ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ರಾಯಲ್ಸ್ ಫ್ರಾಂಚೈಸಿ ತೊರೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಸಂಜು ರಾಜಸ್ಥಾನ ರಾಯಲ್ಸ್ ತಂಡ ತೊರೆಯಲು ಕಾರಣವೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ರಾಜಸ್ಥಾನ ರಾಯಲ್ಸ್ ಮಾಲೀಕರು ಹಾಗೂ ನಾಯಕ ಸಂಜು ಸ್ಯಾಮ್ಸನ್ ನಡುವೆ ವೈಮನಸ್ಸು ಮೂಡಿದ್ದು, ತಮ್ಮನ್ನು ತಂಡದಿಂದ ಬಿಡುಗಡೆ ಮಾಡುವಂತೆ ಸಂಜು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
28
ಬ್ಯಾಟಿಂಗ್ ಕ್ರಮಾಂಕದ ಆಯ್ಕೆ ವಿಚಾರದಲ್ಲಿ ಸ್ಯಾಮ್ಸನ್‌ಗೆ ಫ್ರಾಂಚೈಸಿ ಬಗ್ಗೆ ಅಸಮಾಧಾನವಿದೆ. ಹೀಗಾಗಿ ಮುಂದಿನ ವರ್ಷ ರಾಜಸ್ಥಾನ ಪರ ಆಡದಿರಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
38
ಈ ಬಗ್ಗೆ ಫ್ರಾಂಚೈಸಿಯು ವಿವಿಧ ತಂಡಗಳ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ ಯಾವುದೇ ತಂಡ ಸಂಜು ಸ್ಯಾಮ್ಸನ್ ಬದಲು ಬೇರೊಬ್ಬ ಆಟಗಾರನನ್ನು ರಾಜಸ್ಥಾನಕ್ಕೆ ಬಿಟ್ಟುಕೊಡಲು ತಯಾರಿಲ್ಲ.
ರಾಜಸ್ಥಾನಕ್ಕೆ ಸಂಜು ಬದಲು ಬೇರೊಬ್ಬ ಆಟಗಾರ ಅಗತ್ಯವಿದ್ದು, ಕೇವಲ ಹಣಕಾಸಿನ ಒಪ್ಪಂದದ ಮೂಲಕ ಸಂಜುರನ್ನು ಕೈಬಿಡಲು ಒಪ್ಪಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
58
ಈ ನಡುವೆ ಸಂಜು ಸ್ಯಾಮ್ಸನ್‌ರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಆಸಕ್ತಿ ತೋರಿದೆ ಎಂದು ಸುದ್ದಿ ಹರಿದಾಡುತ್ತಿದೆ. ಧೋನಿ ಬಳಿಕ ಮತ್ತೋರ್ವ ಬಲಿಷ್ಠ ವಿಕೆಟ್ ಕೀಪರ್ ಬ್ಯಾಟರ್ ಹೊಂದಲು ಸಿಎಸ್‌ಕೆ ಫ್ರಾಂಚೈಸಿ ಉತ್ಸುಕವಾಗಿದೆ ಎಂದು ವರದಿಯಾಗಿದೆ.
68
ಸಂಜು ಸ್ಯಾಮ್ಸನ್ 2013ರಿಂದ 2015ರವರೆಗೆ ರಾಜಸ್ಥಾನ ರಾಯಲ್ಸ್ ತಂಡ ಪ್ರತಿನಿಧಿಸಿದ್ದರು. ಇದಾದ ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್ ತೆಕ್ಕೆಗೆ ಜಾರಿದ್ದರು. ಇನ್ನು 2021ರಲ್ಲಿ ಮತ್ತೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮರಳಿದ ಸಂಜು, ನಾಯಕನಾಗಿ ಮರು ವರ್ಷವೇ ಫೈನಲ್‌ಗೆ ಕೊಂಡೊಯ್ದಿದ್ದರು.
78
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 14 ಪಂದ್ಯಗಳನ್ನಾಡಿ ಕೇವಲ 4 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದು ನಿರಾಸೆ ಮೂಡಿಸಿತ್ತು.
88
ಶತಾಯಗತಾಯ ಸಂಜು ಸ್ಯಾಮ್ಸನ್ ಅವರನ್ನು ಉಳಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಪ್ರಯತ್ನ ನಡೆಸುತ್ತಿದೆ ಎಂದು ವರದಿಯಾಗಿದೆ. ಸಂಜು ರಾಯಲ್ಸ್ ಪಾಳಯದಲ್ಲಿಯೇ ಉಳಿಯುತ್ತಾರಾ ಅಥವಾ ತಂಡ ತೊರೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ