ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ ಅಕಾಶ್ ದೀಪ್ ಹೊಸ ಕಾರು ಖರೀದಿ, ಇದರ ಬೆಲೆ ಎಷ್ಟು?

Published : Aug 09, 2025, 08:54 PM IST

ಇಂಗ್ಲೆಂಡ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿ ಮಿಂಚಿದ ಅಕಾಶ್ ದೀಪ್ ಇದೀಗ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಈ ಕಾರು ಯಾವುದು? ಇದರ ಬೆಲೆ ಎಷ್ಟು?

PREV
15

ಟೀಂ ಇಂಡಿಯಾ ವೇಗಿ ಅಕಾಶ್ ದೀಪ್ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆಡಿದ ಮೂರು ಪಂದ್ಯಗಳಿಂದ 13 ವಿಕೆಟ್ ಕಬಳಿಸಿದ್ದರು. ಟೀಂ ಇಂಡಿಯಾದ ಭರ್ಜರಿ ಕಮ್‌ಬ್ಯಾಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬ್ಯಾಟಿಂಗ್‌ನಲ್ಲೂ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಇಂಗ್ಲೆಂಡ್ ಸರಣಿ ಮುಗಿಸಿ ತವರಿಗೆ ಮರಳಿದ ಅಕಾಶ್ ದೀಪ್ ಇದೀಗ ತಮ್ಮ ಬಹುದಿನಗಳ ಕನಸು ನನಸು ಮಾಡಿದ್ದಾರೆ. ಅಕಾಶ್ ದೀಪ್ ತಮ್ಮ ನೆಚ್ಚಿನ ಕಾರು ಖರೀದಿಸಿದ್ದಾರೆ.

25

ಅಕಾಶ್ ದೀಪ್ ಇಂಗ್ಲೆಂಡ್ ಸರಣಿ ಮುಗಿಸಿ ತವರಿಗೆ ಮರಳಿದ ಬೆನ್ನಲ್ಲೇ ತಮ್ಮ ಡ್ರೀಮ್ ಕಾರನ್ನು ಡೆಲಿವರಿ ಪಡೆದುಕೊಂಡಿದ್ದಾರೆ. ಅಕಾಶ್ ದೀಪ್ ಖರೀದಿಸಿದ ಹೊಸ ಕಾರು ಟೋಯೋಟಾ ಫಾರ್ಚುನರ್ ಬ್ಲಾಕ್ ಎಡಿಶನ್. ಅಕಾಶ್ ದೀಪ್ ಈ ಹೊಸ ಕಾರು ಖರೀದಿಸಿ ಮನೆಗೆ ತಂದಿದ್ದಾರೆ. ಇದರ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

35

ಆಕಾಶ್ ದೀಪ್ ಖರೀದಿಸಿ ಟೋಯೋಟಾ ಫಾರ್ಚುನರ್ ಕಾರಿನ ಟಾಪ್ ಮಾಡೆಲ್ ಬೆಲೆ 62 ಲಕ್ಷ ರೂಪಾಯಿ. ದುಬಾರಿ ಎಸ್‌ಯುವಿ ಕಾರನ್ನು ಅಕಾಶ್ ದೀಪ್ ಖರೀದಿಸಿದ್ದಾರೆ. ನನ್ನ ಪ್ರೀತಿಯ ಸದಸ್ಯರೊಂದಿಗೆ ಡ್ರೀಮ್ ಕಾರು ಡೆಲಿವರಿಯಾಗಿದೆ. ಕೀ ಪಡೆದುಕೊಂಡಿದ್ದೇನೆ ಎಂದು ಅಕಾಶ್ ದೀಪ್ ಹೇಳಿಕೊಂಡಿದ್ದಾರೆ.

45

ಅಕಾಶ್ ದೀಪ್ ತಮ್ಮ ಕುಟುಂಬ ಸಮೇತ ಡೀಲರ್ ಬಳಿ ತೆರಳಿ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ. ಪೋಷಕರು ಸೇರಿದಂತೆ ಕುಟುಂಬದ ಆಪ್ತ ವಲಯ ಕಾರು ಡೆಲಿವರಿ ವೇಳೆ ಹಾಜರಿದ್ದರು.ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದಾರೆ. ಹೊಸ ಕಾರಿನ ಮುಂದೆ ಅಕಾಶ್ ದೀಪ್ ಸೇರಿದಂತೆ ಇಡೀ ಕುಟುಂಬ ಫೋಟೋ ಕ್ಲಿಕ್ಕಿಸಿಕೊಂಡಿದೆ.

55

ಅಕಾಶ್ ದೀಪ್ ಹೊಸ ಕಾರು ಖರೀದಿಗೆ ಶುಭಾಶಯಗಳ ಸುರಿಮಳೆಯಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಕ್ರಿಕೆಟಿಗರು, ಅಭಿಮಾನಿಗಳು ಶುಭಕೋರಿದ್ದಾರೆ. ಟೋಯೋಟಾ ಫಾರ್ಚುನರ್ ಕಾರಿನಲ್ಲಿ 2.7 ಲೀಟರ್ ಪೆಟ್ರೋಲ್ ಹಾಗೂ 2.8 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿವೆ. ಇನ್ನು ಗರಿಷ್ಠ ಸುರಕ್ಷತೆ, ಎಬಿಎಸ್, ಏರ್‌ಬ್ಯಾಗ್, ಇಬಿಡಿ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಇದರಲ್ಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories