿವು!
Rohit Sharma

ಹಿಟ್‌ಮ್ಯಾನ್‌ ಎನ್ನುವ ಹೆಸರೇ ಭಾರತೀಯ ಕ್ರಿಕೆಟ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್‌. ಕ್ರಿಕೆಟ್‌ ಆಡುವುದರಿಂದಲೇ ರೋಹಿತ್‌ ಶರ್ಮ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಹಣ ಗಳಿಸುತ್ತಾರೆ.

211

ಕ್ರಿಕೆಟ್‌ ಹೊರತಾಗಿ ರೋಹಿತ್‌ ಶರ್ಮ ಅವರ ಆದಾಯದ ದೊಡ್ಡ ಮೂಲ ಜಾಹೀರಾತುಗಳು. ಪ್ರಸ್ತುತ ರೋಹಿತ್‌ ಶರ್ಮ 24 ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.

311

ಕ್ರೋಲ್‌ ಸೆಲಬ್ರಿಟಿ ಬ್ರ್ಯಾಂಡ್‌ ವ್ಯಾಲ್ಯುವೇಷನ್‌ ಸ್ಟಡಿ ಪ್ರಕಾರ 2021ರಲ್ಲಿ ರೋಹಿತ್‌ ಶರ್ಮ ಅವರ ಬ್ರ್ಯಾಂಡ್‌ ಮೌಲ್ಯ 26 ಮಿಲಿಯನ್‌ ಯುಎಸ್‌ ಡಾಲರ್‌ ಆಗಿತ್ತು.

411

ಇದರೊಂದಿಗೆ ರೋಹಿತ್‌ ಶರ್ಮ ಕೆಲವು ದುಬಾರಿ ವಸ್ತುಗಳಿಗೂ ಮಾಲೀಕರಾಗಿದ್ದಾರೆ. ಅವರು ಹೊಂದಿರುವ ಪ್ರಮುಖ ಐಷಾರಾಮಿ ಆಸ್ತಿಗಳು ಇಲ್ಲಿದೆ.

511

ರೋಹಿತ್‌ ಶರ್ಮ ಅವರ ಬಳಿ ಕಡಿಮೆ ಎಂದರೂ 100ಕ್ಕೂ ಅಧಿಕ ವಾಚ್‌ಗಳಿವೆ. ಇದರಲ್ಲಿ ಅತ್ಯಂತು ದುಬಾರಿ ವಾಚ್‌ ಹುಬೋಲ್ಟ್‌ ಫೆರಾರಿ ಯುನಿಕೋ ಮ್ಯಾಜಿಕ್‌ ಗೋಲ್ಡ್‌. ಈ ವಾಚ್‌ನ ಬೆಲೆ 27.8 ಲಕ್ಷ ರೂಪಾಯಿ

611

ಇದರೊಂದಿಗೆ ರೋಹಿತ್‌ ಶರ್ಮ 2019ರಲ್ಲಿ ಭಾರತದಲ್ಲಿ ಲಾಂಚ್‌ ಆದ ಬಿಎಂಡಬ್ಲ್ಯು 350ಎಲ್‌ ಕಾರ್‌ಅನ್ನೂ ಹೊಂದಿದ್ದರೆ. ಇದರ ಬೆಲೆ 80 ಲಕ್ಷ ರೂಪಾಯಿ.

711

ಮರ್ಸಿಡೀಸ್ ಜಿಎಲ್‌ಎಸ್‌ 350 ಡಿ ಕಾರ್‌ಗೂ ರೋಹಿತ್‌ ಶರ್ಮ ಮಾಲೀಕರಾಗಿದ್ದಾರೆ. ಈ ಕಾರ್‌ಅನ್ನು ಖರೀದಿ ಮಾಡಿದ ವೇಳೆ 95 ಲಕ್ಷ ರೂಪಾಯಿ ಮೌಲ್ಯ ಹೊಂದಿತ್ತು.

811

ಕಳೆದ ಕೆಲವು ವಾರಗಳವರೆಗೂ 1.33 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಎಂ5 ಕಾರು ರೋಹಿತ್‌ ಶರ್ಮ ಅವರ ಗ್ಯಾರೇಜ್‌ನಲ್ಲಿದ್ದ ಅತ್ಯಂತ ದುಬಾರಿ ಕಾರು ಎನಿಸಿತ್ತು.

911

ತೀರಾ ಇತ್ತೀಚೆಗೆ ರೋಹಿತ್‌ ಶರ್ಮ ಲ್ಯಾಂಬೋರ್ಗಿನಿ ಉರುಸ್‌ ಕಾರ್‌ಅನ್ನು ಖರೀದಿ ಮಾಡಿದ್ದಾರೆ. 3.10 ಕೋಟಿ ರೂಪಾಯಿ ಮೌಲ್ಯದ ಈ ಕಾರ್‌,  ರೋಹಿತ್ ಶರ್ಮ ಗ್ಯಾರೇಜ್‌ನ ಅತ್ಯಂತ ದುಬಾರಿ ಕಾರು ಎನಿಸಿದೆ.

1011

ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಪ್ರಾಜೆಕ್ಟ್‌ 'ಡಿಸ್ಕವರಿಯಲ್ಲಿ' ಖಂಡಾಲಾ ಹಾಲಿಡೇ ಹೋಮ್‌ಅನ್ನು ರೋಹಿತ್‌ ಶರ್ಮ ಹೊಂದಿದ್ದಾರೆ. ಇದರ ಮೌಲ್ಯ 5 ಕೋಟಿ ರೂಪಾಯಿ ಆಗಿದೆ.

1111

ಮುಂಬೈನ ವೊರ್ಲಿಯಲ್ಲಿರುವ ಅಹುಜಾ ಟವರ್ಸ್‌ನ 26ನೇ ಮಹಡಿಯಲ್ಲಿ ರೋಹಿತ್‌ ಶರ್ಮ ವಾಸ ಮಾಡುತ್ತಿದ್ದಾರೆ. 4 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನ ಮೌಲ್ಯ 30 ಕೋಟಿ ರೂಪಾಯಿ ಆಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories